Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಪ್ರಾದೇಶಿಕ ಚಿಂತನೆಯ ಮೂಲಕ ರಾಷ್ಟ್ರೀಯ ಏಕತೆ ಸಾಧಿಸಿ

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ :
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ  ವಿಶ್ವ ಜ್ಞಾನಿ ಡಾ. ಅಂಬೇಡ್ಕರ್ ರವರ ಜನ್ಮದಿನ ಹಾಗೂ ಅಂಬೇಡ್ಕರ್ ಮತ್ತು ಪ್ರಾದೇಶಿಕತೆ ಕುರಿತು ಚಿಂತನ ಕಾರ್ಯಕ್ರಮವನ್ನು  ಆಚರಿಸಲಾಯಿತು.


 ಅಂಬೇಡ್ಕರ್ ಅವರ ಹಲವು ಪುಸ್ತಕಗಳನ್ನು ಪ್ರದರ್ಶನ ಮಾಡುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಾಹಿತಿ ಸೋಮಶೇಖರ ಬಿಸಲ್ವಾಡಿ ಉದ್ಘಾಟಿಸಿದರು. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಮಹಿಳಾ ಸಮಾನತೆ, ಸಂವಿಧಾನ ರಚನೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಭದ್ರಬುನಾದಿ ಹಾಕಿಕೊಟ್ಟ ಅಂಬೇಡ್ಕರ್ ಸಾಧನೆ ಮತ್ತು ಕೊಡುಗೆ ಇಡೀ ವಿಶ್ವ ಜನತೆ ಮರೆಯಲಾಗದ ಕೊಡುಗೆ.

ಭಾರತ ಸರ್ವ ರೀತಿಯಲ್ಲಿ ಸಮಾನತೆಯ ಮೂಲಕ ಶೈಕ್ಷಣಿಕ ಕ್ರಾಂತಿ, ಸಮಗ್ರ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವದ ಸಂರಕ್ಷಣೆಯ ಮೌಲ್ಯವನ್ನು ಭದ್ರವಾಗಿ ಕಟ್ಟಿಕೊಟ್ಟಿರುವ ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಅಮೋಘವಾದದ್ದು ಎಂದು ತಿಳಿಸಿದರು.

 ಮಾಜಿನಗರ ಸಭಾಧ್ಯಕ್ಷೆ ಚಿನ್ನಮ್ಮ ಸಿದ್ದರಾಮಯ್ಯ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಹಾಗೂ ನೂರಾರು ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆ ರಾಷ್ಟ್ರೀಯ ಚಿಂತಕರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಸದಾಕಾಲ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಅಧ್ಯಕ್ಷರಾದ ಸುರೇಶ್ ಋಗ್ವೇದಿಯವರ ಕಾರ್ಯ ಸಾಧನೆಯನ್ನು ಎಂದು ಅಭಿನಂದಿಸಿದರು.

 ಡಾ. ಬಿಆರ್ ಅಂಬೇಡ್ಕರ್ ಕ್ರಾಂತಿ ದಳದ ರಾಜ್ಯಾಧ್ಯಕ್ಷ ಸಿದ್ದಪ್ಪಾಜಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ  ಮಾತನಾಡಿ ಅಂಬೇಡ್ಕರ್ ಅವರ ಚಿಂತನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಅಂಬೇಡ್ಕರ್ ಅವರ ಸಮಗ್ರ ಭಾಷಣಗಳು,ಸಾಹಿತ್ಯ, ಪುಸ್ತಕಗಳ ಅಧ್ಯಯನಕ್ಕೆ ಮತ್ತು ಅದರ ಪ್ರದರ್ಶನ ಮಾಡುವ ಮೂಲಕ ಪ್ರತಿಯೊಬ್ಬರಿಗೂ ತಿಳುವಳಿಕೆ ಹೊಂದಲು ಸಾಧ್ಯವಾಗಿದೆ. ಪ್ರತಿಯೊಬ್ಬರ ಅಭಿವೃದ್ಧಿಯ ದೃಷ್ಟಿಕೋನದ ಸಂವಿಧಾನ ಅಂಬೇಡ್ಕರ್ ಅವರ ಮಹಾ ಕೊಡುಗೆ ಎಂದು ತಿಳಿಸಿದರು.

  ಕನ್ನಡ ಚಳುವಳಿಯ ಹಿರಿಯ ಹೋರಾಟಗಾರರಾದ ಶಾ ಮುರಳಿಯವರು ಮಾತನಾಡಿ ಅಂಬೇಡ್ಕರ್ ಅವರ ಸಂವಿಧಾನದಿಂದ ಸರ್ವರೂ ಸಮಾನರಾಗಿ ಬದುಕುತ್ತಿದ್ದಾರೆ. ಸರ್ವರಲ್ಲೂ ಜಾಗೃತಿ ಮೂಡಿದೆ. ಜಾತಿ ಆಧಾರಿತ ಮಾನವ ವಿಶಾಲವಾಗಿ ಬೆಳೆಯಲು ಸಂವಿಧಾನ ರೂಪಿತವಾಗಿದೆ ಎಂದರು.

 ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಭಾರತದಲ್ಲಿ ಪ್ರಾದೇಶಿಕ ಚಿಂತನೆಗೆ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಪ್ರಾದೇಶಿಕ ಚಿಂತನೆಯ ಮೂಲಕ ರಾಷ್ಟ್ರೀಯ ಏಕತೆಯನ್ನು ಬೆಳೆಯುವ ದಿಕ್ಕಿನಲ್ಲಿ ಅಮೂಲ್ಯ ಕರವಾದ ರಚನೆ ಮಾಡಿರುವ ಅಂಬೇಡ್ಕರ್ ಅವರು ದೇಶದ ಎಲ್ಲಾ ಭಾಷೆಗೆ ಸಮಾನ ಸ್ಥಾನಮಾನ ನೀಡಿ, ಪ್ರತಿಯೊಬ್ಬರ ಸಂಸ್ಕೃತಿ ಪರಂಪರೆ,ಭಾಷೆ ಉಳಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.

 ಸಮಾಜ ಸೇವಕ ಶ್ರೀನಿಧಿ ಕುದರ್, ಇಂಗ್ಲಿಷ್ ಉಪನ್ಯಾಸಕ ತೆಳ್ಳನೂರು ಶಿವರಾಮ್, ಮಹಾಜಿನಗರ ಸಭಾ ಸದಸ್ಯ ಪದ್ಮಾಪುರುಷೋತ್ತಮ್, ತಮಿಳು ಸಂಘದ ಅಧ್ಯಕ್ಷರಾದ ಜಗದೀಶನ್ ಮಾತನಾಡಿದರು.

 ಜಿಲ್ಲಾ ಉಪ್ಪಾರ ಯುವಕ ಸಂಘದ ಅಧ್ಯಕ್ಷರಾದಜಯಕುಮಾರ್,ವಾಲ್ಮೀಕಿ ಸಂಘದ ವೆಂಕಟರಮಣ ನಾಯಕ,ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್,ಶಿವಲಿಂಗ ಮೂರ್ತಿ,ಸರಸ್ವತಿ, ಸುರೇಶ್ ಗೌಡ,ಕಾಡಹಳ್ಳಿ ಮಹೇಶ್, ಕೃಷ್ಣಮೂರ್ತಿ  ಇದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!