ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸಮೀಪದ ಕ್ಯಾದಿಗೆರೆ ಬಳಿಯಿರುವ ಈಚರ್ ಫ್ಯಾಕ್ಟರಿಯ ವಿಷ ಅನಿಲಯ ನೀರುಕುಡಿದು ೧೧ ಕುರಿಗಳು ಸಾವನ್ನಪಿರುವದುರ್ಘಟನೆಇಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ನಡೆದಿದೆ.
ಕ್ಯಾದಿಗೆರೆಗ್ರಾಮದ ನಾಗರಾಜ್‌ಎಂಬುವವರಜಮೀನಿನಲ್ಲಿಕುರಿಮಂದೆಯನ್ನು ಬೀಳುಬಿಡಲಾಗಿದ್ದು, ಇಂದು ಬೆಳಿಗ್ಗೆ ಮೇಯಿಸಲು ಕರೆದುಕೊಂಡು ಹೋಗುವ ವೇಳೆ, ಇಚರ್‌ಕಂಪನಿಯ ವಿಷ ಅನಿಲದ ನೀರುಕುಡಿದು ಕುರಿಗಳು ಸಾವನ್ನಪ್ಪಿದ್ದು, ಕುರಿಗಾಹಿ ಚಳ್ಳಕೆರೆ ತಾಲ್ಲೂಕು, ರಂಗವ್ವನಹಳ್ಳಿ ಗ್ರಾಮದ ಮಂಜಣ್ಣಎಂಬುವವರ ಕುರಿಗಳು ಎನ್ನಲಾಗಿದೆ.
ರಂಗವ್ವನಹಳ್ಳಿ ಗ್ರಾಮದ ಮಂಜಣ್ಣ ಮತ್ತುಆತನ ಪತ್ನಿ ಲಲಿತಮ್ಮ ಮತ್ತುಇತರೆಅಲೆಮಾರಿ ಸುಡುಗಾಡು ಸಿದ್ಧ ಜನಾಂಗದವರುಕುರಿಕಾಯಲುಕ್ಯಾದಿಗೆ ಸುತ್ತಮತ್ತಕುರಿ ಮಂದೆಗಳನ್ನು ಬಿಟ್ಟುಕೊಂಡಿದ್ದು, ಬೆಳಿಗೆಯಷ್ಟೇ ಕುರಿಗಳನ್ನು ಮೇಯಿಸಲು ಹೊರಡುವ ವೇಳೆ ಇಚರ್‌ಕಂಪನಿಯ ವಿಷ ಅನಿಲದ ನೀರನ್ನುಕುಡಿದು ಕುರಿಗಳು ಸಾವನ್ನಪ್ಪಿವೆ.
ಕಳೆದ ಮೂರು ವರ್ಷಗಳಿಂದ ಪದೆ ಪದೇ ವಿಷ ಅನಿಲದ ನೀರುಕುಡಿದು ೧೦-೨೦ ಕುರಿಗಳು ಸಾವನಪ್ಪುತ್ತಿದ್ದರೂಈಚರ್‌ಕಂಪನಿಯ ಫ್ಯಾಕ್ಟರಿಯ ಮಾಲೀಕ ಅಜಿತ್‌ಕುಮಾರ್‌ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಬೇಜಾವಾಬ್ದಾರಿತನ ವಹಿಸಿರುವುದೇ ಕುರಿ ಸಾಯಲುಕಾರಣವಾಗಿದೆಎಂದು ಕುರಿಗಾಹಿಗಳು ಆರೋಪಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನಲ್ಲಿತೀವ್ರ ಬರಗಾಲದ ಹಿನ್ನೆಲೆಯಲ್ಲಿಕುರಿ ಮತ್ತು ಜಾನುವಾರುಗಳನ್ನು ಚಿತ್ರದುರ್ಗದ ಸುತ್ತಮುತ್ತ ಮೇಯಿಸಲು ವಲಸೆ ಬಂದಿದ್ದು, ಈ ಸಂದರ್ಭದಲ್ಲಿ ಕುರಿಗಳು ಸಾವನಪ್ಪಿರುವುದರಿಂದ ಬಡತನದಲ್ಲಿ ಬೆಂದು ಹೋಗಿರುವಅಲೆಮಾರಿ ಸುಡುಗಾಡು ಸಿದ್ಧ ಜನಾಂಗದ ದಂಪತಿಗಳಾದ ಮಂಜಣ್ಣ ಮತ್ತು ಲಲಿತಮ್ಮ ಕುರಿಗಳ ಸಾವಿನಿಂದ ಗೋಳಾಟ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಪೊಲೀಸ್‌ಅಧಿಕಾರಿ ಭೇಟಿ: ಗ್ರಾಮಾಂತರ ಪೊಲೀಸ್‌ಠಾಣೆಯಇನ್ಸ್‌ಪೆಕ್ಟರ್ ಬಾಲಚಂದ್ರ ನಾಯ್ಕ್‌ಅವರುಈಚರ್ ಫ್ಯಾಕ್ಟರಿ ವಿಷ ಅನಿಲ ನೀರುಕುಡಿದು, ಸಾವನ್ನಪ್ಪಿರುವ ಕುರಿಗಳ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಕುರಿ ಮಾಲೀಕರಿಗೆ ಭರವಸೆ ನೀಡಿದರು.
ದಲಿತ ಮುಖಂಡರ ಭೇಟಿ: ಕರ್ನಾಟಕದಲಿತ ಸಂಘರ್ಷ ಸಮಿತಿಎಂ.ಎಸ್. ಬಣದರಾಜ್ಯಾಧ್ಯಕ್ಷ ಕುಂಚಿಗನಾಳ್ ಮಹಾಲಿಂಗಪ್ಪ ಮತ್ತುರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ರಾಜಣ್ಣಅವರು ಕುರಿಗಳು ಮೃತ ಪಟ್ಟಜಾಗಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ವಿಷ ಅನಿಲ ನೀರುಕುಡಿದು ಕುರಿಗಳು ಮೃತ ಪಟ್ಟಿರುವ ಬಗ್ಗೆ ಮೇಲ್ನೋಟಕ್ಕೆಕಂಡು ಬರುತ್ತಿದ್ದು. ಈಚರ್ ಫ್ಯಾಕ್ಟರಿಅಜಿತ್‌ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿಅಲೆಮಾರಿ, ಬುಡಕಟ್ಟು, ಎಸ್.ಸಿ./ಎಸ್.ಟಿ. ಮಹಾಸಭಾದಜಿಲ್ಲಾಧ್ಯಕ್ಷ ಕೆ.ಎಂ. ನಾಗರಾಜ್, ಕರ್ನಾಟಕ ಶಾಂತಿ& ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ಭೇಟಿ ನೀಡಿ, ಕುರಿಗಳು ಮೃತ ಪಟ್ಟಿರುವುದಕ್ಕೆ ವಿಷ ಅನಿಲ ಕಾರಣವಾಗಿರಬಹುದು, ಆ ಕಾರಣಕ್ಕಾಗಿ ಪರಿಸರ ಮಾಲೀನ್ಯಇಲಾಖೆಯ ಅಧಿಕಾರಿಗಳು ತತ್‌ಕ್ಷಣವೇಈಚರ್ ಫ್ಯಾಕ್ಟರಿಗೆ ಭೇಟಿ ನೀಡಿ, ಲಾಕ್‌ಔಟ್ ಮಾಡಬೇಕೆಂದು ಆಗ್ರಹಿಸಿದರು.




