ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು, ಕೌಶಲ್ಯ ಅಭಿವೃದ್ದಿ ನಿಗಮ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಚಿತ್ರದುರ್ಗ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಹಾಸಿನಿ ಹರ್ಬಲ್ ಬ್ಯೂಟಿಪಾರ್ಲರ್ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 27 ರಿಂದ 30 ರವರೆಗೆ ಪರಿಶಿಷ್ಟ ಪಂಗಡದ ಮಹಿಳೆಯರಿಗೆ 4 ವಾರಗಳ ಬ್ಯೂಟಿಷಿಯನ್ ವಿಷಯಧಾರಿತ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಈ ತರಬೇತಿ ಕಾರ್ಯಕ್ರಮದಲ್ಲಿ 4 ವಾರಗಳ ಬ್ಯೂಟಿಷಿಯನ್ ವಿಷಯಧಾರಿತ ಉದ್ಯಮಶೀಲತಾಭಿವೃದ್ಧಿ ತರಬೇತಿಯನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ, 18 ರಿಂದ 35 ವರ್ಷ ವಯೋಮಿತಿಯ 10ನೇ ತರಗತಿ ಪಾಸಾದ ಪರಿಶಿಷ್ಟ ಪಂಗಡದ ಮಹಿಳಾ ಸ್ವ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಬಹುದಾಗಿದೆ, ಚಿತ್ರದುರ್ಗ ಜಿಲ್ಲೆಯ ಸ್ವ ಉದ್ಯೋಗ ಆಸಕ್ತಿಯುಳ್ಳ 30 ಮಹಿಳೆಯರು ಈ ತರಬೇತಿಗೆ ಮುಂಗಡವಾಗಿ ತಮ್ಮ ಹೆಸರನ್ನು ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಜೊತೆಗೆ 3 ಪಾಸ್ ಪೋರ್ಟ್ ಅಳತೆಯ ಪೋಟೋ, ಎಸ್‍ಎಸ್‍ಎಲ್‍ಸಿ ಮಾರ್ಕ್‍ಸ್ ಕಾರ್ಡ್, ಬಯೋಡಾಟಾ, ಆಧಾರ್‍ಕಾರ್ಡ್ ಹಾಗೂ ಜಾತಿ ,ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಿದ್ದಲ್ಲಿ skillmission.karnataka.gov.in ವೆಬ್‍ಸೈಟ್‍ನಲ್ಲಿ ನೋಂದಾಯಿಸಿ ಎಸ್‍ಎಎಫ್ ನಂಬರನ್ನು ನಮ್ಮ ಸಂಸ್ಥೆಯಿಂದ ಪಡೆಯಲಾಗುವುದು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅಕ್ಟೋಬರ್ 22 ಕೊನೆಯ ದಿನವಾಗಿದೆ
ಅರ್ಜಿ ಸಲ್ಲಿಸಲು ಬಯಸುವರು ಉಪ ನಿರ್ದೇಶಕರು, ಸಿಡಾಕ್, ಕಚೇರಿ ಜಿಲ್ಲಾ ಕೈಗಾರಿಕಾ ಕೇಂದ್ರ ಚಿತ್ರದುರ್ಗ (ಮೋ. ಸಂಖ್ಯೆ 8197151653, 7760270058, 9448812974) ಕಚೇರಿ ವೇಳೆಯಲ್ಲಿ ಇವರನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಸಿಡಾಕ್ ಉಪನಿರ್ದೇಶಕ ಶಿವಾನಂದ ವೆಂ.ಎಲಿಗಾರ ತಿಳಿಸಿದ್ದಾರೆ.




