Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ನೇಕಾರರರನ್ನು ಉಳಿಸುವ ನಿಟ್ಟಿನಲ್ಲಿ ಬಂದ್  ಅನಿವಾರ್ಯ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಜನವರಿ
5ರ ಸೋಮವಾರದಂದು ಬೆಳಿಗ್ಗೆ 6 ಸಂಜೆ 6 ಗಂಟೆವರೆಗೆ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದ್ದು ನೇಕಾರರರನ್ನು ಉಳಿಸುವ ನಿಟ್ಟಿನಲ್ಲಿ ನೇಕಾರರನ್ನು ಬೆಂಬಲಿಸಿ ಎಲ್ಲರು ಬಂದ್ ನಲ್ಲಿ ಭಾಗವಹಿಸಬೇಕೆಂದು ನೇಕಾರ ಹೋರಾಟ ಸಮಿತಿ ಮುಖಂಡ ಪಿ ಎ ವೆಂಕಟೇಶ್ ಮನವಿ ಮಾಡಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ದೊಡ್ಡಬಳ್ಳಾಪುರ ಟೆಕ್ಸ್‌ಟೈಲ್ ವೀವರ್ಸ್ ಅಸೋಸಿಯೇಷನ್, ನೇಕರರ ಹೋರಾಟ ಸಮಿತಿ, ಕೂಲಿ ನೇಕಾರರ ಹಿತರಕ್ಷಣಾ ಸಮಿತಿ, ದೊಡ್ಡಬಳ್ಳಾಪುರ ಎಲ್ಲಾ ನೇಕಾರ ಸಂಘಟನೆಗಳು ಮತ್ತು ಸಹಕಾರಿ ಸಂಘಗಳ ಸಹಕಾರದೊಂದಿಗೆ ಜನವರಿ 5ರಂದು ಬಂದ್ ಕರೆ ನೀಡಲಾಗಿದೆ.  ನೇಕಾರಿಕೆ ದೊಡ್ಡಬಳ್ಳಾಪುರದ ಜೀವನಾಡಿ ಗುಡಿ ಕೈಗಾರಿಕೆಯಾಗಿದ್ದು, ಇಂದು ನೇಕಾರರು ಅಳಿವಿನ ಅಂಚಿನಲ್ಲಿದ್ದೇವೆ ಲಾಳಿ ಸಹಿತ ವಿದ್ಯುತ್ ಮಗ್ಗಗಳ ಸೀರೆಗಳನ್ನು ಮಾರಾಟ ಮಾಡಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಸೂರತ್ ನ ರಿಪೀಯರ್ ಮಗ್ಗದ ಸೀರೆಗಳು ಇದಕ್ಕೆ ಕಡಿವಾಣ ಹಾಕುವ ಹಾಗೂ ನೇಕಾರರ ಪರಿಸ್ಥಿತಿಯನ್ನು ಸರಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಈ ಬಂದ್ ಕರೆಯಲಾಗಿದೆ ಎಂದರು.


ಪ್ರಮುಖ ಒತ್ತಾಯಗಳು-
ದೊಡ್ಡಬಳ್ಳಾಪುರದ ಜೀವನಾಡಿ ಗುಡಿ ಕೈಗಾರಿಕೆ ನೇಯ್ಗೆ ಉದ್ಯಮ ಉಳಿಸಲು ಲಾಳಿ ಸಹಿತ ವಿದ್ಯುತ್ ಮಗ್ಗಗಳ ಮೀಸಲಾತಿ (ರಿಸರ್ವೇಶನ್) ಅಧಿನಿಯಮ ರೂಪಿಸಲು


ನೇಯ್ದೆ ಉದ್ಯಮವನ್ನು ನಂಬಿರುವ ಲಕ್ಷಾಂತರ ಜನರ ಬದುಕನ್ನು ಉಳಿಸಲು ಸರ್ಕಾರ ತಕ್ಕಣ ಸೀರೆ ಖರೀದಿಸಲು ಒತ್ತಾಯಿಸಿ ಲಾಳಿ ರಹಿತ ಆಧುನಿಕ ಮಗ್ಗಗಳಲ್ಲಿ ಉತ್ಪಾದಿಸಿದ ಸೂರತ್ ಮತ್ತು ಬೆಳಗಾವಿ ಸೀರೆಗಳನ್ನು ನಿಲ್ಲಿಸಿ, ನೇಯ್ದೆ ಉದ್ಯಮ ಉಳಿಸಲು ಲಾಳಿರಹಿತ ರೇಪಿಯ‌ರ್ ಮಗ್ಗಗಳಲ್ಲಿ ಸಾಂಪ್ರದಾಯಿಕ ಜರಿ ಮಿಶ್ರಿತ ಸೀರೆ ನೇಯುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಕಾಯ್ದೆ ರೂಪಿಸಬೇಕೆಂದು ಅಳಿವಿನ ಅಂಚಿನಲ್ಲಿರುವ ನೇಕಾರರನ್ನು ಮತ್ತು ನೇಕಾರ ಕಾರ್ಮಿಕರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಧಾವಿಸಿ ಬರಬೇಕೆಂದು ಒತ್ತಾಯಿಸಿ ನೇಕಾರರು ಬಂದ್ ಗೆ ಮುಂದಾಗಿದ್ದಾರೆ.


ನೇಯ್ದೆ ಉದ್ಯಮ ನಂಬಿ ಲಕ್ಷಾಂತರ ಜನರು ಬದುಕನ್ನು ಸಾಗಿಸುತ್ತಿದ್ದಾರೆ. ಆದರೆ ಲಾಳಿ ರಹಿತ ಆಧುನಿಕ ಮಗ್ಗಗಳಲ್ಲಿ ಉತ್ಪಾದಿಸಿದ ಸೂರತ್ ಮತ್ತು ಬೆಳಗಾವಿ ಸೀರೆಗಳ ಹಾವಳಿಯಿಂದ ನಮ್ಮ ನೇಕಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನೇಕಾರಿಕೆ  ಉದ್ಯಮ ಉಳಿಸಲು ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ ನೇಕಾರರರನ್ನು ಉಳಿಸಿಬೇಕು ಎಂದರು.

ಲಾಳಿರಹಿತ ರೇಪಿಯರ್ ಮಗ್ಗಗಳಲ್ಲಿ ಸಾಂಪ್ರದಾಯಿಕ ಜರಿ ಮಿಶ್ರಿತ ಸೀರೆ ನೇಯುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಕಾಯ್ದೆ ರೂಪಿಸಿ ಅಳಿವಿನ ಅಂಚಿನಲ್ಲಿರುವ ನೇಕಾರರನ್ನು ಮತ್ತು ನೇಕಾರ ಕಾರ್ಮಿಕರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಧಾವಿಸಿ ಬರಬೇಕೆಂದು ಮನವಿ ಮಾಡಿದರು.

ಮುಖಂಡರಾದ  ನರಸಿಂಹಮೂರ್ತಿ ಮಾತನಾಡಿ ಈ ಸ್ವಯಂ ಪ್ರೇರಿತ ಬಂದ್ ಅನ್ನು ಬೆಂಬಲಿಸಲು ಊರಿನ ಎಲ್ಲಾ ಸಂಘ/ಸಂಸ್ಥೆಗಳು, ರಾಜಕೀಯ ಪಕ್ಷಗಳು, ರೈತ ಕಾರ್ಮಿಕ, ದಲಿತ, ಕನ್ನಡಪರ, ವಿದ್ಯಾರ್ಥಿ-ಯುವಜನ, ಮಹಿಳಾ ಸಂಘಗಳು, ಎಲ್ಲಾ ರೀತಿಯ ವ್ಯಾಪಾರ ಸಂಘಗಳು, ಎಲ್ಲಾ ನೇಕಾರ ಸಂಘಟನೆಗಳು, ಸಹಕಾರಿ ಸಂಘಗಳು ಭಾಗವಹಿಸಿ ಬೆಂಬಲಿಸಲಿವೆ.

ಜನವರಿ 4 ರಂದು ನಗರದ ಬಯಲು ಬಸವಣ್ಣ ದೇವಸ್ಥಾನದ ಮುಂಭಾಗದಿಂದ ಸಂಜೆ 4ಗಂಟೆಗೆ ಬೈಕ್ ರಾಲಿ ಏರ್ಪಡಿಸಲಾಗಿದೆ ಹಾಗೂ ಜನವರಿ 5ರಂದು ಸಿದ್ದಲಿಂಗಯ್ಯ ವೃತ್ತ (ಬಸ್ ನಿಲ್ದಾಣ) ದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ ಈ ಬಂದ್ ಯಶಸ್ವೀಗೊಳಿಸಲು ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲಿಸಬೇಕು ಎಂದರು.


ಈ ವೇಳೆ ದೊಡ್ಡಬಳ್ಳಾಪುರ ಟೆಕ್ಸ್ ಟೈಲ್ ವೀವರ್ಸ್ ಅಸೋಸಿಯೇಷನ್ ಪದಾಧಿಕಾರಿಗಳುದೊಡ್ಡಬಳ್ಳಾಪುರ ತಾಲೂಕು ಎಲ್ಲಾ ನೇಕಾರ ಸಂಘಟನೆಗಳು, ಮತ್ತು ನೇಕಾರ ಸಹಕಾರ ಸಂಘಗಳು, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೇಕಾರ ಸಂಘಟನೆಗಳ ಮುಖಂಡರು, ಸರ್ವ ಪಕ್ಷಗಳ ಮುಖಂಡರು, ಜವಳಿ ಉದ್ಯಮದ ತಜ್ಞರು, ಜನಪ್ರತಿನಿಧಿಗಳು  ಹಾಜರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!