Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಮಾನ ದುರಂತ ತಪ್ಪಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್: ಪ್ರಧಾನಿ ಮೋದಿ ಜೊತೆ ಭಾವನಾತ್ಮಕ ಮಾತು!

ಚಂದ್ರವಳ್ಳಿ ನ್ಯೂಸ್, ವಾಷಿಂಗ್ಟನ್:
ದುಬೈನಿಂದ ಟೆಲ್‌ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನವನ್ನು ಪತನಗೊಳಿಸಲು ಸಹ ಪೈಲಟ್‌‌ನಡೆಸಿದ್ದ ಸಂಚನ್ನು ವಿಫಲಗೊಳಿಸಿ, ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಸಾಹಸಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿಡಿಯೋ ಕಾಲ್‌ಮೂಲಕ ಮಾತನಾಡಿದ್ದಾರೆ.

ಈ ವೇಳೆ ದುರಂತದ ಭೀಕರ ಕ್ಷಣಗಳನ್ನು ನೆನಪಿಸಿಕೊಂಡಿರುವ ಅವರು, ಆ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ತಾನು 'ಹನುಮಾನ್‌ಚಾಲೀಸಾ' ಪಠಿಸುತ್ತಿದ್ದೆ ಎಂದು ತಿಳಿಸಿದ್ದಾರೆ.

Advertisement

ಮತ್ತೊಂದೆಡೆ, ಈ ವಿಮಾನ ಹೈಜಾಕ್‌ಪ್ರಯತ್ನದ ಹಿಂದೆ ಇರಾನ್‌ಕೈವಾಡವಿರಬಹುದು ಎಂಬ ಗಂಭೀರ ಶಂಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ವ್ಯಕ್ತಪಡಿಸಿದ್ದಾರೆ.

ʼಆ ಕ್ಷಣದಲ್ಲಿ ನಾನು ಹನುಮಾನ್‌ಚಾಲೀಸಾ ಪಠಿಸುತ್ತಿದ್ದೆʼ: ಕ್ಯಾಪ್ಟನ್ ಸ್ಮಿತ್‌ಮಚ್ಚಾರ್‌ಫ್ಲೈದುಬೈ ವಿಮಾನದಲ್ಲಿದ್ದ ಸಹ ಪೈಲಟ್‌ನ ಹಲ್ಲೆಯಿಂದ (ಚಾಕು ಇರಿತ) ಗಂಭೀರವಾಗಿ ಗಾಯಗೊಂಡು, ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್ ಸ್ಮಿತ್‌ಮಚ್ಚಾರ್ ಶುಕ್ರವಾರ (ಅ.02) ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಪ್ರಧಾನಿ ಜೊತೆ ಮಾತನಾಡುತ್ತಾ ಭೀಕರ ಕ್ಷಣಗಳನ್ನು ಸ್ಮರಿಸಿಕೊಂಡ ಸ್ಮಿತ್, "ಆ ಸಂದರ್ಭದಲ್ಲಿ ನಾನು ಗಂಭೀರವಾಗಿ ಗಾಯಗೊಂಡಿದ್ದೆ ಮತ್ತು ನನ್ನ ಜೀವಕ್ಕಾಗಿ ಹೋರಾಡುತ್ತಿದ್ದೆ. ಆದರೆ, ಆ ಕ್ಷಣದಲ್ಲಿ ನಾನು ಧೈರ್ಯ ಕಳೆದುಕೊಂಡರೆ ವಿಮಾನದಲ್ಲಿದ್ದ ಸುಮಾರು 170ಕ್ಕೂ ಅಧಿಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಾರೆ ಎಂಬುದು ನನಗೆ ಅರಿವಾಯಿತು. ಹೀಗಾಗಿ ಹೇಗಾದರೂ ಮಾಡಿ ಕಾಕ್‌ಪಿಟ್‌ಬಾಗಿಲು ತೆರೆದು ಹೋರಾಡಿದೆ. ನನಗೆ ಯಾವುದೇ ಸಂಕಷ್ಟ ಎದುರಾದರೂ ಹನುಮಾನ್‌ಚಾಲೀಸಾ ಪಠಿಸುವುದು ರೂಢಿ. ಅದರಂತೆ ಆ ಬಿಕ್ಕಟ್ಟಿನ ಸಮಯದಲ್ಲೂ ನಾನು ಹನುಮಾನ್‌ಚಾಲೀಸಾ ಜಪಿಸುತ್ತಿದ್ದೆ. ಭಗವಾನ್ ಹನುಮಂತನೇ ನನಗೆ ಆ ಧೈರ್ಯವನ್ನು ನೀಡಿದನು" ಎಂದು ಭಾವುಕರಾಗಿ ನುಡಿದರು.

ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ತಮ್ಮ 'ಅತಿದೊಡ್ಡ ರೋಲ್‌ಮಾಡೆಲ್' ಎಂದು ಬಣ್ಣಿಸಿದ ಅವರು, ಕಳೆದ 17 ವರ್ಷಗಳಿಂದ ವಿಮಾನ ಹಾರಾಟ ನಡೆಸುತ್ತಿದ್ದು, ಕಣ್ಣು ಮುಚ್ಚಿದರೂ ವಿಮಾನದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಗ್ರಹಿಸಬಲ್ಲೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಕ್ಯಾಪ್ಟನ್ ಸ್ಮಿತ್‌ಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ:
ಭಾರತೀಯ ಪೈಲಟ್‌ನ ಅಸಾಧಾರಣ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ
, "ನಿಮ್ಮ ಧೈರ್ಯದ ಕುರಿತು ಇಡೀ ದೇಶವೇ ಹೆಮ್ಮೆಪಡುತ್ತದೆ. ನಾನು ಈಗಾಗಲೇ ನಿಮ್ಮ ಪತ್ನಿ ಮತ್ತು ಪೋಷಕರೊಂದಿಗೆ ಮಾತನಾಡಿದ್ದೇನೆ. ನೀವು ಆದಷ್ಟು ಬೇಗ ಗುಣಮುಖರಾಗಿ ಮನೆಗೆ ಮರಳುವುದನ್ನು ನೋಡಲು ಭಾರತ ಕಾತರದಿಂದ ಕಾಯುತ್ತಿದೆ" ಎಂದು ಧೈರ್ಯ ತುಂಬಿದರು.

ಫ್ಲೈದುಬೈ ವಿಮಾನ ಹೈಜಾಕ್ ಯತ್ನ: ಇರಾನ್ ಕೈವಾಡ ಶಂಕೆ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್ ಈ ವಿಮಾನ ಹೈಜಾಕ್ ಮತ್ತು ದುಷ್ಕೃತ್ಯದ ಹಿಂದೆ ಭಯೋತ್ಪಾದನಾ ನಂಟಿರುವ ಕುರಿತು ತನಿಖೆ ಮುಂದುವರಿದಿದ್ದು, ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌‌ಟ್ರಂಪ್, ಈ ದುರಂತ ಯತ್ನಕ್ಕೂ ಇರಾನ್‌ಗೂ ನೇರ ಲಿಂಕ್‌ಇರುವ ಸಾಧ್ಯತೆಯಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೃತ್ಯವೆಸಗಲು ಮುಂದಾದ ಒಮಾನ್ ಮೂಲದ ವ್ಯಕ್ತಿಗೆ ಇರಾನ್‌ನ ನಂಟಿರುವ ಶಂಕೆಯಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಈ ಕೃತ್ಯದ ಹಿಂದೆ ಇರಾನ್ ಕೈವಾಡವಿರುವುದು ಅಧಿಕೃತವಾಗಿ ಸಾಬೀತಾದರೆ, ಅವರು ತೀವ್ರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಮಾನದೊಳಗೆ ಇದ್ದ ಇಸ್ರೇಲಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು, ಅಮೆರಿಕದ 9/11 ಮಾದರಿಯಲ್ಲಿ ಈ ದಾಳಿ ನಡೆಸಲು ಯತ್ನಿಸಲಾಗಿತ್ತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೊದಲಿನಿಂದಲೂ ಆರೋಪಿಸುತ್ತ ಬಂದಿದ್ದು, ಈಗ ಟ್ರಂಪ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಇರಾನ್ ಈ ಆರೋಪಗಳ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ತಮ್ಮದೇ ಪ್ರಜೆಯಿಂದ ಇಂತಹ ದುಷ್ಕೃತ್ಯ ನಡೆದಿದ್ದರೂ ಒಮಾನ್ ಸರ್ಕಾರ ಈವರೆಗೆ ಅಧಿಕೃತವಾಗಿ ತುಟಿಬಿಚ್ಚಿಲ್ಲ. ಸದ್ಯ ದುಬೈ ಮತ್ತು ಸಂಬಂಧಿತ ಪ್ರಾಧಿಕಾರಗಳು ಇದರ ತನಿಖೆ ಮುಂದುವರಿಸಿವೆ.  

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಬಿಂದುರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಆರ್.ರಾಜಣ್ಣಜೆಡಿಎಸ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಭೀಮಸಮುದ್ರದ ಜಿ.ಎಸ್.ಮಂಜುನಾಥ್ ಮಾತನಾಡಿದರುಎನ್.ಎಸ್.ಶಂಕರ್ ಸೇರಿ ಅಗಲಿದ ಪತ್ರಕರ್ತರಿಗೆ ಕೆಯುಡಬ್ಲೂಜೆಯಲ್ಲಿ ಇಂದು ನುಡಿ ನಮನಕಾಂಗ್ರೆಸ್‌ನಲ್ಲಿ ಗುರು-ಶಿಷ್ಯರ ರಾಜಕೀಯ ಸಮರ: ಪ್ರದೀಪ್‌ಈಶ್ವರ್‌vs ಡಾ. ಸುಧಾಕರ್‌ಕದನ ತೀವ್ರ!ವಿಮಾನ ದುರಂತ ತಪ್ಪಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್: ಪ್ರಧಾನಿ ಮೋದಿ ಜೊತೆ ಭಾವನಾತ್ಮಕ ಮಾತು!ಮುಖ್ಯಮಂತ್ರಿ ಹಾಗೂ ಸಚಿವರ ಪ್ರತಿಭಟನೆ: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪಿಸಿ ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರುಚುನಾವಣಾ ಆಯೋಗದ ವಿರುದ್ಧ ಮುಂಬೈ ಹಾಗೂ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ: ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಬಿಎನ್‌ಎಸ್‌ಎಸ್ ಸೆಕ್ಷನ್ 163 ಜಾರಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಗೆ ಅನುಮತಿ ನಿರಾಕರಣೆ