Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬಾಬಾಸಾಹೇಬರ ವೈಚಾರಿಕ ಹಾದಿ ಅನಿವಾರ್ಯ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 
ನಗರದ ಬುದ್ಧ ನಗರದಲ್ಲಿರುವ ಬುದ್ಧ ಸರ್ಕಲ್‌ನಲ್ಲಿ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 70ನೇ ಧಮ್ಮ ದೀಕ್ಷಾ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬುದ್ಧ ವಿಹಾರದ ಮುಖ್ಯಸ್ಥ ಬಿ.ಪಿ. ತಿಪ್ಪೇಸ್ವಾಮಿ ಮಾತನಾಡಿ, "ಶೋಷಣೆ ಹಾಗೂ ಅಸಮಾನತೆಯ ವಿರುದ್ಧ ಹೋರಾಡಿದ ಅಂಬೇಡ್ಕರ್ ಅವರು ಮಾನವೀಯ ಮೌಲ್ಯಗಳ ಸಮಾನ ಸಮಾಜಕ್ಕಾಗಿ ಬೌದ್ಧ ಧರ್ಮ ಸ್ವೀಕರಿಸಿದರು. ಕೇವಲ ಸೌಲಭ್ಯಗಳಿಗಿಂತ ಸ್ವಾಭಿಮಾನದ ಬದುಕು ಮುಖ್ಯ ಎಂದು ಪ್ರತಿಪಾದಿಸಿದ ಅವರ ಧಮ್ಮಚಕ್ರ ಪ್ರವರ್ತನ ರಥವನ್ನು ಮುನ್ನಡೆಸಿ, ಪ್ರಬುದ್ಧ ಭಾರತ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯ" ಎಂದರು. ಅಲ್ಲದೆ, ತಮ್ಮ ಸಂಪಾದನೆಯ ಶೇ. 20 ರಷ್ಟನ್ನು ಸಮಾಜ ಸೇವೆಗೆ ನೀಡಬೇಕೆಂಬ ಬಾಬಾಸಾಹೇಬರ ತತ್ತ್ವವನ್ನು ಸ್ಮರಿಸಿ, ಸಮಾಜಮುಖಿ ಸೇವೆಗೆ ಕರೆ ನೀಡಿದರು.

ಮುಖ್ಯ ಭಾಷಣ ಮಾಡಿದ ಅಂಬೇಡ್ಕರ್ ವಿಚಾರವಾದಿ ದ್ಯಾಮಣ್ಣ ಮೈತ್ರಿ, "ದೇಶದ ನೈತಿಕ ಹಾಗೂ ಬೌದ್ಧಿಕ ಶಕ್ತಿ ಬುದ್ಧನ ತತ್ತ್ವಗಳಲ್ಲಿದೆ. ಬಹುಜನರು ರಾಜ್ಯಾಧಿಕಾರ ಪಡೆಯುವ ಜೊತೆಗೆ ಸಾಂಸ್ಕೃತಿಕ ಜಾಗೃತಿಯನ್ನು ಮನೆ ಮನೆಗೆ ತಲುಪಿಸಬೇಕು" ಎಂದರು. ಹಾಗೆಯೇ, ಚಿತ್ರದುರ್ಗದಲ್ಲಿ ಹೆಚ್ಚುತ್ತಿರುವ ಕೋಮುದ್ವೇಷ ಹಾಗೂ ಸಮುದಾಯದೊಳಗಿನ ಭಿನ್ನಾಭಿಪ್ರಾಯಗಳ ವಿರುದ್ಧ ಪ್ರಜ್ಞಾವಂತರು ಒಂದಾಗಬೇಕೆಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸೀಗೆಹಟ್ಟಿ ಶಿವಶಂಕರ್ ಅವರು ಬುದ್ಧ ವಂದನೆ ಮತ್ತು ಪಂಚಶೀಲ ಪಠಿಸಿದರೆ, ಸಿದ್ದೇಶ್ ಅವರು 22 ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಬಿ.ಎಸ್.ಐ ಪದಾಧಿಕಾರಿಗಳು, ಪ್ರಮುಖ ಚಿಂತಕರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಆಯುಧ ಪೂಜೆಕೆಪಿಸಿಸಿ ನಿಧಿಗೆ ಶಾಲೂ-ಹಾರದ ಬದಲು ದೇಣಿಗೆ ನೀಡಿ: ಬಿ.ಕೆ. ಹರಿಪ್ರಸಾದ್ ಕರೆ ಹಿರಿಯೂರು ತಾಲೂಕಿನಲ್ಲಿ ಮಳೆ ಅಬ್ಬರ: ಬಬ್ಬೂರು ಸಮೀಪದ ಜಮೀನಿನಲ್ಲಿ ನಿಂತ ಮಳೆ ನೀರುಸಮಾನತೆಗಾಗಿ ಸಹಭೋಜನ: ಅರಿವು ಭಾರತದಿಂದ ವಿಶಿಷ್ಟ ಚಿಂತನೆ–ರಾಹುಲ್ ಗಾಂಧಿ ವಿರುದ್ಧ ಗರ್ಭಿಣಿ ಪತ್ರಕರ್ತೆಯ ಗಂಭೀರ ಆರೋಪ: ಪೊಲೀಸ್ ಆಯುಕ್ತರಿಗೆ ಕ್ರಿಮಿನಲ್ ದೂರುಸರ್ಕಾರಿ ನೌಕರರು ಹಾಗೂ ಗುತ್ತಿಗೆ ಸಿಬ್ಬಂದಿಗೆ ರಾತ್ರಿ ಹಾಜರಾತಿ ಕಡ್ಡಾಯ: ರಾಜ್ಯ ಸರ್ಕಾರದ ಮಹತ್ವದ ಆದೇಶಮಹತ್ವದ ಆಡಳಿತಾತ್ಮಕ ಸುಧಾರಣೆ: ಸಕಾಲ ವ್ಯಾಪ್ತಿಗೆ ಎಲ್ಲಾ ಸರ್ಕಾರಿ ಸೇವೆಗಳು ಹಾಗೂ ಆರ್‌ಟಿಐ ಆನ್‌ಲೈನ್ ಕಡ್ಡಾಯನೈಸ್ ರಸ್ತೆಯಲ್ಲಿ ಕೆಮಿಕಲ್ ಟ್ಯಾಂಕರ್ ಸ್ಫೋಟ: ಮುಗಿಲು ಮುಟ್ಟಿದ ದಟ್ಟ ಕಪ್ಪು ಹೊಗೆ, ಟ್ರಾಫಿಕ್ ಜಾಮ್!1,000 ಗ್ರಾಮೀಣ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆಬಿ.ಎಸ್. ಯಡಿಯೂರಪ್ಪ ಸ್ಫೋಟಕ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಸಿ ಕೆಳಗಿಳಿಸಲಾಗಿದೆ