Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports News

ಬಯಲು ಬಸವಣ್ಣ ಜಾತ್ರೆಯಲ್ಲಿ ಮೈ ನವೀರೇಳಿಸಿದ ಕುಸ್ತಿ ಪಂದ್ಯ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
 ಕುಸ್ತಿ ಸಂಘದಿಂದ ಬಯಲು ಬಸವಣ್ಣ ಕಡಲೆಕಾಯಿ ಪರಿಷೆ ಪ್ರಯುಕ್ತ ಪ್ರಪ್ರಥಮ ಬಾರಿಗೆ 9ಜಿಲ್ಲೆಗಳ ಅಂತರ ಜಿಲ್ಲಾ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ನಡೆಯಿತು.

        ಬಹಳ ವರ್ಷಗಳ ನಂತರ ನಡೆದ ಮಟ್ಟಿ ಕುಸ್ತಿ ಪಂದ್ಯಾವಳಿ ಕ್ರೀಡಾ ಪಟುಗಳ ಹಾಗೂ ಕುಸ್ತಿ ಪ್ರೇಮಿಗಳಲ್ಲಿ ವಿಶೇಷ ಆಸಕ್ತಿ ಮೂಡಿತ್ತು. 9ಜಿಲ್ಲೆಗಳ ಸುಮಾರು ನೂರಾ ಐವತ್ತಕ್ಕೂ ಹೆಚ್ಚು ಕುಸ್ತಿ ಪಟುಗಳ ಎಂಬತ್ತು ಜೋಡಿಗಳು ಕುಸ್ತಿ ಪಂದ್ಯದಲ್ಲಿ ಕಾದಾಡಿ ತಮ್ಮ ತಂತ್ರ ಕೌಶಲ್ಯ ಮೆರೆದು ದೊಡ್ಡಬಳ್ಳಾಪುರದ ಕುಸ್ತಿ ಪ್ರೇಮಿಗಳಿಗೆ ರಸ ದೌತಣ ನೀಡಿದರು. ಅದರಲ್ಲೂ ವಿಶೇಷವಾಗಿ ಇಪ್ಪತ್ತು ಮಹಿಳಾ ಕುಸ್ತಿ ಪಟುಗಳು ಅಖಾಡಕ್ಕಿಳಿದು ತಮ್ಮ ಶೌರ್ಯ ಮೆರೆದರು.

ಈ ಪಂದ್ಯಾವಳಿಯಲ್ಲಿ ವಿಜೇತರದವರು ಮಹಿಳೆಯರ ದೊಡ್ಡಬಳ್ಳಾಪುರ ಯುವ ಕಿಶೋರಿ... ಕುಮಾರಿ ಶ್ರೀ ರಕ್ಷಾ, ದೊಡ್ಡಬಳ್ಳಾಪುರ ಯುವ ಕಿಶೋರ... ಫೈ. ಅಭಿಷೇಕ್, ದೊಡ್ಡಬಳ್ಳಾಪುರ ಕಿಶೋರ... ಫೈ. ಸೋಫಿಯಾನ್, ದೊಡ್ಡಬಳ್ಳಾಪುರ ಕುಮಾರ.... ಫೈ. ಅಂಬರೀಷ್, ದೊಡ್ಡಬಳ್ಳಾಪುರ ಕೇಸರಿ.. ಫೈ. ಧನಂಜಯ್, ದೊಡ್ಡಬಳ್ಳಾಪುರ ಕಂಠೀರವ.. ಫೈ. ಮಧುಸೂದನ್. ಹೀಗೆ 6ವಿಭಾಗಗಳಲ್ಲಿ ವಿಜೇತರಾದ ಫೈಲ್ವಾನರಿಗೆ ಬೆಳ್ಳಿ ಗದೆಗಳನ್ನು ನೀಡಿ ಸತ್ಕಾರಿಸಲಾಯಿತು.

         ಮದಗಜಗಳ ಕಾದಾಟ ದಂತಿದ್ದ ಯುವ ಕುಸ್ತಿ ಪಟುಗಳ ಪಂದ್ಯಾವಳಿ ನೆರೆದ ಪ್ರೇಕ್ಷಕರಿಗೆ ಹಾಗೂ ಕುಸ್ತಿ ಪ್ರಿಯರಿಗೆ ಉತ್ತಮ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ದೊಡ್ಡಬಳ್ಳಾಪುರದ ಎಸ್. ಆರ್. ಸಿ ಗರಡಿಯ ಯುವ ಫೈಲ್ವಾನ್ ಪ್ರಥಮ ಬಹುಮಾನ ಗೆದ್ದು ಗದೆ ಸ್ವೀಕರಿಸಿದ್ದು ಸ್ಥಳೀಯರಲ್ಲಿ ವಿಶೇಷ ಅಭಿಮಾನ ಮೂಡಿಸಿತ್ತೆನ್ನುವುದರಲ್ಲಿ ಅನುಮಾನವಿಲ್ಲ.

ತಡ ರಾತ್ರಿಯವರೆಗೂ ನಡೆದ ಪಂದ್ಯಾವಳಿ ಯನ್ನು ಸಹಸ್ರರೂ ಪ್ರೇಕ್ಷಕರು ವೀಕ್ಷಿಸಿದರು. ನಿಜಕ್ಕೂ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿ ದೊಡ್ಡಬಳ್ಳಾಪುರ ಕ್ರೀಡಾ ಪ್ರೇಮಿಗಳಿಗೆ, ಹಾಗೂ ಜನತೆಗೆ ರಸ ದೌತಣ ನೀಡುವಲ್ಲಿ ಯಶಸ್ವಿಯಾದ ದೊಡ್ಡಬಳ್ಳಾಪುರ ಕುಸ್ತಿ ಸಂಘದ ಪ್ರಮುಖರಾದ ಫೈ. ಚೌಡಪ್ಪ, ಫೈ. ಪಿಳ್ಳಣ್ಣ, ಫೈ. ಲಕ್ಷ್ಮೀನಾರಾಯಣ, ಶ್ರೀನಿವಾಸ್, ವಿಶ್ವನಾಥ್, ಗಣೇಶ್, ಮುನಿಕೃಷ್ಣ, ನಗರಸಭಾ ಸದಸ್ಯ ಪದ್ಮನಾಭ ಹಾಗೂ ಗೆಳೆಯರು ನಿಜಕ್ಕೂ ಅಭಿನಂದನಾರ್ಹರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!