ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಂಜಾರ ಸಮುದಾಯದ ಅಧಿದೈವ, ಜಗದ್ಗುರು ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಾನವಾದ ಐತಿಹಾಸಿಕ ಭಾಯಾಗಢ ಸೂರಗೊಂಡನಕೊಪ್ಪದ ‘ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ’ಯ ಆಡಳಿತ ಮಂಡಳಿಗೆ ಚಿತ್ರದುರ್ಗ ಕ್ಷೇತ್ರದಿಂದ ನಿರ್ದೇಶಕರಾಗಿ ಯುವ ಮುಖಂಡರಾದ ಅನಿಲ್ ಕುಮಾರ್ ನಾಯಕ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಮುದಾಯದ ಸೇವಾ ಕಾರ್ಯಗಳಲ್ಲಿ ನಿರತರಾಗಿರುವ ಅನಿಲ್ ಕುಮಾರ್ ನಾಯಕ್ ಅವರ ಈ ಹೆಮ್ಮೆಯ ಸಾಧನೆಗೆ ಹಾಗೂ ಮಹಾಮಠದ ಆಡಳಿತ ಮಂಡಳಿಗೆ ದೊರೆತ ಯುವ ಮತ್ತು ಸಮರ್ಥ ನಾಯಕತ್ವಕ್ಕೆ ವಿವಿಧ ಗಣ್ಯರು, ಹಿತೈಷಿಗಳು ಹಾಗೂ ಆತ್ಮೀಯ ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದು, ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮಠದ ಅಭಿವೃದ್ಧಿ ಹಾಗೂ ಸಮುದಾಯದ ಸಂಘಟನೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿರುವ ಇವರ ಈ ಹೊಸ ಜವಾಬ್ದಾರಿಯು ಯಶಸ್ವಿಯಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ.




