ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಿತ್ಯ ನಿರಂತರ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸದಾ ನೊಂದ ಜನರ ಪರ ಧ್ವನಿಯಾಗಿ ಶ್ರಮಿಸುತ್ತಿರುವ ಖ್ಯಾತ ವಕೀಲರು, ಕನ್ನಡಪರ ಹೋರಾಟಗಾರರು ಸಮಾಜಸೇವಕರುವಾದ ರವಿ ಮಾವಿನಕುಂಟೆಯವರ ಹುಟ್ಟುಹಬ್ಬವನ್ನು ನಿರ್ಗತಿಕ ಕಡುಬಡವರಿಗೆ ಆಹಾರ ವಿತರಣೆ, ವಯೋವೃದ್ಧರಿಗೆ ಬಟ್ಟೆ ವಿತರಣೆ, ಸರ್ಕಾರಿ ಶಾಲಾ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೋಟ್ ಬುಕ್ ಪೆನ್ನುಗಳ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿರುವುದು ಸಂತಸ ತಂದಿದ್ದೆ ಎಂದು ನಿರಂತರ ಅನ್ನದಾಸೋಹ ಸಮಿತಿಯ ಮುಖ್ಯಸ್ಥ ಅನ್ನದಾಸೋಹಿ ಮಲ್ಲೇಶ್ ತಿಳಿಸಿದರು.
ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅನ್ನದಾಸೋಹ ಸಮಿತಿಯ ಕಾರ್ಯಕ್ರಮದಲ್ಲಿ 2390 ದಿನದ ವಿಶೇಷ ಕಾರ್ಯಕ್ರಮವಾಗಿಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ತಾಲೂಕಿನ ಖ್ಯಾತ ವಕೀಲರಾದ ರವಿ ಮಾವನಕುಂಟೆ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ವಕೀಲ ವೃತ್ತಿಯೊಂದಿಗೆ ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ರವಿ ಮಾವಿನಕುಂಟೆ ಅವರ 47ನೇ ಹುಟ್ಟುಹಬ್ಬದ ಆಚರಣೆಯನ್ನು ಇಂದು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಅವರಿಗೆ ದೇವರು ಮತ್ತಷ್ಟು ಶಕ್ತಿ ನೀಡಲಿ ಸಮಾಜಕ್ಕೆ ಮತ್ತಷ್ಟು ಉತ್ತಮ ಸೇವಾ ಕಾರ್ಯಗಳನ್ನು ಮಾಡುವ ಶಕ್ತಿ ನೀಡಲಿ ಎಂದು ಈ ಮೂಲಕ ಕೋರುತ್ತೇವೆ ಎಂದರು.
ಕಲಾವಿದರಾದ ವೆಂಕಟರಾಜು ಮಾತನಾಡಿ ದುಂದು ವೆಚ್ಚ ಮಾಡುವ ಬದಲು ಅರ್ಥಪೂರ್ಣ ಹುಟ್ಟು ಹಬ್ಬದ ಆಚರಣೆ , ಸಮಾಜಕ್ಕೆ ಮಾದರಿ ಅಂತೆಯೇ ಇಂದು ರವಿ ಮಾವಿನಕುಂಟೆ ಅವರ ಅಭಿಮಾನಿಗಳೆಲ್ಲರೂ ಸೇರಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಈ ಮೂಲಕ ನೂರಾರು ಕುಟುಂಬಗಳಿಗೆ ಆಹಾರ ಮಾಡಿದ್ದೇವೆ ಎಂಬುದು ಸಾರ್ಥಕತೆ ಈ ಕಾರ್ಯಕ್ರಮ ಕೇವಲ ಆಹಾರಕ್ಕೆ ಸೀಮಿತವಾಗದೆ ವಯೋವೃದ್ಧರಿಗೆ ಬಟ್ಟೆ ವಿತರಣೆ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆಯಿಂದ ಕುಡಿರುವುದು ಮತ್ತಷ್ಟು ಸಂತಸ ತಂದಿದೆ ಎಂದರು.
ಸಮಾಜ ಸೇವಕರಾದ ಸೆಲ್ವಂ ಮಾತನಾಡಿ ಇವತ್ತು ದಿನ ವಿಶೇಷವಾಗಿದೆ ಸಂಭ್ರಮಾಚರಣೆಯು ಅನ್ನದಾಸೋಹದ ಮೂಲಕ ನಡೆಯುತ್ತಿದೆ ಇದೊಂದು ಸಮಾಜಕ್ಕೆ ಮಾದರಿಯೇ ಸರಿ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು ಸ್ನೇಹಿತರು ಆದಂತಹ ರವಿಮಾಮನಕುಂಟೆ ಅವರ ಹುಟ್ಟುಹಬ್ಬವನ್ನು ಈ ರೀತಿ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಭಾವನೆ ಮೂಡಿಸಿದ ಎಂದರು.
ಮುಖಂಡರಾದ ಶ್ರೀನಿವಾಸಲು, ಸಂತೋಷ್, ವಾಸು, ಜಯಂತ್ ಸೇರಿದಂತೆ ಹಲವು ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರವಿಮಾವಿನಕುಂಟೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಕೋರಿದರು. ಈ ಕಾರ್ಯ ಸದಾ ಹೀಗೆ ಮುಂದುವರೆಯಲಿ ಸಮಾಜಕ್ಕೆ ಅವರಿಂದ ಮತ್ತಷ್ಟು ಸೇವೆ ಲಭಿಸುವಂಥಾಗಲಿ ಎಂದು ಹಾರೈಸಿದರು



