Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭಾರತದ ಸುನಿಕಾರ್ನ್ ರಾಜಧಾನಿ ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ​

 ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಭಾರತದ ಯುನಿಕಾರ್ನ್ ರಾಜಧಾನಿ ಮಾತ್ರವಲ್ಲ, 1 ಬಿಲಿಯನ್ ಡಾಲರ್ ಮೌಲ್ಯದತ್ತ ದಾಪುಗಾಲು ಹಾಕುತ್ತಿರುವ 'ಸುನಿಕಾರ್ನ್' ಸಂಸ್ಥೆಗಳ ಅತ್ಯಂತ ಪ್ರಬಲ ನೆಲೆ ಹಾಗೂ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

​ಭಾರತದಲ್ಲಿರುವ ಒಟ್ಟು 133 ಯುನಿಕಾರ್ನ್‌ಗಳಲ್ಲಿ ಸುಮಾರು 55 ಯುನಿಕಾರ್ನ್ ಸಂಸ್ಥೆಗಳಿಗೆ ಬೆಂಗಳೂರು ಕೇಂದ್ರಸ್ಥಾನವಾಗಿದ್ದು, ಇವುಗಳ ಒಟ್ಟು ಮೌಲ್ಯ ಅಂದಾಜು 196 ಬಿಲಿಯನ್ ಡಾಲರ್‌ಗಳಷ್ಟಿದೆ. ಈ ಮೂಲಕ ಜಾಗತಿಕವಾಗಿ ಬೇ ಏರಿಯಾ, ನ್ಯೂಯಾರ್ಕ್, ಬೀಜಿಂಗ್ ಹಾಗೂ ಲಂಡನ್‌ಗೆ ನಂತರದ ಸ್ಥಾನದಲ್ಲಿ ನಿಲ್ಲುವ ಮೂಲಕ ಬೆಂಗಳೂರು ವಿಶ್ವದ 5ನೇ ಅತಿ ದೊಡ್ಡ ಯುನಿಕಾರ್ನ್ ಹಬ್ ಎನಿಸಿಕೊಂಡಿದೆ.

Advertisement

​ಮುಂದಿನ ಪೀಳಿಗೆಯ ನವೋದ್ಯಮಗಳಲ್ಲೂ ಬೆಂಗಳೂರು ಮುಂಚೂಣಿ:​ಸುನಿಕಾರ್ನ್‌ಗಳ ಭದ್ರಕೋಟೆ: ದೇಶದಲ್ಲಿರುವ ಒಟ್ಟು 156 ಸುನಿಕಾರ್ನ್‌ಗಳಲ್ಲಿ ಮೂರನೇ ಒಂದಕ್ಕಿಂತ ಹೆಚ್ಚು ಅಂದರೆ 56 ಸುನಿಕಾರ್ನ್‌ಗಳನ್ನು ಹೊಂದಿರುವ ಬೆಂಗಳೂರು, ದೆಹಲಿ (38) ಹಾಗೂ ಮುಂಬೈ (34) ನಗರಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ.

​ವಿವಿಧ ಕ್ಷೇತ್ರಗಳಲ್ಲಿ ನಾವೀನ್ಯತೆ: ಈ ನವೋದ್ಯಮಗಳು ಫಿನ್‌ಟೆಕ್, ಎಂಟರ್‌ಪ್ರೈಸ್ ಟೆಕ್, ಇ-ಕಾಮರ್ಸ್, ಕೃತಕ ಬುದ್ಧಿಮತ್ತೆ, ಹೆಲ್ತ್‌ಟೆಕ್, ಕ್ಲೀನ್‌ಟೆಕ್, ಅಗ್ರಿಟೆಕ್ ಹಾಗೂ ಸುಧಾರಿತ ಹಾರ್ಡ್‌ವೇರ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

​ರಾಜ್ಯ ಸರ್ಕಾರದ ಸೂಕ್ತ ನೀತಿಗಳು, ಪ್ರಬುದ್ಧ ಮಾನವ ಸಂಪನ್ಮೂಲ ಹಾಗೂ ಅತ್ಯುತ್ತಮ ನಾವೀನ್ಯತಾ ಪರಿಸರ ವ್ಯವಸ್ಥೆಯಿಂದಾಗಿ, ಅಮೆರಿಕ, ಯುರೋಪ್ ಹಾಗೂ ಚೀನಾವನ್ನು ಹೊರತುಪಡಿಸಿ ವಿಶ್ವದ ಅತಿ ದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿ ಬೆಂಗಳೂರು ಬೆಳೆಯಲಿದೆ. ಭಾರತದ ಮುಂದಿನ ಪೀಳಿಗೆಯ ಪ್ರಮುಖ ಉದ್ಯಮ ಸಂಸ್ಥೆಗಳು ನಿರ್ಮಾಣವಾಗುವ ಪ್ರಮುಖ ತಾಣವಾಗಿ ಬೆಂಗಳೂರು ಮುಂದುವರಿಯಲಿದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೋಮಶೆಟ್ಟಿ ಹಳ್ಳಿ ಕೋಳಿ ಫಾರಂ ಗೆ ಚಿರತೆ ದಾಳಿ.. ಆತಂಕ ಗೊಂಡ ಗ್ರಾಮಸ್ಥರುಭದ್ರಾ ನೀರು ಕೆರೆಗಳಿಗೆ ಹರಿಯದೆ ಅಯೋಮಯ: ತಾವಂದಿ ಕೆರೆಗಳ ಭರ್ತಿ ಕೇವಲ ಕನಸಿನ ಮಾತು!75 ವರ್ಷ ಮೇಲ್ಪಟ್ಟ ಬಿಪಿಎಲ್‌ಹಿರಿಯ ನಾಗರಿಕರಿಗೆ ಬೆರಳಚ್ಚು ವಿನಾಯಿತಿದಾವಣಗೆರೆ ಪೂರ್ವ ವಲಯದ ನೂತನ ಐಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಎನ್. ಸತೀಶ್ ಕುಮಾರ್ ನೇಮಕಶಾಲಾ-ಕಾಲೇಜುಗಳ ಸಮಯ ಬದಲಾವಣೆಗೆ ರಾಜ್ಯ ಸರ್ಕಾರ ಚಿಂತನೆ ಪ್ರತಾಪ್‌ಸಿಂಹ ಠಾಣೆಗೆ ನುಗ್ಗಿದರೆ ಪರಪ್ಪನ ಅಗ್ರಹಾರ ಗ್ಯಾರಂಟಿ ಎಚ್ಚರಿಕೆಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹ: ಆರ್. ಅಶೋಕ್ಕಾಂಗ್ರೆಸ್‌ಸರ್ಕಾರದಿಂದ ಗಣೇಶ ಹಬ್ಬಕ್ಕೆ ಕಿರುಕುಳ: ಇನ್ಸ್‌ಪೆಕ್ಟರ್‌ ರನ್ನು ಸಸ್ಪೆಂಡ್ ಮಾಡಲಿ- ಆರ್.ಅಶೋಕ್ಗಣೇಶ ಬಿಜೆಪಿಯವರ ಆಸ್ತಿಯಲ್ಲ, ಎಲ್ಲರ ಆಸ್ತಿ: ಮುಖ್ಯಮಂತ್ರಿ ಡಿಕೆಶಿಇಡಿ ಹಿರಿಯ ಅಧಿಕಾರಿಗಳ ತಾಂತ್ರಿಕ ಸಮಿತಿಯಿಂದ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಪ್ರಮುಖ ಹಗರಣಗಳ ತನಿಖೆ ಚುರುಕು