Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸರ್ಕಾರಿ ಜಮೀನನ್ನು ಕಬಳಿಸಲು ಹುನ್ನಾರ: ಭೂಗಳ್ಳರ ವಿರುದ್ಧ ಕ್ರಮಕ್ಕೆ ಒತ್ತಾಯ

ಚಂದ್ರವಳ್ಳಿ ನ್ಯೂಸ್,  ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿಯ ನಂದಿಗುದ ಗ್ರಾಮದಲ್ಲಿ ಸುಮಾರು 60-70ವರ್ಷಗಳ ಕಾಲದಿಂದಲು ನಮ್ಮ ತಾತ ನವರ ಕಾಲದಿಂದಲೂ ಜಮೀನನಲ್ಲಿ ವ್ಯವಸಾಯ ಮಾಡುತ್ತಾ  ಬಂದಿರುವಂತಹ ಗೂಳ್ಯ ನಂದಿಗುಂದ ಗ್ರಾಮದ ಸರ್ವೆ ನಂ 28 ಹೊಸ ಸರ್ವೆ ನಂ 181 ರಲ್ಲಿ 4-02 ಎ/ಗುಂಟೆ, 182 ರಲ್ಲಿ 4-06 ಎ/ಗುಂಟೆ ಮತ್ತು ಸರ್ವೆ ನಂ. 30 ರಲ್ಲಿ 4 ಎಕರೆ 30 ಗುಂಟೆ ಜಮೀನಿನಲ್ಲಿ ಬೆಳೆ ಬೆಳೆಯುವ ಮುಖಾಂತರ ಜೀವನ ಸಾಗಿಸುತ್ತಾ ಬರುತ್ತಿದ್ದೆವೆ.ಯಾರೋ ಬೇರೆ ಒಬ್ಬ  ವ್ಯಕ್ತಿ ಬಂದು ನನ್ನದು ಜಮೀನು ಎಂದು ಹೇಳಿ  ನಮ್ಮಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ನಂದಗುಂದ ವೆಂಕಟೇಶ ಆರೋಪಿಸಿದ್ದಾರೆ.

ನಮ್ಮ ಕುಟುಂಬ 60–70 ವರ್ಷಗಳಿಂದ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಅನಾಮಿಕ ಭೂ ಮಾಪಿಯಾಗಳು ಬಂದು ನಮ್ಮನ್ನು ಓಕ್ಕಲೆಬ್ಬಿಸಲು ಹುನ್ನಾರುಗಳನ್ನು ನಡೆಸುತ್ತಿದ್ದಾರೆ.
1969-70ರಲ್ಲಿ ದೊಡ್ಡಬಳ್ಳಾಪುರ ನಗರದಲ್ಲಿ ವಾಸಿಸುತ್ತಿದ್ದ ಐವರಿಗೆ ಸರ್ಕಾರದಿಂದ 20-20 ಗುಂಟೆ  ಜಮೀನು ಮುಂಜೂರು ಮಾಡಲಾಗಿತ್ತು. ಅದರೆ  ಮುಂಜೂರಾದ ಜಮೀನಲ್ಲಿ   ಯಾವುದೆ  ರೀತಿ ಕೃಷಿ ಚಟುವಟಿಕೆ ನಡೆಸದೆ  1976ರಲ್ಲಿ ಐದು ಜನ ಸೇರಿ ದಾಸರಥಿ ಎಂಬುವರಿಗೆ ಕ್ರಯ ಮಾಡಲಾಗಿದ್ದು ಅವರು ಸಹ ಜಮೀನಿನಲ್ಲಿ ಸಾಗವಳಿ  ಹಾಗು ಕೃಷಿ ಚಟುವಟಿಕೆ ಮಾಡದಿರುವುದು  ಕಂಡು ಬಂದಿದ್ದು  1994ರಲ್ಲಿ ಸರ್ಕಾರದ ಅಧಿಕಾರಿಗಳು ಬಂದು ಸ್ಥಳ ಪರೀಶೀಲನೆ ಮಾಡಿದಾಗ ಅನುಭವದಲ್ಲಿ ಬೇರೆಯವರು ಇರುವುದು ಕಂಡು  ಅಗ  ಸರ್ಕಾರಕ್ಕೆ ಪತ್ರ ಬರೆದು ನಂತರ 1995-96ರಲ್ಲಿ ಖಾತೆದಾರರ ಹೆ‌ಸರು ವಜಾ ಮಾಡಲಾಗಿದೆ.
ತದನಂತರ 2023ರ ವರೆವಿಗೂ ಸಂಬಂದ ಪಟ್ಟವರು ನಮಗೆ ಜಮೀನು ಬೇಕು ಎಂದು ನ್ಯಾಯಾಲಯಕ್ಕಾಗಲಿ  ಅಥವಾ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ. ಆಗ 20-20ಗುಂಟೆ ಜಮೀನನ್ನು ಸರ್ಕಾರ ವಶ ಮಾಡಿಕೊಂಡಿದೆ.ಮತ್ತೆ ಮುಂಜೂರುದಾರು  ನಮಗೆ ಜಮೀನು ಬೇಕು ಎಂದಾಗ ಆಗಿನ ಅಧಿಕಾರಿಗಳು ಸ್ಥಳ ತನಿಖೆ ಮಾಡಿದಾಗ ಈ ಜಮೀನಿಂದ ಸುಮಾರು 18-20 ಕೀಲೋ ಮೀಟರ್ ದೂರ ಇರುವುದರಿಂದ ನಿಮಗೆ ಜಮೀನು ಮುಂಜೂರು ಮಾಡಲು ಸಾದ್ಯವಿಲ್ಲವೆಂದು ವಜಾ ಮಾಡಲಾಗಿರುತ್ತದೆ.ಆಗ ನಮ್ಮ ಕುಟಂಬದವರಾದ ಶ್ರೀನಿವಾಸ್ /ಪಿಳ್ಳಪ್ಪ ಎಂಬುವರು ಸರ್ವೆ 182ರಲ್ಲಿ 4.00 ಎಕರೆ   ಮತ್ತೆ ಸರ್ವೆ ನಂಬರ್ 181ರಲ್ಲಿ ವೆಂಕಟಮ್ಮ ಕೊಂ ನಾರಾಯಣಪ್ಪ ಎಂಬುವರು ವ್ಯವಸಾಯ ಮಾಡುತ್ತಾ ಅನುಭವದಲ್ಲಿರುತ್ತಾರೆ.ನಂತರ 2023-24ರಲ್ಲಿ ಸಂಜಯ್ ಕುಮಾರ್ ಸವಿತ ಎಂಬುವರು ಜಮೀನು ಪಡೆಯಲು  ಜಾತಿ ಪ್ರಮಾಣ ಪತ್ರವನ್ನು ಬದಲು ಮಾಡಿ ಜಮೀನು ಮುಂಜೂರು ಮಾಡಲು ಹೋದಾಗ ನಾವು ಅವರ ವಿರುದ್ದ ಸುಳ್ಳು ಜಾತಿ ಪ್ರಮಾಣ ಪತ್ರ ಎಂಬುದು ಕಂಡು ಅವರ ಮೇಲೆ ಕ್ರಮ ಕೈಗೊಳ್ಳಲು ದೂರು  ನೀಡಿದ್ದು,ಅವರ ವಿರುದ್ದ ಕ್ರಿಮಿನಲ್  ಪ್ರಕರಣ ದಾಖಲಾಗಿರುತ್ತದೆ. ಇದರಿಂದ     ನಾವುಗಳು ಈ ಜಮೀನಲ್ಲಿ ಬೇಸಾಯ ಮಾಡಿಕೂಂಡು ಜೀವನ ನಡೆಸುತ್ತಿದ್ದೇವೆ. ಪ್ರಸ್ತುತ ಅನಾಮಿಕರು 
ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿರುವುದು  ಕಂಡು ನಮಗೆ ರಕ್ಷಣೆ ಕೊಡಬೇಕು.ಹಾಗು ಸರ್ಕಾರ ಭೂ ಕಬಳಿಕೆದಾರರ ಪರವಾಗಿ ಹೋರಾಟ ಮಾಡುತ್ತಿರುವ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಕೆಲ ಸಂಘಟನೆಗಳ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ.ಈವರೆಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಅಲ್ಲದೆ ಎಫ್ ಐ ಆರ್ ಕೂಡ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ.ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು.
ಜೊತೆಗೆ 
  ಫಾರಂ ನಂ. 50, 53, 57 ಅರ್ಜಿ ಹಾಕಿಕೊಂಡಿರುವ ನಮ್ಮ ಕುಟುಂಬದ ಅರ್ಜಿದಾರರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು. ಸುಮಾರು  60-70 ವರ್ಷಗಳಿಂದ ಸ್ವಾಧೀನದಲ್ಲಿರುವವರು   ಜಮೀನಿನಲ್ಲಿ ಬೆಳೆಯನ್ನು ಬೆಳೆದುಕೊಂಡು ಜೀವನ ಮಾಡುತ್ತಿರುವ ರೈತರನ್ನು  ಒಕ್ಕಲೆಬ್ಬಿಸಿ ಭೂಗಳ್ಳರು ಕಬಳಿಸಲು  ಹುನ್ನಾರ ನಡೆಸುತ್ತಿರುವ ಜಮೀನನ್ನು   ಕೂಡಲೇ ಸರ್ಕಾರ  ವಶಕ್ಕೆ ಪಡೆದುಕೊಳ್ಳಬೇಕು. ಪ್ರಸ್ತುತ ಸ್ವಾಧೀನದಲ್ಲಿರುವ ರೈತರಿಗೆ ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದರು.
 ಈ ವೇಳೆ ಈ ವೇಳೆ ಅಂಬೇಡ್ಕರ್ ಸೇನೆ ದಲಿತ ಸಂಘರ್ಷ ಸಮಿತಿಯ (ಕೃಷ್ಣಪ್ಪ ಬಣ )ರಾಜ್ಯಾಧ್ಯಕ್ಷ ಕೊಡಿಗಲ್ ರಮೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪಿ ಮಹಾದೇವ, ಬಸವರಾಜು, ತಾ! ಅಧ್ಯಕ್ಷ  ನಂಜೇಶ್,  ಪದಾಧಿಕಾರಿಗಳು  ಹಾಜರಿದ್ದರು.

Advertisement

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಜಮೀನನ್ನು ಕಬಳಿಸಲು ಹುನ್ನಾರ: ಭೂಗಳ್ಳರ ವಿರುದ್ಧ ಕ್ರಮಕ್ಕೆ ಒತ್ತಾಯಡಾ. ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ: ಸಿಎಂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಭಾಗಿಖರ್ಗೆ ಸಮಾವೇಶದ ವೇದಿಕೆ 'ಶುದ್ಧೀಕರಣ': ಹಲ್ದ್ವಾನಿ ಘಟನೆಗೆ ಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ5 ಪ್ರಮುಖ ನಗರಗಳು ಔದ್ಯೋಗಿಕ ಕೇಂದ್ರವಾಗಿ ಅಭಿವೃದ್ಧಿ – ಸಚಿವ ಎಂ.ಬಿ. ಪಾಟೀಲ್ನೇಪಾಳದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಸಿಎಂ ಡಿ.ಕೆ ಶಿವಕುಮಾರ್ ಅಭಯ‘ಗೃಹಲಕ್ಷ್ಮಿ’: ಯಶೋಗಾಥೆ ಹಂಚಿಕೊಳ್ಳುವ ಫಲಾನುಭವಿಗಳಿಗೆ ಸಿಎಂ ಭೇಟಿಯ ಅವಕಾಶ!‘ಮಿಮ್ಸ್’ನಲ್ಲಿ 1 ಕೋಟಿ ವೆಚ್ಚದ ಡಿಜಿಟಲ್ ಪರೀಕ್ಷಾ ಕೇಂದ್ರ ಉದ್ಘಾಟಿಸಿದ ಹೆಚ್.ಡಿ. ಕುಮಾರಸ್ವಾಮಿಹಾಲಹಳ್ಳಿ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ 300ಕ್ಕೂ ಹೆಚ್ಚು ವಿಶೇಷಚೇತನರಿಗೆ ಸಹಾಯಕ ಉಪಕರಣ ವಿತರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿದಲಿತರ ಹಣ ಲೂಟಿ ಮಾಡಿದಾಗ ಸಮುದಾಯ ನೆನಪಾಗಲಿಲ್ಲವೇ?: ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ