Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ 20 ವರ್ಷ ಕಠಿಣ ಜೈಲುವಾಸ, ದಂಡ

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (ಪೋಕ್ಸೋ) ಅಪ್ರಾಪ್ತೆ ಬಾಲಕಿಯ ಅಪಹರಣ ಹಾಗೂ ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷಗಳ ಕಠಿಣ ಕಾರುವಾಸ ಮತ್ತು
₹10,000 ದಂಡ ವಿಧಿಸಿ ಆದೇಶ ಹೊರಡಿಸಿದೆ. 

​ಘಟನೆಯ ವಿವರ:
​ಹೊಳಲ್ಕೆರೆ ತಾಲೂಕಿನ ಕೊಡಗವಳ್ಳಿ ಗ್ರಾಮದ ಮಂಜುನಾಥ.ಎಸ್ (33) ಶಿಕ್ಷೆಗೆ ಗುರಿಯಾದ ದೋಷಿಯಾಗಿದ್ದಾನೆ.
​2024ರ ಜನವರಿ 15ರಂದು ಮಧ್ಯಾಹ್ನ 12:20ರ ಸುಮಾರಿಗೆ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿ, ಹೊಳಲ್ಕೆರೆ ತಾಲೂಕಿನ ಮಾಳೇನಹಳ್ಳಿ ಗ್ರಾಮದ ಬಳಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದನು. 

Advertisement

​ಪೊಲೀಸ್ ತನಿಖೆ ಮತ್ತು ದೋಷಾರೋಪಣೆ: ​ಈ ಘಟನೆಗೆ ಸಂಬಂಧಿಸಿದಂತೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 15/2024ರಲ್ಲಿ ಪ್ರಕರಣ ದಾಖಲಾಗಿತ್ತು. 

​ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಬಿ. ಚಿಕ್ಕಣ್ಣನವರ್ ಅವರು ತನಿಖೆ ನಡೆಸಿ, ಆರೋಪಿಯ ವಿರುದ್ಧ ಕಲಮ್ 363, 506, 376 ಐಪಿಸಿ ಮತ್ತು ಕಲಮ್ 4 ಪೋಕ್ಸೋ ಕಾಯ್ದೆಯಡಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 

​ನ್ಯಾಯಾಲಯದ ತೀರ್ಪು ಮತ್ತು ಪರಿಹಾರ:
​ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ಮಾನ್ಯ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೋಕ್ಸೋ) ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ ಅವರು ಅಕ್ಟೋಬರ್ 13
, 2026ರಂದು ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ​ಆರೋಪಿಗೆ ಒಟ್ಟು 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ. 10,000 ದಂಡ ವಿಧಿಸಲಾಗಿದೆ. 

​ಇದರೊಂದಿಗೆ, ಪ್ರಕರಣದ ಸಂತ್ರಸ್ತ ಬಾಲಕಿಗೆ ರೂ. 4,00,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.  ​ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಚ್.ಆರ್. ಜಗದೀಶ್ ಅವರು ವಾದ ಮಂಡಿಸಿದ್ದರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಚಿತ್ರದುರ್ಗದಲ್ಲಿ ವಿಜೃಂಭಣೆಯ ನಾಡ ದೊರೆ ರಾಜವೀರ ಮದಕರಿ ನಾಯಕ ಜಯಂತಿಚುನಾವಣೆ ನೀತಿ ಸಂಹಿತೆ ಯಿಂದಾಗಿ ಸರಳವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗಂಡಭೇರುಂಡ – ಮೈಸೂರು ರಾಜಶಕ್ತಿಯ ಸಂಕೇತ:…ರಾಯಣ್ಣ ವೀರಮರಣ ಹೊಂದಿದ ಜಾಗದಲ್ಲಿ ದೈವಿಕ ಶಕ್ತಿಯಿದೆ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ಅಹಂಕಾರ, ಅನಗತ್ಯ ಬಯಕೆಗಳನ್ನು ತೊರೆದಾಗ ಮಾತ್ರ ಜೀವನ ಸಾರ್ಥಕ: ಪಾವಗಡದ ನಂದೀಶ.ಎಲ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಸಂವಿಧಾನದ ಆಶಯದಂತೆ ನಡವಳಿಕೆ ಇರಲಿ: ಸಂಸದ ಕಾರಜೋಳಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು, ಪರಮೇಶ್ವರ್-ಮುನಿಯಪ್ಪ ರಾಜೀನಾಮೆ ನೀಡಿ ಹೋರಾಟ ಮಾಡಲಿ-ಗೋವಿಂದ ಕಾರಜೋಳವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಿವಿ ಐವರಿಗೆ ಸ್ಥಾನಶರಣ ಸಂಸ್ಕೃತಿ ಉತ್ಸವ 2026: ಇಂದು ಮುರುಘಾ ಮಠದಲ್ಲಿ ಬಸವ ಧ್ವಜಾರೋಹಣ ಹಾಗೂ ವಿವಿಧ ಕಾರ್ಯಕ್ರಮಗಳು