ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೇಪಾಳ ಮತ್ತು ಟಿಬೆಟ್ ಗಡಿ ಪ್ರದೇಶಗಳಲ್ಲಿ ಉಂಟಾಗಿರುವ ಆಕಸ್ಮಿಕ ಮೇಘಸ್ಫೋಟ ಹಾಗೂ ಭೀಕರ ಪ್ರವಾಹದಿಂದ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ.
ಕನ್ನಡಿಗರ ಭದ್ರತೆ ಮತ್ತು ಕ್ಷೇಮವೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದು, ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು ರಕ್ಷಣಾ ಕಾರ್ಯಗಳನ್ನು ಸಂಘಟಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಸಲ್ಲಿಕೆಗೆ ಗೂಗಲ್ ಫಾರ್ಮ್: ನೇಪಾಳ ಅಥವಾ ಟಿಬೆಟ್‌ನಲ್ಲಿ ಸಿಲುಕಿರುವ ಕನ್ನಡಿಗರು, ಅವರ ಕುಟುಂಬಸ್ಥರು ಅಥವಾ ಟೂರ್ ಆಪರೇಟರ್‌ಗಳು ಸರ್ಕಾರ ಹಂಚಿಕೊಂಡಿರುವ ಗೂಗಲ್ ಫಾರ್ಮ್ ಮೂಲಕ ಅಗತ್ಯ ವಿವರಗಳನ್ನು ಸಲ್ಲಿಸಲು ಕೋರಲಾಗಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ: ತಕ್ಷಣದ ನೆರವಿಗಾಗಿ ರಾಜ್ಯ ಸರ್ಕಾರವು ತುರ್ತು ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ.
ಉಚಿತ ಕರೆ ಸಂಖ್ಯೆ: 1070
ದೂರವಾಣಿ ಸಂಖ್ಯೆ: 080-22253707
ಇಮೇಲ್: [email protected]
ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.




