Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

444 ಕೋಟಿ ಹಗರಣ: ಸಚಿವ ಯತೀಂದ್ರ, ಐಎಎಸ್ ಅಧಿಕಾರಿ ಭೂಬಾಲನ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವ್ಯಾಪ್ತಿಯ ಕೆಎಸ್‌ಡಿಸಿ ಹಾಗೂ ಕೆಎಸ್‌ಡಬ್ಲ್ಯುಎನ್ ಯೋಜನೆಗಳಲ್ಲಿ ಬರೋಬ್ಬರಿ
444 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಅವರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ದಾಖಲಿಸಿದ್ದಾರೆ.

ಟೆಂಡರ್ ಅಕ್ರಮದ ಗಂಭೀರ ಆರೋಪ: 2025ರಲ್ಲಿ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Advertisement

ಯಾವುದೇ ಅರ್ಹತೆ ಇಲ್ಲದ ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದಕ್ಕೆ ನಿಯಮಬಾಹಿರವಾಗಿ ಟೆಂಡರ್ ನೀಡಲಾಗಿದೆ ಎಂದು ದೂರಲಾಗಿದೆ.

ಸಚಿವ ಯತೀಂದ್ರ ಪಾತ್ರದ ಬಗ್ಗೆ ಶಂಕೆ: ಈ ಟೆಂಡರ್ ಪ್ರಕ್ರಿಯೆ ನಡೆದ ಅವಧಿಯಲ್ಲಿ ಮುಖ್ಯಮಂತ್ರಿಗಳೇ ಡಿಪಿಎಆರ್ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅಂದಿನ ಮುಖ್ಯಮಂತ್ರಿಗಳ ಮಗ ಹಾಗೂ ಪ್ರಭಾವಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಅಣತಿಯ ಮೇರೆಗೆಯೇ ಈ ಅಕ್ರಮ ಟೆಂಡರ್ ಕಲ್ಪಿಸಲಾಗಿದೆ ಎಂಬುದು ದೂರಿನ ಮುಖ್ಯ ಪ್ರಮುಖ ಆರೋಪವಾಗಿದೆ.   ಐಎಎಸ್ ಅಧಿಕಾರಿಗಳ ಮೇಲೆ ದೂರು: ಇ-ಆಡಳಿತ ವಿಭಾಗದ ಸಿಇಒ ಹಾಗೂ ಐಎಎಸ್ ಅಧಿಕಾರಿ ಭೂಬಾಲನ್ ಸೇರಿದಂತೆ ಪ್ರಮುಖ ಮೂವರು ಅಧಿಕಾರಿಗಳ ವಿರುದ್ಧವೂ ದೂರಿನಲ್ಲಿ ಹೆಸರಿಸಲಾಗಿದ್ದು, ಈ ಇಲಾಖೆಯ ಉನ್ನತ ಹುದ್ದೆಯಲ್ಲಿರುವವರ ಶಾಮೀಲಾತಿ ಬಗ್ಗೆಯೂ ಸಮಗ್ರ ತನಿಖೆ ನಡೆಸುವಂತೆ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

ತನಿಖೆಗೆ ಒತ್ತಾಯ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಬಂಧಿತ ಹಿರಿಯ ಅಧಿಕಾರಿಗಳ ವಿರುದ್ಧ ಕೂಡಲೇ ಉನ್ನತ ಮಟ್ಟದ ತನಿಖೆ ಕೈಗೊಂಡು, ಸತ್ಯಾಸತ್ಯತೆಯನ್ನು ಹೊರಹಾಕಬೇಕೆಂದು ಲೋಕಾಯುಕ್ತರಿಗೆ ಮನವಿ ಮಾಡಲಾಗಿದೆ.  

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅ.03ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ-ಕುಶಾಲ್ ಚೌಕ್ಸೆಧರ್ಮಸ್ಥಳ ಸಂಸ್ಥೆಯ ಕೆರೆ ಹೂಳೆತ್ತುವ ಕಾರ್ಯಕ್ರಮ ಶ್ಲಾಘನೀಯ:ಮಹೇಶ್ರೈತ ಹೋರಾಟಗಾರರ ಮೇಲಿನ ಕೇಸ್‌ಗಳನ್ನು ವಜಾಗೊಳಿಸಲು ರೈತ ಸಂಘ ಆಗ್ರಹಎನ್‌ಡಿಎ ಅಭ್ಯರ್ಥಿ ರಂಗನಾಥ್ ರವರ ಗೆಲುವು ನಮ್ಮೆಲ್ಲರ ಜವಾಬ್ದಾರಿ-- ಧೀರಜ್ ಮುನಿರಾಜ್ವಾರದಲ್ಲೇ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ವಿತರಣೆಗೆ ವಾರ್ತಾ ಇಲಾಖೆ ಸಿದ್ಧತೆಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ನಿಜ: ಡಿಸಿಎಂ ಜಿ.ಪರಮೇಶ್ವರ್ ಒಪ್ಪಿಗೆ'ಭಾರತ್ ಜೋಡೋ-2' ಅಭಿಯಾನಕ್ಕೆ ಚಾಲನೆ: 84 ಸೋತ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು!ಪ್ರಧಾನಿ ಮೋದಿ ರಾಜೀನಾಮೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹನೈಸ್‌ಯೋಜನೆ ಕುಮಾರಸ್ವಾಮಿ ಅಥವಾ ದೇವೇಗೌಡರ ಕೂಸಲ್ಲ: ಬೃಹತ್ ಹಗರಣವೆಂದು ಡಿಕೆಶಿ ವಿರುದ್ಧ ಹೆಚ್‌ಡಿಕೆ ಬಾಂಬ್!ಪ್ರತಿಭಟನೆ ಬಿಟ್ಟು ದೆಹಲಿಗೆ ಬನ್ನಿ: ಕಬ್ಬು ಬೆಳೆಗಾರರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಕ್ತ ಆಹ್ವಾನ!