Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಕುಂಚಿಟಿಗ–ಒಕ್ಕಲಿಗ ಸಮುದಾಯದಲ್ಲಿ ಬಿರುಕು: ಏಕತೆಗೆ ಸವಾಲ್!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಂಚಿಟಿಗ
ಒಕ್ಕಲಿಗ ಸಮುದಾಯದಲ್ಲಿ ಬಿರುಕು: ಏಕತೆಗೇ ಸವಾಲು.....!
ಒಂದೇ ಸಮಾಜ
, ಹಲವು ವೇದಿಕೆಗಳು: ಗೊಂದಲದ ಗರ್ಭದಲ್ಲಿ ಸಮುದಾಯ ರಾಜಕೀಯ. ಎರಡು ಮುಖದ ನಡೆಗಳಿಂದ ಕುಸಿಯುತ್ತಿರುವ ಕುಂಚಿಟಿಗ ಸಮುದಾಯದ ನಂಬಿಕೆ ವ್ಯವಸ್ಥೆ. ವಿಭಜನೆ ರಾಜಕೀಯದ ಹೊಡೆತಕ್ಕೆ ಒಳಗಾಗುತ್ತಿರುವ ಕುಂಚಿಟಿಗಒಕ್ಕಲಿಗ ಹೋರಾಟ.

ಸಭೆಗಳಲ್ಲಿ ರಾಜಕೀಯ ಆಟ: ದಿಕ್ಕು ತಪ್ಪುತ್ತಿರುವ ಸಮುದಾಯದ ಗುರಿ
ಏಕತೆ ಇಲ್ಲದ ಹೋರಾಟಕ್ಕೆ ಯಶಸ್ಸು ಸಾಧ್ಯವೇ....
? ಕುಂಚಿಟಿಗ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ಗಗನ ಕುಸುಮವಾಗಿದೆ. ಗುರುತುಗಳ ಗೊಂದಲದಲ್ಲಿ ಸಿಲುಕಿದ ಸಮುದಾಯ: ಲಾಭ ಯಾರಿಗೆ? ನಷ್ಟ ಯಾರಿಗೆ....? ವೇದಿಕೆಗಳ ಸ್ಪರ್ಧೆಯಿಂದ ಕುಸಿಯುತ್ತಿರುವ ಸಂಘಟನಾ ಶಕ್ತಿ. ಸಮುದಾಯದ ಹೆಸರಿನಲ್ಲಿ ರಾಜಕೀಯ ನಾಟಕ: ಆತ್ಮಪರಿಶೀಲನೆಗೆ ಆಹ್ವಾನ

ಏಕತೆ ಕುಸಿದರೆ ಹಕ್ಕುಗಳ ಹೋರಾಟವೂ ನಿಲ್ಲುತ್ತದೆ, ಕೇಂದ್ರ ಮತ್ತು ರಾಜ್ಯ ಮೀಸಲಾತಿಗೆ ತಿಲಾಂಜಲಿ ನೀಡಬೇಕಾಗಿದೆ. ಇದು ಎಚ್ಚರಿಕೆಯ ಸಂದೇಶ.

ಕುಂಚಿಟಿಗಒಕ್ಕಲಿಗ ಸಮುದಾಯದ ಒಳಭಾಗದ ಬಿರುಕು: ಏಕತೆ ಕುಸಿತವೇ ಅಥವಾ ಸಂಘಟನಾ ದಿಕ್ಕು ತಪ್ಪಿದ ಹೋರಾಟವೇ?
ಚಿತ್ರದುರ್ಗ ಜಿಲ್ಲೆಯಲ್ಲಿ ಕುಂಚಿಟಿಗ(ಒಕ್ಕಲಿಗ) ಸಮುದಾಯದ ಒಳಗಿನ ಇಂದಿನ ಸ್ಥಿತಿ ಗಂಭೀರ ಆತ್ಮಪರಿಶೀಲನೆಗೆ ಆಹ್ವಾನ ನೀಡುತ್ತಿದೆ. ಒಂದೇ ಸಮುದಾಯದ ಹೆಸರಿನಲ್ಲಿ ಹಲವು ವೇದಿಕೆಗಳು
, ವಿಭಿನ್ನ ಸಭೆಗಳು ಮತ್ತು ಪರಸ್ಪರ ವಿರುದ್ಧ ನಿಲುವುಗಳು ಬೆಳೆಯುತ್ತಿರುವುದು ಈಗ ಹೊಸ ವಿಷಯವಲ್ಲದಿದ್ದರೂ, ಅದರ ಪರಿಣಾಮಗಳು ದಿನೇ ದಿನೇ ಹೆಚ್ಚಾಗುತ್ತಿವೆ.

ಸಮುದಾಯದ ಹೆಸರಿನಲ್ಲಿ ನಡೆಯುವ ಸಭೆಗಳಲ್ಲಿ ಕೆಲವರ ದ್ವಂದ್ವ ನಡವಳಿಕೆ ಈಗ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸಿದೆ. ಒಂದೇ ಸಮಯದಲ್ಲಿ ಎರಡು ವಿಭಿನ್ನ ಸಭೆಗಳಲ್ಲಿ(ಒಂದು ಕುಂಚಿಟಿಗ ಮತ್ತೊಂದು ಒಕ್ಕಲಿಗ) ಭಾಗವಹಿಸುವುದು, ಸಂದರ್ಭಕ್ಕೆ ಅನುಗುಣವಾಗಿ ವಿಭಿನ್ನ ನಿಲುವುಗಳನ್ನು ತಾಳುವುದುಇವು ಸಮುದಾಯದ ಒಳಗಿನ ನಂಬಿಕೆ ವ್ಯವಸ್ಥೆಯನ್ನೇ ಕುಸಿತಗೊಳಿಸುತ್ತಿವೆ.

ಒಂದು ಕಡೆ ಕುಂಚಿಟಿಗ ಒಕ್ಕಲಿಗಸಭೆಗಳು, ಮತ್ತೊಂದು ಕಡೆ ಒಕ್ಕಲಿಗಸಭೆಗಳು, ಮತ್ತೆ ಬೇರೆ ಕಡೆ ಕುಂಚಿಟಿಗಹೆಸರಿನ ವೇದಿಕೆಗಳು ಇಂತಹ ವಿಭಜನೆಗಳು ಜನಸಾಮಾನ್ಯರಲ್ಲಿ ಗೊಂದಲ ಹೆಚ್ಚಿಸುತ್ತಿವೆ. ಆದರೆ ಇಡೀ ಜಿಲ್ಲೆಯಲ್ಲಿ ಇರುವುದು ಕೇವಲ ಕುಂಚಿಟಿಗ ಸಮುದಾಯ ಮಾತ್ರ. ಈ ಕುಂಚಿಟಿಗ ಸಮುದಾಯ ಛಿದ್ರವಾಗಿದೆ.

ಎರಡು ಮುಖದ ರಾಜಕೀಯ ನಡೆ ಮತ್ತು ನಂಬಿಕೆಯ ಕುಸಿತ
ಸಮುದಾಯದ ಹೆಸರಿನಲ್ಲಿ ನಡೆಯುವ ಇಂತಹ ಚಟುವಟಿಕೆಗಳು ಈಗ ಕೇವಲ ಸಂಘಟನಾ ವ್ಯತ್ಯಾಸವಲ್ಲ
, ಬದಲಾಗಿ ಕುಂಚಿಟಿಗ ಸಮುದಾಯ ಅಸ್ಮಿತೆ ಮತ್ತು ನೈತಿಕ ಪ್ರಶ್ನೆಯನ್ನೂ ಎತ್ತುತ್ತಿವೆ. ಕೆಲವರ ದ್ವಂದ್ವ ನಡವಳಿಕೆ ಸಮಾಜದ ನಂಬಿಕೆಯನ್ನು ಕುಗ್ಗಿಸುವುದರ ಜೊತೆಗೆ, ಸಮುದಾಯದ ಹೋರಾಟದ ಶಕ್ತಿಯನ್ನೂ ದುರ್ಬಲಗೊಳಿಸುತ್ತಿದೆ.

ಇದರಿಂದ ಜನರಲ್ಲಿ ಉದ್ಭವಿಸುವ ಪ್ರಶ್ನೆ ಸ್ಪಷ್ಟವಾಗಿದೆ: ಸಮುದಾಯದ ಹಿತಕ್ಕಾಗಿ ಈ ವೇದಿಕೆಗಳಿವೆಯೋ ಅಥವಾ ವೈಯಕ್ತಿಕ ಹಾಗೂ ರಾಜಕೀಯ ಲಾಭಕ್ಕಾಗಿ ಸಮಾಜದ ಹೆಸರನ್ನು ಬಳಸಲಾಗುತ್ತಿದೆಯೋ?.

ತತ್ವಬದ್ಧತೆ ಇಲ್ಲದ ಸಂಘಟನೆಗಳುಹೋರಾಟದ ದಿಕ್ಕು ತಪ್ಪು
ಯಾವುದೇ ಸಮುದಾಯ ಸಂಘಟನೆಗೆ ತತ್ವ
, ಗುರಿ ಮತ್ತು ಏಕೀಕೃತ ಧ್ವನಿ ಅತ್ಯಂತ ಮುಖ್ಯ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ವೇದಿಕೆಗಳ ಸ್ಪರ್ಧೆ ಮತ್ತು ನಾಯಕತ್ವದ ವಿಭಜನೆ ಸಮುದಾಯದ ಮೂಲ ಗುರಿಯನ್ನೇ ಮಸುಕಾಗಿಸುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಸದಸ್ಯನಿಗೆ ಯಾವುದು ನಿಜವಾದ ಪ್ರತಿನಿಧಿ ವೇದಿಕೆ, ಯಾವುದು ತಾತ್ಕಾಲಿಕ ರಾಜಕೀಯ ವೇದಿಕೆ ಎಂಬ ಗೊಂದಲ ಉಂಟಾಗುವುದು ಸಹಜ.

ದಶಕಗಳಿಂದ ಬಾಕಿಯಿರುವ ಕೇಂದ್ರದ ಒಬಿಸಿ ಮೀಸಲಾತಿ ಹೋರಾಟದ ಮೇಲೆ ಪರಿಣಾಮ. ಕುಂಚಿಟಿಗ ಸಮುದಾಯದ ಪ್ರಮುಖ ಹಕ್ಕಿನ ಹೋರಾಟವಾದ ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ವಿಚಾರ ದಶಕಗಳಿಂದ ಮುಂದುವರಿಯುತ್ತಿದೆ. ಆದರೆ ಇಂದಿಗೂ ಅದು ಅಂತಿಮ ಹಂತ ತಲುಪಿಲ್ಲ.

ಇದರ ಹಿಂದೆ ಆಡಳಿತಾತ್ಮಕ ಕಾರಣಗಳ ಜೊತೆಗೆ ಸಮುದಾಯದ ಒಳಗಿನ ಏಕಮತದ ಕೊರತೆಯೂ ಪ್ರಮುಖ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಂದೇ ಧ್ವನಿಯಲ್ಲಿ ಮಾತನಾಡಬೇಕಾದ ಸಮುದಾಯವೇ ವಿಭಿನ್ನ ಧ್ವನಿಗಳಾಗಿ ಬದಲಾಗಿರುವುದು ಈ ಹೋರಾಟದ ವೇಗವನ್ನು ಕುಂಠಿತಗೊಳಿಸಿದೆ.

ವಿಭಜನೆಯ ಪ್ರಶ್ನೆಲಾಭ ಯಾರಿಗೆ? ನಷ್ಟ ಯಾರಿಗೆ?
ಕುಂಚಿಟಿಗ ಒಕ್ಕಲಿಗ”, “ಒಕ್ಕಲಿಗ”, “ಕುಂಚಿಟಿಗಎಂಬ ಗುರುತುಗಳ ವಿಭಜನೆಗಳು ಈಗ ಕೇವಲ ಹೆಸರುಗಳ ವಿಷಯವಲ್ಲ; ಅವು ಸಮುದಾಯದ ಒಳಗಿನ ಬಿರುಕುಗಳ ಪ್ರತೀಕವಾಗಿ ಬದಲಾಗಿವೆ.

ಇದರಿಂದ ಉದ್ಭವಿಸುವ ಪ್ರಮುಖ ಪ್ರಶ್ನೆ ಎಂದರೆ: ಈ ವಿಭಜನೆಯಿಂದ ನಿಜವಾದ ಲಾಭ ಯಾರಿಗೆ? ಸಮುದಾಯಕ್ಕೋ ಅಥವಾ ಕೆಲವು ಹಿತಾಸಕ್ತಿಗಳಿಗೋ?.

ಅಂತಿಮ ಚಿಂತನೆ: ಏಕತೆಯೇ ಉಳಿವಿನ ಮೂಲ ಇಂದಿನ ಪರಿಸ್ಥಿತಿ ಕುಂಚಿಟಿಗಒಕ್ಕಲಿಗ ಸಮುದಾಯಕ್ಕೆ ಗಂಭೀರ ಎಚ್ಚರಿಕೆಯ ಘಂಟೆಯಾಗಿದೆ. ದ್ವಂದ್ವ ನಡವಳಿಕೆ, ವೇದಿಕೆಗಳ ಸ್ಪರ್ಧೆ ಮತ್ತು ತತ್ವರಹಿತ ರಾಜಕೀಯ ಮುಂದುವರೆದರೆ ದಶಕಗಳ ಹೋರಾಟಗಳು ಇನ್ನೂ ಮುಂದುವರಿಯುವ ಅಪಾಯವಿದೆ.

ಸಮುದಾಯವು ಈಗ ಆತ್ಮಪರಿಶೀಲನೆ ಮಾಡಬೇಕಾದ ಸಮಯ ಬಂದಿದೆ. ವಿಭಜನೆಯ ಮಾರ್ಗವಲ್ಲ, ಏಕತೆಯ ಮಾರ್ಗವೇ ಹಕ್ಕುಗಳ ಸಾಧನೆಗೆ ದಾರಿ ತೋರಿಸುತ್ತದೆ.

ಸಮುದಾಯದ ಭವಿಷ್ಯವನ್ನು ನಿರ್ಧರಿಸುವುದು ಸಂಘಟನೆಗಳ ಸಂಖ್ಯೆ ಅಲ್ಲ ಅದರ ಏಕತೆ ಮತ್ತು ನಿಷ್ಠೆಯ ಶಕ್ತಿಯಿಂದ ಮಾತ್ರ......
ಲೇಖನ-ಕೆ.ಟಿ ಶ್ರೀನಿವಾಸ್, ಬೆಂಗಳೂರು.


 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!