ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯಲ್ಲಿ ನಡೆದ ಕ್ಯಾಬ್ ಚಾಲಕನಿಂದ ನಡೆದ ಏಳು ಜನರ ಸರಣಿ ಕೊಲೆ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪೂರ್ವಯೋಜಿತ ಕೃತ್ಯ: ಇದು ಆಕಸ್ಮಿಕ ಘಟನೆಯಲ್ಲ, ಬದಲಿಗೆ ಹೆಂಡತಿಯ ಕಡೆಯ ಕುಟುಂಬಸ್ಥರನ್ನು ಗುರಿಯಾಗಿಸಿಕೊಂಡು ಅತ್ಯಂತ ವಿಕೃತ ಮನಸ್ಥಿತಿಯಿಂದ ಮಾಡಿದ ಪೂರ್ವಯೋಜಿತ ಕೊಲೆಯಾಗಿದೆ.
ಮಗಳ ಪ್ರಚೋದನೆ ಮತ್ತು ಬ್ರೈನ್ ವಾಶ್: ಆರೋಪಿಯು ತನ್ನ 17-18 ವರ್ಷದ ಮಗಳ ಮನಪರಿವರ್ತನೆ (ಬ್ರೈನ್ ವಾಶ್) ಮಾಡಿ ಈ ಕೃತ್ಯಕ್ಕೆ ಆಕೆಯಿಂದಲೂ ಪ್ರೋತ್ಸಾಹ ಪಡೆದುಕೊಂಡಿದ್ದಾನೆ.
ಸಾಕ್ಷ್ಯ ನಾಶಕ್ಕೆ ಯತ್ನ: ಹತ್ಯೆಗೀಡಾದವರ ಮೃತದೇಹಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಲೇವಾರಿ ಮಾಡಲಾಗಿದ್ದು, ಪ್ರಕರಣದ ಹಿಂದಿರುವ ನೈಜ ಕಾರಣ ಹಾಗೂ ಖಿನ್ನತೆ ಅಥವಾ ಆಸ್ತಿ ವಿವಾದದ ಕೋನಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
ಪೊಲೀಸ್ ಸಂಪರ್ಕದ ಊಹಾಪೋಹಕ್ಕೆ ಸ್ಪಷ್ಟನೆ: ಆರೋಪಿಯ ಡೈರಿಯಲ್ಲಿ ಸಿಕ್ಕ ಪೊಲೀಸ್ ಅಧಿಕಾರಿಗಳ ಸಂಖ್ಯೆಗಳು ಸಾರ್ವಜನಿಕವಾಗಿ ಲಭ್ಯವಿರುವ ತುರ್ತು ಸಂಖ್ಯೆಗಳಾಗಿದ್ದು, ಪ್ರಕರಣಕ್ಕೂ ಪೊಲೀಸರ ಸಹಕಾರಕ್ಕೂ ಯಾವುದೇ ಸಂಬಂಧವಿಲ್ಲ.
ಆರೋಪಿಯು 2018ರ ದರೋಡೆ ಪ್ರಕರಣದಲ್ಲೂ ಭಾಗಿಯಾಗಿದ್ದ ಹಿನ್ನೆಲೆಯಿದ್ದು, ಕೃತ್ಯದ ಕಠೋರತೆ ಹಾಗೂ ಆರೋಪಿಯ ವಿಕೃತ ಮನಸ್ಥಿತಿಯ ಕುರಿತು ತನಿಖಾ ವರದಿ ಬಂದ ನಂತರವೇ ಪೂರ್ಣ ಮಾಹಿತಿ ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.




