Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನೈಸ್ ಅಕ್ರಮ ಮತ್ತು ಟೋಲ್ ಲೂಟಿ: ಸರ್ಕಾರದ ಮೌನದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ

ಚಂದ್ರವಳ್ಳಿ ನ್ಯೂಸ್, ​​ಬೆಂಗಳೂರು:
ನೈಸ್ ರಸ್ತೆ ಯೋಜನೆಯ ಹೆಸರಿನಲ್ಲಿ ರೈತರ ಜಮೀನು ಕಬಳಿಸಿ ಪರಿಹಾರವನ್ನೂ ನೀಡದೆ ಸರ್ಕಾರ ಲೂಟಿಗೆ ಸಹಕರಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮಗಳನ್ನು ಪ್ರಶ್ನಿಸಿದರೆ 'ಅಸೂಯೆಯಿಂದ ಮಾತನಾಡುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡುತ್ತಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. "ನಾವು ಯಾವುದೇ ಅಸೂಯೆ ಅಥವಾ ಬ್ಲ್ಯಾಕ್ ಮೈಲ್ ಮಾಡುತ್ತಿಲ್ಲ. ಅನಧಿಕೃತವಾಗಿ ನೈಸ್ ಸಂಸ್ಥೆ ಟೋಲ್ ಸಂಗ್ರಹಿಸುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ಸರಿಯಲ್ಲ" ಎಂದು ಕಿಡಿಕಾರಿದರು.

​4,756 ಕೋಟಿ ರೂ. ಅಕ್ರಮ ಟೋಲ್ ಸಂಗ್ರಹದ ಆರೋಪ:
ನೈಸ್ ಸಂಸ್ಥೆಯು 1997ರಲ್ಲಿ ಮಾಡಿಕೊಂಡಿದ್ದ 'ಫ್ರೇಮ್ ವರ್ಕ್ ಅಗ್ರಿಮೆಂಟ್' ಅನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದ ಹೆಚ್‌ಡಿಕೆ, "1,583 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ 2008ರಿಂದ 2025ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನೈಸ್ ಸಂಸ್ಥೆ ಸುಮಾರು 4,756 ಕೋಟಿ ರೂಪಾಯಿ ಟೋಲ್ ಸಂಗ್ರಹಿಸಿದೆ. ನಿಯಮ ಮೀರಿ ಅನಧಿಕೃತವಾಗಿ ಸುಂಕ ವಸೂಲಿ ಮಾಡುತ್ತಿರುವುದು ಸಂಪೂರ್ಣ ಕಾನೂನುಬಾಹಿರ" ಎಂದು ತಿಳಿಸಿದರು.

Advertisement

​ರೈತರ ಭೂಮಿ ಕಬಳಿಕೆ ಮತ್ತು ಬದಲಾವಣೆಗಳು:
ಯೋಜನೆಯ ಇತಿಹಾಸವನ್ನು ಸ್ಮರಿಸಿದ ಕುಮಾರಸ್ವಾಮಿ, 1997ರಲ್ಲಿ ಹೆಚ್.ಡಿ. ದೇವೇಗೌಡರು ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಪ್ರಾರಂಭದಲ್ಲಿ 40 ಕಿ.ಮೀ ಫೆರಿಫೆರಲ್ ರಸ್ತೆಗಾಗಿ 2,193 ಎಕರೆ ಭೂಮಿಯ ಪ್ರಸ್ತಾಪವಿತ್ತು. ಆದರೆ ನಂತರ ಲಿಂಕ್ ರಸ್ತೆ, ಸರ್ವೀಸ್ ರಸ್ತೆ ಹಾಗೂ ಟೋಲ್ ಪ್ಲಾಜಾಗಳು ಸೇರಿದಂತೆ ಒಟ್ಟು 6,999 ಎಕರೆ ಬೇಕೆಂದು ವಿಸ್ತರಿಸಲಾಯಿತು. ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ಚರ್ಚೆ ನಡೆಸದೇ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಹಾಗೂ ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ಸರ್ಕಾರದ ಅನುಮತಿಯಿಲ್ಲದೆ ಸಂಸ್ಥೆಯು ಹಲವು ಮಾರ್ಪಾಡುಗಳನ್ನು ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

​ಸದನ ಸಮಿತಿ ವರದಿ ಮತ್ತು ನ್ಯಾಯಾಲಯದ ಟೀಕೆ:
ಈ ಹಿಂದೆ ಟಿ.ಬಿ. ಜಯಚಂದ್ರ ಅವರ ಅಧ್ಯಕ್ಷತೆಯ ಸದನ ಸಮಿತಿಯು ನೈಸ್ ಯೋಜನೆಯನ್ನು ರದ್ದುಪಡಿಸುವಂತೆ ಶಿಫಾರಸು ಮಾಡಿ ವರದಿ ನೀಡಿತ್ತು. ಆದಾಗ್ಯೂ ಸರ್ಕಾರ ಈ ಯೋಜನೆಯನ್ನು ಮುಂದುವರಿಸಲು ಹಠ ಹಿಡಿಯುತ್ತಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದರು. ಅಲ್ಲದೆ, ಹೈಕೋರ್ಟ್ ಈ ಹಿಂದೆ ನೈಸ್ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ಮತ್ತು ಫೋರೆನ್ಸಿಕ್ ಆಡಿಟ್ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋದರೂ ತಡೆಯಾಜ್ಞೆ ಸಿಕ್ಕಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿದರು.

​ಸಚಿವರಿಗೆ ಹೆದರಿಕೆ ಹುಟ್ಟಿಸುವ ಕೆಲಸ ನನ್ನದಲ್ಲ:
ಕಾಂಗ್ರೆಸ್ ಸಚಿವರಿಗೆ 'ಸ್ಟಿಂಗ್ ಆಪರೇಷನ್' ಭೀತಿ ವ್ಯಕ್ತಪಡಿಸಿದ್ದ ಸಿಎಂ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಸಿಎಂಗೆ ತಮ್ಮದೇ ಮಂತ್ರಿಗಳ ಮೇಲೆ ವಿಶ್ವಾಸವಿಲ್ಲವೇ? ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರಿಕೆ ಕೊಡುವ ಬದಲು ತಮ್ಮ ಆಡಳಿತ ಹೇಗೆ ನಡೆಯುತ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಹಳೆಯ ಕಡತಗಳನ್ನು ತೆಗೆಸಿ ತನಿಖೆ ಮಾಡಿಸುವುದು ನನ್ನ ಕೆಲಸವೇ ಹೊರತು, ಲೈಟ್, ಬ್ಯಾಟರಿ ಹಿಡಿದು ಸ್ಟಿಂಗ್ ಆಪರೇಷನ್ ಮಾಡುವ ಜಾಯಮಾನ ನನ್ನದಲ್ಲ" ಎಂದು ಸ್ಪಷ್ಟಪಡಿಸಿದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಹರೂ ಮೈದಾನದ ಶಕ್ತಿ ಗಣಪತಿ ಎಕ್ಸಿಬಿಷನ್‌ನಲ್ಲಿ ದುಬಾರಿ ದರ ವಸೂಲಿ – ದಲಿತ ಸ್ವಾಭಿಮಾನಿ ಸಮಿತಿಯಿಂದ ಧರಣಿ ಸತ್ಯಾಗ್ರಹಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನನಿವೃತ್ತ ಪ್ರಾಂಶುಪಾಲ, ಸಂಪನ್ಮೂಲ ವ್ಯಕ್ತಿ ವಿ. ಮಲ್ಲೇಶಪ್ಪ ಅವರಿಗೆ ಸನ್ಮಾನದುರ್ಗದಲ್ಲಿ ತೀವ್ರ ಬರಗಾಲ: ರೈತರ ಅಳಲು ಕೇಳದ ರಾಜ್ಯ ಸರ್ಕಾರ ವಜಾಗೆ ಒತ್ತಾಯ!BFSI ಮತ್ತು ಫಿನ್‌ಟೆಕ್ ವಲಯದ ಪ್ರಗತಿಗೆ ಆದ್ಯತೆ: ಸರ್ಕಾರದ ಜತೆ ಕೈಜೋಡಿಸಿದ ಉದ್ಯಮ ದಿಗ್ಗಜರುಹಿರಿಯೂರು ಜೆಡಿಎಸ್ ಭದ್ರಕೋಟೆಗೆ ಬಿರುಕು: ಕೇವಲ ಚುನಾವಣೆಗಷ್ಟೇ ಸೀಮಿತವೇ ಪಕ್ಷ ಸಂಘಟನೆ?ನೈಸ್ ಅಕ್ರಮ ಮತ್ತು ಟೋಲ್ ಲೂಟಿ: ಸರ್ಕಾರದ ಮೌನದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶರಕ್ತದಾನ ಮಾಡಲು ಹೊರಟಿದ್ದ ಯುವಕರು ರಸ್ತೆ ಅಪಘಾತಕ್ಕೆ ಬಲಿಆದಾಯಕ್ಕಿಂತ ಶೇ.49.5 ಹೆಚ್ಚು ಆಸ್ತಿ: ಮಾಜಿ ಅರಣ್ಯಾಧಿಕಾರಿಗೆ 3 ವರ್ಷ ಜೈಲು, 1.38 ಕೋಟಿ ದಂಡ!ಕಾಂಗ್ರೆಸ್‌ನಿಂದ ‘ಮತ ರಕ್ಷಕ’ ಅಭಿಯಾನ: 13.3 ಕೋಟಿ ಜನರನ್ನು ತಲುಪಲು ಹೊಸ ತಂತ್ರ