Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನೆಲದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದು ಕೊಳ್ಳುವುದು ದೇಶ ದ್ರೋಹ-ಚಂದ್ರ ತೇಜಸ್ವಿ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಹೊರದೇಶಗಳಲ್ಲಿ ಅಲ್ಲಿನ ನೆಲದ ಕಾನೂನಿಗೆ ಬದ್ಧವಾಗಿ ನೋಂದಣಿ ಮಾಡಿಸಿಕೊಂಡಿರುವ ಸಂಘಪರಿವಾರ
, ಇಲ್ಲಿನ ನೆಲದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದು ದೇಶದ್ರೋಹವಲ್ಲದೇ ಮತ್ತೇನು..?  ಎಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಚಂದ್ರತೇಜಸ್ವಿ ಅವರು ಪ್ರಶ್ನೆ ಮಾಡಿದರು.

ನಗರದ ತಾಲ್ಲೂಕು ಕಚೇರಿ ಮುಂದೆ ಭೀಮ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ವತಿಯಿಂದ ನಡೆದ, ನಕಲಿ ದೇಶಭಕ್ತ ಆರ್ ಎಸ್ಎಸ್ ನೋಂದಣಿಗಾಗಿ ಒತ್ತಾಯಿಸಿ ಮತ್ತು ಕೋಮುವಾದಿ ರಾಜಕಾರಣವನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಗತ್ತಿನ ೩೮ ರಾಷ್ಟ್ರಗಳಲ್ಲಿ ಸಂಪರ್ಕ ಹೊಂದಿರುವ ಸಂಘ ಪರಿವಾರ ೨೨೪೦ ಅಂಗಸಂಸ್ಥೆಗಳನ್ನು ಹೊಂದಿದೆ. ಆದರೆ, ಅದರ ಕಾರ್ಯ ಚಟುವಟಿಕೆ ತುಂಬಾ ನಿಗೂಢವಾಗಿದೆ. ಇಡೀ ದೇಶದಲ್ಲಿ ಕೋಮು ವಿಭಜನೆ, ಅಲ್ಪಸಂಖ್ಯಾತರು ಮತ್ತು ಚರ್ಚುಗಳ ಮೇಲೆ ದಾಳಿ, ದಲಿತರು ಮಹಿಳೆಯರ ಮೇಲಿನ ಶೋಷಣೆಗೆ ಈ ಸಂಘಟನೆಯ ಬೆಂಬವಿದೆ ಎಂದು ಆರೋಪಿಸಿದರು.ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವ ಮುನ್ನ ೪೦ ಸಾವಿರದಷ್ಟಿದ್ದ ಶಾಖೆಗಳ ಸಂಖ್ಯೆ ಕಳೆದ ೧೨ ವರ್ಷಗಳಲ್ಲಿ ೮೮ ಸಾವಿರಕ್ಕೆ ಏರಿಕೆಯಾಗಿವೆ. ಕಳೆದ ಹತ್ತು ವರ್ಷಗಳಲ್ಲಿ ಹೊರ ದೇಶದಲ್ಲೇ ?೨೩೦೦ ಕೋಟಿ ಹಣ ಸಂಗ್ರಹವಾಗಿದೆ ಈ ಹಣವನ್ನು ಬೇರೆ ಬೇರೆ ಮೂಲಗಳಲ್ಲಿ ಅಕ್ರಮವಾಗಿ ನಮ್ಮ ದೇಶಕ್ಕೆ  ಹಣ ಸಾಗಣೆ ಮಾಡುತ್ತಿದ್ದಾರೆ. ಇದಕ್ಕೆ ಯಾವುದೇ ಲೆಕ್ಕಪತ್ರಗಳನ್ನು ಇಟ್ಟಿಲ್ಲ. ಸರ್ಕಾರಕ್ಕೆ ಲೆಕ್ಕ ಕೊಡುವುದಿಲ್ಲ ಆದ್ದರಿಂದ ಈ ಕೂಡಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಈ ನೆಲದ ಕಾನೂನಿಗೆ ಬದ್ಧವಾಗಿ ನೋಂದಣಿ ಮಾಡಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಿಮೋಚನಾ ಚಳವಳಿ  ಸಂಘಟನೆಯ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ಕಳೆದ ೧೨ ವರ್ಷಗಳಿಂದಲೂ ದೇಶದಲ್ಲಿ ಕೋಮುವಾದಿ ರಾಜಕೀಯ ರಾರಾಜಿಸುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಖSS) ಪರೋಕ್ಷವಾಗಿ ಬಿ.ಜೆ.ಪಿಯ ಮೂಲಕ ಮನುವಾದಿ ಮನಸ್ಥಿತಿಯಂತೆ ಕೇವಲ

ಸುಳ್ಳುಗಳಿಂದ ಕೂಡಿದ ಮತ್ತು ದೇವರು-ಧರ್ಮದ ಹೆಸರಿನಲ್ಲಿ ನಡೆಸುತ್ತಿದೆ. ಈ ಹೀನ ರಾಜಕೀಯ ವ್ಯವಸ್ಥೆಯಿಂದಾಗಿ ೭೬ ವರ್ಷಗಳ ಇತಿಹಾಸವುಳ್ಳ ಭಾರತದ ಸಂವಿಧಾನದ ಮೇಲೆ ತೀವ್ರತರ ದುಷ್ಪರಿಣಾಮ ಉಂಟಾಗುತ್ತಿದೆ ಎಂಬ ಭಾವನೆ ದೇಶದ ಜನಮಾನಸದಲ್ಲಿ ಬೆರೆತು ಓಆಂ ಸರ್ವಾಧಿಕಾರಿಯ ಆಡಳಿತವನ್ನು ಭವ್ಯ ಭಾರತದ ಏಕತೆ ಮತ್ತು ಪರಂಪರೆ, ದೇಶವು ನಡೆದು ಬಂದ ದಾರಿಯನ್ನು ಜನತೆ ಪದೇಪದೇ ಅವಲೋಕಿಸುತ್ತಿರುವುದು ಸುಳ್ಳಾಗಿ ಉಳಿದಿಲ್ಲ. ಖSS ನ ನೆರಳಿನಲ್ಲಿ ಬಿಜೆಪಿ ನಡೆಸುತ್ತಿರುವ ಕೋಮುವಾದದ ದುರಾಡಳಿತವನ್ನು ನಾಡಿನ ಜನತೆ ನಿತ್ಯವೂ ಲೆಕ್ಕ ಹಾಕುವಂತಾಗಿದೆ. ನೂರು ವರ್ಷಗಳು ತುಂಬಿದೆಯೆಂದು ಶತಮಾನದ ಸಂಭ್ರಮಾಚರಣೆಯಲ್ಲಿ ಬೀಗುವ ಖSS ಸರಸಂಚಾಲಕರಾದ ಮೋಹನ್ ಭಾಗವತ್ ರಿಗೆ ವಾರ್ಷಿಕ ೫೪ ರಿಂದ ೫೫ ಕೋಟಿ ರೂಪಾಯಿಗಳ ತೆರಿಗೆದಾರನ ಹಣವನ್ನು ರಕ್ಷಣೆಗಾಗಿ ವೆಚ್ಚ ಮಾಡಲಾಗುತ್ತಿದೆ. ದೇಶದ ಸಂವಿಧಾನದ ಪ್ರಕಾರ ಕಾನೂನು ಪಾಲಿಸಿ ಸಂಘವನ್ನು ನೊಂದಾಯಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯದ ಗೃಹಮಂತ್ರಿಗಳಾದ ಮಾನ್ಯ ಪ್ರಿಯಾಂಕ್ ಖರ್ಗೆರವರು ಒತ್ತಾಯಿಸಿದ್ದೇ ಪ್ರಮಾದವಾಗಿಬಿಟ್ಟಿದೆ. ಮಂತ್ರಿಗಳ ವಿರುದ್ಧ ಸಂಘ ಪರಿವಾರದವರು ಮನಸ್ಸಿಗೆ ಬಂದಂತೆ ವಿಷ ಕಾರುತ್ತಾ, ಹೀಯಾಳಿಸಿ ನಿತ್ಯವೂ ಬೈಗುಳದ ಸುರಿಮಳೆಗೈಯ್ಯುತ್ತಿರುವುದು ನಾಗರೀಕ ಸಮಾಜ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯದಿಲ್ಲ. ದೇಶವು ಪರಿಕೀಯರಿಂದ ಸ್ವಾತಂತ್ರ್ಯ ಪಡೆಯಲು ಹನಿರಕ್ತ ನೀಡದೇ ದೂರ ಉಳಿದ ಮನುವಾದಿಗಳು ಮನುಧರ್ಮವನ್ನು ದೇಶದಲ್ಲಿ ಮತ್ತೊಮ್ಮೆ ಜಾರಿಗೊಳಿಸಲು ಹವಣಿಸುತ್ತಿರುವ ಸಂಘ ಪರಿವಾರದ  ಕೋಮುವಾದಿ ರಾಜಕಾರಣ ದೇಶದ ಜನತೆಯಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ  ರಾಷ್ಟ್ರಪತಿಗಳು ಇಂತಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಕಲಿ ದೇಶಭಕ್ತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂವಿಧಾನಬದ್ಧ ಆಶಯದಂತೆ ಕಾನೂನುಬದ್ಧ ನೊಂದಣಿಗಾಗಿ ಒತ್ತಾಯಿಸಲು ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದರು.

ಸಂಘಪರಿವಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವೆಂಕಟರಮಣಪ್ಪ, ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಮರಿಯಪ್ಪ. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಪ್ರಜಾವಿಮೋಚನಾ ಸಮಿತಿ ಸ್ವಾಭಿಮಾನ ಸಂಘನೆಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯಹನುಮಣ್ಣ, ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ಸಂಚಾಲಕ ರಾಜುಸಣ್ಣಕ್ಕಿ ಮುಂತಾದವರು ಉಪಸ್ಥಿತರಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!