Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ನಿರಂತರ ಅನ್ನ ದಾಸೋಹಕ್ಕೆ 1923 ದಿನದ ಸಂಭ್ರಮ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಯಾವುದೇ ಅಡೆತಡೆಗಳಿಲ್ಲದೆ
  ನಿರಂತರ ಅನ್ನದಾಸೋಹ ಕಾರ್ಯಕ್ರಮವು  ಹಸಿದವರಿಗೆ ಆಹಾರ ವಿತರಣೆ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಈಗ  1923 ನೇ ದಿನದ ಸಂಭ್ರಮ.

 ಹೌದು ತಾಲೂಕಿನ ದರ್ಗಾ ಜೋಗಿಹಳ್ಳಿಯಲ್ಲಿ  ನಿತ್ಯ ನಿರಂತರವಾಗಿ ಅನ್ನದಾಸೋಹವನ್ನು  ಮಲ್ಲೇಶ್ ಮತ್ತು ತಂಡ  ನೆರವೇರಿಸಿಕೊಂಡು ಬರುತ್ತಿದ್ದು , ಇಂದು ತಾಲ್ಲೂಕಿನ ಹಲವಾರು ದಾನಿಗಳ ನೆರವಿನಿಂದ ಅದ್ದೂರಿ ಕಾರ್ಯಕ್ರಮವನ್ನು  ನಿರಂತರ ಅನ್ನದಾಸೋಹ ಸಮಿತಿ ಆಯೋಜನೆ ಮಾಡಿತ್ತು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ ನಿರಂತರ ಅನ್ನದಾಸೋಹ ಕುರಿತಂತೆ ಹಲವು ಮಂದಿ ಹಲವು ಬಗ್ಗೆ ಮಾತನಾಡುತ್ತಾರೆ  ಪ್ರಮುಖವಾಗಿ ಈ ಕಾರ್ಯಕ್ರಮವು ಅವಶ್ಯಕತೆ ಇತ್ತಾ  ಈ ರೀತಿ ಆಹಾರ ವಿತರಣೆ ಮಾಡುವ ಮೂಲಕ ಜನರನ್ನ ಸೋಮಾರಿಯಗಳನ್ನಾಗಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ  ಈ ಸ್ಥಳಕ್ಕೆ ಭೇಟಿ ಕೊಟ್ಟು ವಾಸ್ತವಿಕತೆ ಅರಿತರೆ ಮಾತ್ರ  ನಮಗೆ ತಿಳಿಯುತ್ತದೆ  ಈ ಕಾರ್ಯಕ್ರಮದ ಅವಶ್ಯಕತೆ ಇಲ್ಲಿ ಖಂಡಿತವಾಗಿಯೂ ಇದೆ ಎಂದು  ಎಷ್ಟೇ ಅಡ್ಡಿ ಆತಂಕಗಳು ಬಂದರೂ ಹಿಂದೆ ಸರಿಯದೆ ಮಲ್ಲೇಶ್ ರವರು ನಿತ್ಯ ಅನ್ನದಾಸೋಹ ಮಾಡುತ್ತಿದ್ದಾರೆ ಅವರಿಗೆ ದೇವರು ಮತ್ತಷ್ಟು ಶಕ್ತಿ ನೀಡುವ ಮೂಲಕ  ಈ ಕಾರ್ಯಕ್ರಮವು ಮತ್ತಷ್ಟು ಮುಂದೆ ಸಾಗಲಿ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಕಲಾ ನಾಗರಾಜ್  ಮಾತನಾಡಿದರು. 

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದಲ್ಲಿ ನಿರ್ಗತಿಕ ಕಡುಬಡವರಿಗೆ ಆಹಾರ ವಿತರಣೆ ಜೊತೆಗೆ ವಯೋವೃದ್ಧರಿಗೆ  ಮಹಿಳೆಯರಿಗೆ ಬಟ್ಟೆ ವಿತರಣೆ ಮಾಡಲಾಗಿದೆ ಮಲ್ಲೇಶ್ವರ ಕಾರ್ಯ ಶ್ಲಾಘನೀಯ, ನಮ್ಮ ಕೈಲಾದ ಸೇವೆಯನ್ನು ಸಮಾಜಕ್ಕೆ ಮಲ್ಲೇಶ್ ಮುಖಾಂತರ ಮಾಡುತ್ತಿರುವುದು  ಸಂತಸ ತಂದಿದೆ ಎಂದರು.

 ನಾಯಕ ನಟ ಹಾಗೂ ನಿರೂಪಕ ರಾಕೇಶ್ ರಾಮೇಗೌಡ ಮಾತನಾಡಿ  ಇದೊಂದು ಹೆಮ್ಮೆಯ ಸಂಗತಿ  ಪ್ರತಿನಿತ್ಯ ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ  ಮಲ್ಲೇಶ್ ರವರ ಸಂಗಡ  ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ಪುಣ್ಯ ಎಂದರು ಹಾಗೂ ಇಂತಹ ಉತ್ತಮ ಕಾರ್ಯಕ್ರಮವು  ನಿತ್ಯ ನಿರಂತರ ಸಾಗಲಿ ಎಂದು ಹಾರೈಸಿದರು.

  ಕನ್ನಡ ಜಾಗೃತಿ ವೇದಿಕೆ  ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ ಈ ಕಾರ್ಯಕ್ರಮದಲ್ಲಿ ಆಹಾರ ಪಡೆಯಲು ಬರುವವರ ಸಂಖ್ಯೆ  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಾನಿಗಳ ಅವಶ್ಯಕತೆ ಹೆಚ್ಚಾಗಿದೆ , ಯುವ ಸಮುದಾಯವು  ತಮ್ಮ ವಿಶೇಷ ದಿನಗಳನ್ನು ಹುಟ್ಟು ಹಬ್ಬದ ಆಚರಣೆಗಳನ್ನು  ನಿರಂತರ ಅನ್ನದಾಸೋಹ  ಸಮಿತಿಯೊಟ್ಟಿಗೆ ಆಚರಿಸುವ ಮೂಲಕ  ಸಂಭ್ರಮಾಚರಣೆ ಮಾಡುವುದು ಉತ್ತಮ  ನಿಮ್ಮಿಂದ ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ದೊರೆಯಲಿದೆ ಎಂದರು.

ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ  ಕಾರ್ಯಕ್ರಮವು  ತಾಲೂಕಿನ ಎಲ್ಲಾ ಸಂಘಟನೆಗಳು ಹಾಗೂ ದಾನಿಗಳ ನೆರವಿನಿಂದ ವಕೀಲರಾದ ರವಿಮಾವಿನಕುಂಟೆ ಅನುಪಸ್ಥಿತಿಯಲ್ಲಿ ಹಲವು ಪ್ರಮುಖರ ಸಹಾಯಸ್ತದೊಂದಿಗೆ  ಹಸಿದವರಿಗೆ ಆಹಾರ ವಿತರಣೆ ಮಾಡುವ ಕಾರ್ಯಕ್ರಮವು  ಹಬ್ಬದಂತೆ ನಡೆದಿದೆ  ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುವ ಎಲ್ಲರಿಗೂ  ನಾನು ಆಭಾರಿಯಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಕಲಾವಿದರ ಸಂಘದ ಅಧ್ಯಕ್ಷರಾದ ಎ. ಸಿ ಅಶೋಕ್, ವಿಶ್ವ ಮಾನವ ಡಾ.ರಾಜಕುಮಾರ್ ಸಂಘದ ರಾಜ್ಯಾಧ್ಯಕ್ಷರಾದ ಬನಾಮು ರಾಜು, ಮುಖಂಡರಾದ ರಂಗಸ್ವಾಮಿ, ಸಂಗೀತಾ ನಿರ್ದೇಶಕ ರಾಜನ್ ನಾಗೇಂದ್ರ ರವರ ಧರ್ಮಪತ್ನಿ ಜಯಲಕ್ಷ್ಮಮ್ಮ , ಚಿತ್ರ ನಟಿ ಮೈಸೂರ್ ಮಂಜುಳಾ,ಚಿತ್ರ ನಟ ನಾಗರಾಜ್, ನಿರೂಪಕ ಹಾಗೂ ನಟರಾದ  ರಾಕೇಶ್ ರಾಮೇಗೌಡ, ನಿರೂಪಕಿ ಹಾಗೂ ನಟಿ ಸುಷ್ಮಾ ಗೌಡ, ನಾಗರಾಜು, ಬಿಎಂಟಿಸಿ ಚಾಲಕ ಸೇಲ್ವಮ್ ರವರ ಕುಟುಂಬಸ್ಥರು, ನಮ್ಮ ಜೇನುಗೂಡು ತಂಡದ ಎಲ್ಲಾ ಸದಸ್ಯರು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!