Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎಸ್ಐಆರ್ ತಿದ್ದುಪಡಿ ಅವಧಿ ವಿಸ್ತರಣೆಗೆ ಸಿಐಟಿಯು ಒತ್ತಾಯ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (
SIR) - ASDDO ಪಟ್ಟಿಯ ಪ್ರಕಟಣೆ, enumeration ಹಂತದ ಅವಧಿ ವಿಸ್ತರಣೆ ಮಾಡಬೇಕು ಹಾಗೂ Phase-II ಕಾರ್ಯವಿಧಾನಗಳನ್ನು ತಕ್ಷಣ ಪ್ರಕಟಿಸಬೇಕು ಎಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಆರ್.ಚಂದ್ರತೇಜಸ್ವಿ ಅವರು ಒತ್ತಾಯಿಸಿದರು.

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR)ಯ ಪ್ರಕ್ರಿಯೆ ಬಗ್ಗೆ ನಗರದ ಸಿಐಟಿಯು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಂಡು ಬಂದಿರುವ ಹಲವು ದೋಷಗಳು ಮತ್ತು ವಿಪರೀತಗಳನ್ನು ಆಯೋಗದ ಗಮನಕ್ಕೆ ತರಬಯಸುತ್ತೇವೆ ಮತ್ತು ತುರ್ತುಕ್ರಮಗಳಿಗೆ ಒತ್ತಾಯಿಸುತ್ತೇವೆ ಎಂದರು.

ASDDO (Absent, Shifted, Dead, Duplicate & Others) ಪಟ್ಟಿಯನ್ನು ಸಾರ್ವಜನಿಕರ ಪರಿಶೀಲನೆಗೆ ಲಭ್ಯಗೊಳಿಸುವ ಪ್ರಕ್ರಿಯೆ ಆರಂಭಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಇದೇ ಸಂದರ್ಭದಲ್ಲಿ, ASDDO ಪಟ್ಟಿಯಲ್ಲಿ ಕೆಲವು ಮತದಾರರ ಹೆಸರುಗಳು ತಪ್ಪಾಗಿ ಸೇರಿರುವ ಪ್ರಕರಣಗಳಿವೆ ಎಂದು ತಾವು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದೀರಿ. ಅಂತಹ ತಪ್ಪುಗಳಿಗೆ ಕಾರಣವಾಗಿರುವುದು ಚುನಾವಣಾ ಆಯೋಗವೆ ಆಗಿರುವಾಗ ಅದಕ್ಕಾಗಿ ಅರ್ಹ ಮತದಾರರು ಶಿಕ್ಷೆಗೆ ಒಳಗಾಗದಂತೆ ಕ್ರಮ ವಹಿಸುವುದು ತುರ್ತು ಅಗತ್ಯವಾಗಿದೆ ಎಂದರು.

ತಿದ್ದುಪಡಿ ಅವದಿ ವಿಸ್ತರಣೆಗೆ ಒತ್ತಾಯ
ಪ್ರಸ್ತುತ ಕರ್ನಾಟಕದಲ್ಲಿ 1.10 ಕೋಟಿಗೂ ಅಧಿಕ ಮತದಾರರ ಹೆಸರುಗಳು
ASDDO ಪಟ್ಟಿಯಲ್ಲಿದ್ದು, ತಮ್ಮ ಹೆಸರು ತಪ್ಪಾಗಿ ಸೇರಿದ್ದರೆ ಪರಿಶೀಲಿಸಿ ತಿದ್ದುಪಡಿ ಕೋರುವುದಕ್ಕೆ ಮತದಾರರಿಗೆ ಕೇವಲ ನಾಲ್ಕು ದಿನಗಳ ಸಮಯ ಮಾತ್ರ ಲಭ್ಯವಿದೆ. ಇದು ಸಹಜ ನ್ಯಾಯದ ತತ್ವಗಳಿಗೆ (principles of natural justice) ಹಾಗೂ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗೆ ವಿರುದ್ಧವಾಗಿದೆ. ಬಹಳ ಕಡೆ ಶಿಫ್ಟೆಡ್ ವಿಭಾಗದಲ್ಲಿ ಅತಿ ಹೆಚ್ಚು ಮತದಾರರ ಹೆಸರು ಸೇರಿದ ವರದಿಗಳಿವೆ. ಕಾರಣಾಂತರಗಳಿಂದ ವಾಸಸ್ಥಾನ ಬದಲಾಗಿರುವುದನ್ನು ದಾಖಲೆ ಮಾಡಲಾಗದ ಸ್ಥಿತಿಯಲ್ಲಿ ಬಹುಸಂಖ್ಯಾತ ಜನರಿರುವ ದೇಶ ಇದು. ಮತದಾರರ ಪಟ್ಟಿಯನ್ನು ಸಮಗ್ರವಾಗಿ ಸರಿಪಡಿಸುವ ಶುದ್ದೀಕರಣದ ಹೆಸರಿನಲ್ಲಿ ಶುರು ಮಾಡಿದ ಪ್ರಕ್ರಿಯೆಯ ಪ್ರಾರಂಭದಲ್ಲಿಯೇ ಜನರಿಗೆ ಜೂನ್ 16 ರ ಒಳಗೆ ತಮ್ಮ ಅಧಿಕೃತ ವಾಸ ಸ್ಥಳದ ವಿವರಗಳನ್ನು ಸರಿಪಡಿಸಿಕೊಳ್ಳಲು ಮಾಹಿತಿ ನೀಡಬಹುದಾಗಿತ್ತು. ಅದು ಪರಿಷ್ಕರಣೆಯ ಸಂದರ್ಭದಲ್ಲಿ ಬಿ.ಎಲ್.ಓ.ಗಳ ಮೇಲಿನ ಅನಗತ್ಯ ಒತ್ತಡವನ್ನು ತಡೆಯುತ್ತಿತ್ತು, ಸಮಯದ ಉಳಿತಾಯವಾಗುತ್ತಿತ್ತು. ಜನರಲ್ಲಿ ತಮ್ಮ ಮತದಾರ ಪಟ್ಟಿಯ ಪರಿಷ್ಕರಣೆಗೆ ತಮ್ಮ ಜವಾಬ್ದಾರಿ ಏನೆಂದು ಮಾಹಿತಿಯೂ ದೊರೆಯುತ್ತಿತ್ತು. ಇಂತಹ ಕ್ರಮಕ್ಕೆ ಅಂದು ಮುಂದಾಗದೆ ಈಗ ಅದೇ ಕಾರಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಹೊರತಳ್ಳುವುದು ಪ್ರಜಾಪ್ರಭುತ್ವ ವಿರೋಧೀ ಕ್ರಮವೇ ಆಗಿದೆ ಎಂದು ಅಸಮಾಧಾನ ಹೊರಹಾಕಿದರು.

 ASDDO ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಕಾರ್ಯ ಆರಂಭವಾಗಿದ್ದರೂ, ಇನ್ನೂ ಎಲ್ಲಾ ಜಿಲ್ಲೆಗಳ ಪಟ್ಟಿಗಳು ಪ್ರಕಟಗೊಂಡಿಲ್ಲ. ಇದರಿಂದ ರಾಜ್ಯದ ಅನೇಕ ಮತದಾರರಿಗೆ ತಮ್ಮ ಹೆಸರುಗಳನ್ನು ಪರಿಶೀಲಿಸುವ ಅವಕಾಶವೇ ದೊರೆತಿಲ್ಲ.

ಭಾರತ ಚುನಾವಣಾ ಆಯೋಗದ 27.10.2025ರ ನಿರ್ದೇಶನಗಳು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ವಿಧಾನಗಳನ್ನು ಅನುಸರಿಸುವ ಸಂವಿಧಾನಾತ್ಮಕ ಕರ್ತವ್ಯವನ್ನು ಗಮನದಲ್ಲಿಟ್ಟುಕೊಂಡು, ಹಲವು ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ನಮ್ಮ ಪಕ್ಷ ಕೋರುತ್ತದೆ.

*ಕರ್ನಾಟಕದ ಎಲ್ಲಾ ಜಿಲ್ಲೆಗಳ ASDDO ಪಟ್ಟಿಗಳನ್ನು ತಕ್ಷಣವೇ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಅವು ಸುಲಭವಾಗಿ ಮತದಾರರಿಗೆ ಲಭ್ಯವಾಗುವಂತಿರಬೇಕು. ರೀಡೆಬಲ್ ಮಾದರಿಯಲ್ಲಿ ಇರಬೇಕು. ಮತ್ತು ತಾಂತ್ರಿಕ ನೈಪುಣ್ಯತೆ ಇರದ ಮತದಾರರ ಉಪಯೋಗಕ್ಕಾಗಿ ಜಿ.ಬಿ.ಎ, ನಗರ/ ಪುರಸಭೆಗಳು ಮತ್ತು ಪಂಚಾಯತ್ ಕಛೇರಿಗಳು ಸರಕಾರಿ ಶಾಲೆಗಳು ಹೀಗೆ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಪ್ರಕಟಿಸಬೇಕು. ಮಳೆಗಾಲ ಆಗಿರುವುದರಿಂದ ಮಳೆ/ ಗಾಳಿಗೆ ಸಿಕ್ಕಿ ಹಾಳಾಗದಂತಹ ರೀತಿಯಲ್ಲಿ ಪ್ರಕಟಿಸಬೇಕು.

*ಎಲ್ಲಾ ಪಟ್ಟಿಗಳು ಪ್ರಕಟಗೊಂಡಿರುವ ಕುರಿತು ಪತ್ರಿಕಾ ಪ್ರಕಟಣೆ, ಸಾಮಾಜಿಕ ಮಾಧ್ಯಮ ಹಾಗೂ ಇತರೆ ಅಧಿಕೃತ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.

*ಎಲ್ಲಾ ಮತದಾರರಿಗೆ ಸಮರ್ಪಕ ಅವಕಾಶ ದೊರಕುವಂತೆ Enumeration Phase  -ಗಣತಿ ಹಂತವನ್ನು ಕನಿಷ್ಟ ಸೆಪ್ಟೆಂಬರ್ 30.2026 ರ ವರೆಗೆ ವಿಸ್ತರಿಸಬೇಕು.

ರಾಜ್ಯದಲ್ಲಿ ASDDO ಪಟ್ಟಿಯ ಪ್ರಮಾಣ ಅಸಾಮಾನ್ಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಭಾರತ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದ ಪ್ರತಿಯೊಂದು ಮತಗಟ್ಟೆಯ ASDDO ಪಟ್ಟಿಯ ಸ್ವತಂತ್ರ ಲೆಕ್ಕಪರಿಶೋಧನೆ (Audit) ನಡೆಸಬೇಕು.

Phase-II ಕುರಿತು ತಕ್ಷಣ ಪ್ರಕಟಿಸಬೇಕಾದ ಕಾರ್ಯವಿಧಾನಗಳು (Protocols) Phase-II ಆರಂಭಕ್ಕೂ ಮುನ್ನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಕೆಳಕಂಡ ವಿಷಯಗಳಲ್ಲಿ ಲಿಖಿತ ಕಾರ್ಯವಿಧಾನಗಳನ್ನು ಪ್ರಕಟಿಸಬೇಕು.

Non-mapped voters ಗಳ ವಿಚಾರಣೆಯನ್ನು ಯಾವ ಅಧಿಕಾರಿ ನಡೆಸುತ್ತಾರೆ?
Logical Discrepancy - ತಾರ್ಕಿಕ ವ್ಯತ್ಯಾಸಗಳು ಎಂದು ಆತಾರ್ಕಿಕವಾಗಿ ಗುರುತಿಸಲೇಬಾರದು. ಹಾಗಿದ್ದೂ ಚುನಾವಣಾ ಆಯೋಗ ಅಂತಹ ಮಾದರಿಯನ್ನು ಅಳವಡಿಸಿಕೊಂಡರೆ ಹಾಗೆ ಗುರುತಿಸಲಾದ ಮತದಾರರಿಗೆ ಯಾವ ರೀತಿಯ ನೋಟಿಸ್, ವಿಚಾರಣೆ ಮತ್ತು ದಾಖಲೆ ಪರಿಶೀಲನೆ ನಡೆಯುತ್ತದೆ? ಎಂಬುದನ್ನು ತಿಳಿಸಬೇಕು.

ನೋಟಿಸ್ ಮತದಾರರಿಗೆ ಹೇಗೆ ತಲುಪುತ್ತದೆ ? ವಿಚಾರಣೆಯ ದಿನಾಂಕ, ಸ್ಥಳ ಮತ್ತು ಸಮಯವನ್ನು ಮತದಾರರಿಗೆ ಯಾವ ವಿಧಾನದಲ್ಲಿ ತಿಳಿಸಲಾಗುತ್ತದೆ? ASDDO ಪಟ್ಟಿಯಲ್ಲಿರುವ ಮತದಾರರಿಗೆ Form-6 ಅನ್ನು ಯಾರು ನೀಡುತ್ತಾರೆ? Form-6 ಅನ್ನು ಯಾರು, ಎಲ್ಲಿ ಹಾಗೂ ಯಾವ ಅವಧಿಯೊಳಗೆ ಸ್ವೀಕರಿಸುತ್ತಾರೆ?

ವಿಚಾರಣೆಯ ನಂತರ ಆದೇಶ ಹಾಗೂ ಮೇಲ್ಮನವಿಯ ಪ್ರಕ್ರಿಯೆ ಏನು?
ಇತರ ರಾಜ್ಯಗಳ ಅನುಭವದ ಆಧಾರದಲ್ಲಿ ಇರುವ ಕಳವಳಕಾರಿ ಅಂಶವೆಂದರೆ 40 ಕ್ಕಿಂತ ಹೆಚ್ಚಿನ ವಯೋ ಮಾನದವರು, ಪೋಷಕರು ಮತ್ತು ಮತದಾರರ ವಯಸ್ಸಿನ ಅಂತರ 15 ಕ್ಕಿಂತ ಕಡಿಮೆ ಇದ್ದಲ್ಲಿ ಅವರನ್ನು ಅನುಮಾನಾಸ್ಪದ ವಿಭಾಗಕ್ಕೆ ತಳ್ಳಲ್ಪಡುತ್ತಾರೆ.

ಚುನಾವಣಾ ಆಯೋಗ ಮೂಲ ವರ್ಷವೆಂದು ಘೋಷಿಸಿದ 2002 ರ ಪಟ್ಟಿಯನ್ನು ಒದಗಿಸದಂತಹ ಅಪಸವ್ಯಗಳು, ಎಷ್ಟೋ ಮತಗಟ್ಟೆಗಳ ಮಾಹಿತಿಯನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡದಿರುವ ಅಂಶಗಳ ಜೊತೆ, ಇಂದಿಗೂ ಬಾಲ್ಯ ವಿವಾಹಗಳು ಅನಿಯಂತ್ರಿತವಾಗಿ ನಡೆಯುತ್ತಿರುವ ಭಾರತದಂತಹ ದೇಶದಲ್ಲಿ ಎರಡು ದಶಕಗಳ ಹಿಂದಿನ ದಾಖಲೆಗಳನ್ನು ಪರಿಗಣಿಸಿ ಅನುಮಾನಾಸ್ಪದಕ್ಕೆ ತಳ್ಳುವುದು ವಾಸ್ತವ ಸಂಗತಿಗಳನ್ನು ಪರಿಗಣಿಸದ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಏನು? 

ಕೋಟ್ಯಂತರ ಮತದಾರರ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರುವ ಈ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕ, ಏಕರೂಪ ಹಾಗೂ ನ್ಯಾಯಸಮ್ಮತವಾಗಿರುವುದು ಅತ್ಯಗತ್ಯವಾಗಿದೆ. ಆದ್ದರಿಂದ ಮೇಲ್ಕಂಡ ಒತ್ತಾಯಗಳ ಕುರಿತು ತುರ್ತು ಕ್ರಮ ಕೈಗೊಂಡು ಅಗತ್ಯ ಆದೇಶಗಳು ಹಾಗೂ ಸ್ಪಷ್ಟಿಕರಣಗಳನ್ನು ಹೊರಡಿಸುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮುಖಂಡರಾದ ಎನ್. ಪ್ರಭಾಬೆಳವಂಗಲ
, ಪಿ.ಎ ವೆಂಕಟೇಶ್ ಉಪಸ್ಥಿತರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!