Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಿವೃತ್ತ ಪ್ರಾಂಶುಪಾಲ, ಸಂಪನ್ಮೂಲ ವ್ಯಕ್ತಿ ವಿ. ಮಲ್ಲೇಶಪ್ಪ ಅವರಿಗೆ ಸನ್ಮಾನ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
‘ಕಂಪಳ ಗೆಳೆಯರ ಬಳಗ’ದ ವತಿಯಿಂದ ನಿವೃತ್ತ ಪ್ರಾಂಶುಪಾಲರು ಹಾಗೂ ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಿ. ಮಲ್ಲೇಶಪ್ಪ ಅವರಿಗೆ ನೆನಪಿನ ಕಾಣಿಕೆಯೊಂದಿಗೆ ಸನ್ಮಾನ ಮಾಡಲಾಯಿತು. 

ಬೆಂಗಳೂರು ನಗರದ ಹೆಣ್ಣೂರು ಬಾಣಸವಾಡಿಯ ಕಾಸ್ಮೋಪಾಲಿಟನ್ ಕ್ಲಬ್‍ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಭೂ ದಾಖಲೆಗಳ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರು ಹಾಗೂ ಬಳಗದ ಅಧ್ಯಕ್ಷರಾದ ವಿ. ಅಜ್ಜಪ್ಪ ವಹಿಸಿದ್ದರು.

Advertisement

ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ಬಳಗದ ಗೌರವಾಧ್ಯಕ್ಷ ರೇವಣ್ಣ ಸಿದ್ಧಪ್ಪ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಬಳಗದ ಸ್ಥಾಪನೆ ಮತ್ತು ಉದ್ದೇಶಗಳನ್ನು ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಮಾತನಾಡಿ, 76 ವರ್ಷದ ವಯಸ್ಸಿನಲ್ಲೂ ವಿ. ಮಲ್ಲೇಶಪ್ಪ ಅವರು ನಿವೃತ್ತಿಯ ನಂತರ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಬೆಂಗಳೂರಿನ ಸಚಿವಾಲಯ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ಸರ್ಕಾರಿ ಅಧಿಕಾರಿ/ನೌಕರರಿಗೆ ಆಡಳಿತ, ಸೇವಾ ಮತ್ತು ಆರ್ಥಿಕ ನಿಯಮಗಳ ಕುರಿತು ಉಪನ್ಯಾಸ ನೀಡುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿ. ಅಜ್ಜಪ್ಪ ಅವರು ಮಲ್ಲೇಶಪ್ಪ ಅವರ ಕರ್ತವ್ಯ ನಿμÉ್ಠ, ಸೇವಾ ಮನೋಭಾವ ಹಾಗೂ ಸರಳತೆಯನ್ನು ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿದ ವಿ. ಮಲ್ಲೇಶಪ್ಪ ಅವರು ಬಳಗದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ನಿವೃತ್ತ ಪ್ರಾಂಶುಪಾಲ ಬಸವರಾಜು, ನಿವೃತ್ತ ಆಂಗ್ಲ ಪ್ರಾಧ್ಯಾಪಕ ರಾಮಣ್ಣ, ವರ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸಿ. ಚಂದ್ರಪ್ಪ, ಗೃಹರಕ್ಷಕ ದಳದ ಆಡಳಿತಾಧಿಕಾರಿ ಆರ್.ಪಿ. ಜಯಣ್ಣ ಹಾಗೂ ನಿವೃತ್ತ ಅಧೀಕ್ಷಕ ನಿರಂಜನ್ ಉಪಸ್ಥಿತರಿದ್ದರು. ತಿಪಟೂರಿನ ನಿವೃತ್ತ ಪ್ರಾಂಶುಪಾಲ ಬಸವರಾಜು ವಂದಿಸಿದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಹರೂ ಮೈದಾನದ ಶಕ್ತಿ ಗಣಪತಿ ಎಕ್ಸಿಬಿಷನ್‌ನಲ್ಲಿ ದುಬಾರಿ ದರ ವಸೂಲಿ – ದಲಿತ ಸ್ವಾಭಿಮಾನಿ ಸಮಿತಿಯಿಂದ ಧರಣಿ ಸತ್ಯಾಗ್ರಹಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನನಿವೃತ್ತ ಪ್ರಾಂಶುಪಾಲ, ಸಂಪನ್ಮೂಲ ವ್ಯಕ್ತಿ ವಿ. ಮಲ್ಲೇಶಪ್ಪ ಅವರಿಗೆ ಸನ್ಮಾನದುರ್ಗದಲ್ಲಿ ತೀವ್ರ ಬರಗಾಲ: ರೈತರ ಅಳಲು ಕೇಳದ ರಾಜ್ಯ ಸರ್ಕಾರ ವಜಾಗೆ ಒತ್ತಾಯ!BFSI ಮತ್ತು ಫಿನ್‌ಟೆಕ್ ವಲಯದ ಪ್ರಗತಿಗೆ ಆದ್ಯತೆ: ಸರ್ಕಾರದ ಜತೆ ಕೈಜೋಡಿಸಿದ ಉದ್ಯಮ ದಿಗ್ಗಜರುಹಿರಿಯೂರು ಜೆಡಿಎಸ್ ಭದ್ರಕೋಟೆಗೆ ಬಿರುಕು: ಕೇವಲ ಚುನಾವಣೆಗಷ್ಟೇ ಸೀಮಿತವೇ ಪಕ್ಷ ಸಂಘಟನೆ?ನೈಸ್ ಅಕ್ರಮ ಮತ್ತು ಟೋಲ್ ಲೂಟಿ: ಸರ್ಕಾರದ ಮೌನದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶರಕ್ತದಾನ ಮಾಡಲು ಹೊರಟಿದ್ದ ಯುವಕರು ರಸ್ತೆ ಅಪಘಾತಕ್ಕೆ ಬಲಿಆದಾಯಕ್ಕಿಂತ ಶೇ.49.5 ಹೆಚ್ಚು ಆಸ್ತಿ: ಮಾಜಿ ಅರಣ್ಯಾಧಿಕಾರಿಗೆ 3 ವರ್ಷ ಜೈಲು, 1.38 ಕೋಟಿ ದಂಡ!ಕಾಂಗ್ರೆಸ್‌ನಿಂದ ‘ಮತ ರಕ್ಷಕ’ ಅಭಿಯಾನ: 13.3 ಕೋಟಿ ಜನರನ್ನು ತಲುಪಲು ಹೊಸ ತಂತ್ರ