ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2026ರ ಕಾಮನ್‌ವೆಲ್ತ್‌ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಐತಿಹಾಸಿಕ ಸಾಧನೆಗೈದ ಭಾರತೀಯ ಕ್ರೀಡಾಪಟುಗಳ ಪಡೆಗೆ (ಟೀಮ್ ಇಂಡಿಯಾ) ಹಾಗೂ ಕರ್ನಾಟಕದ ಹೆಮ್ಮೆಯ ಅಥ್ಲೀಟ್ ಶಿಲ್ಪಾ ಶೈಲಾ ಅವರಿಗೆ ಆತ್ಮೀಯ ಅಭಿನಂದನೆಗಳನ್ನು ಸಲ್ಲಿ ಸಲಾಗಿದೆ.
ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತ ತಂಡವು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 39 ಪದಕಗಳನ್ನು ತನ್ನದಾಗಿಸಿಕೊಂಡು, ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಅಭೂತಪೂರ್ವ ಯಶಸ್ಸು ಸಾಧಿಸಿದೆ.
ಪರಿಶ್ರಮಕ್ಕೆ ಸಿಕ್ಕ ಫಲ
ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಪತಾಕೆಯನ್ನು ಹಾರಿಸಿರುವ ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಲಾಗಿದ್ದು, "ಈ ಮಹತ್ಸಾಧನೆಯ ಹಿಂದೆ ಪ್ರತಿಯೊಬ್ಬ ಪದಕ ವಿಜೇತರ ಹಾಗೂ ಇಡೀ ಭಾರತೀಯ ತಂಡದ ಅದ್ಭುತ ಪ್ರತಿಭೆ, ಶಿಸ್ತು, ಕಠಿಣ ಪರಿಶ್ರಮ ಮತ್ತು ಅಚಲವಾದ ಸಂಕಲ್ಪ ಅಡಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
ಕರ್ನಾಟಕದ ಶಿಲ್ಪಾ ಶೈಲಾಗೆ ವಿಶೇಷ ಶ್ಲಾಘನೆ
ಮಹಿಳೆಯರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿರುವ ರಾಜ್ಯದ ಪ್ಯಾರಾ ಅಥ್ಲೀಟ್ ಶಿಲ್ಪಾ ಶೈಲಾ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗಿದೆ. "ಶಿಲ್ಪಾ ಅವರ ಈ ಐತಿಹಾಸಿಕ ಸಾಧನೆಯು ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದೆ. ಅವರ ಈ ಪಯಣ ಮತ್ತು ಗೆಲುವು ರಾಜ್ಯದ ಉದಯೋನ್ಮುಖ ಯುವ ಕ್ರೀಡಾಪಟುಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ" ಎಂದು ಹೇಳಲಾಗಿದೆ.
ಮುಂದಿನ ದಿನಗಳಲ್ಲಿಯೂ ದೇಶದ ಎಲ್ಲಾ ಕ್ರೀಡಾಪಟುಗಳು ಇದೇ ರೀತಿಯ ಉತ್ಸಾಹ, ಆತ್ಮವಿಶ್ವಾಸ ಹಾಗೂ ಸಮರ್ಪಣಾ ಮನೋಭಾವದೊಂದಿಗೆ ಮುನ್ನಡೆದು ಭಾರತಕ್ಕೆ ಇನ್ನಷ್ಟು ಕೀರ್ತಿ ತರಲಿ ಎಂದು ಶುಭ ಹಾರೈಸಲಾಗಿದೆ.



