Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗಾಜಾ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಸಹ-ಪೈಲಟ್ ಒಮಾನ್ ಒಪ್ಪಿಗೆ!

ಚಂದ್ರವಳ್ಳಿ ನ್ಯೂಸ್, ದುಬೈ:
ಇತ್ತೀಚೆಗೆ ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ ವಾಣಿಜ್ಯ ವಿಮಾನವನ್ನು ಆಕಾಶದಲ್ಲೇ ಪತನಗೊಳಿಸಲು ಯತ್ನಿಸಿದ್ದ ಒಮಾನ್ ಮೂಲದ ಸಹ-ಪೈಲಟ್ ಜಂಟಿ ತನಿಖಾಧಿಕಾರಿಗಳ ಮುಂದೆ ಮಹತ್ವದ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಗಾಜಾ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮತ್ತು ತಾನು ಹುತಾತ್ಮನಾಗಲು ಈ ಭಯೋತ್ಪಾದನಾ ಕೃತ್ಯಕ್ಕೆ ಕೈಹಾಕಿದ್ದೆ ಎಂದು ತನಿಖಾ ಸಂಸ್ಥೆಗಳ ಎದುರು ಆತ ಒಪ್ಪಿಕೊಂಡಿರುವುದಾಗಿ ಇಸ್ರೇಲಿ ಆನ್‌‌ಲೈನ್ ಸುದ್ದಿ ಪೋರ್ಟಲ್ 'ಮಾಕೊ' ವರದಿ ಮಾಡಿದೆ.

ವಿಚಾರಣೆ ವೇಳೆ ಒಮಾನ್ ಮೂಲದ ಹಮಾಮ್ ಅಲ್-ಹಮ್ಮಾಮಿ, "ಗಾಜಾಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ನಾನು ಇದನ್ನು ಮಾಡಿದೆ. ಹುತಾತ್ಮನಾಗಿ ಸಾಯಲು ಬಯಸಿದ್ದೆ" ಎಂದು ಯುಎಇ ತನಿಖಾಧಿಕಾರಿಗಳ ಬಳಿ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಉಗ್ರರ ವಿಚಾರಧಾರೆಗಳ ಕುರಿತು ಉಂಟಾದ ಆತಂಕದ ಹಿನ್ನೆಲೆಯಲ್ಲಿ ಅಲ್-ಹಮ್ಮಾಮಿಯನ್ನು ಕಳೆದ ವರ್ಷ ಒಮಾನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಿಂದ ವಜಾಗೊಳಿಸಲಾಗಿತ್ತು ಎಂಬ ಆಘಾತಕಾರಿ ಸಂಗತಿಯೂ ಈಗ ಹೊರಬಿದ್ದಿದೆ. ಸಿಎನ್‌ಎನ್ ವರದಿ ಪ್ರಕಾರ, ಆತನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇಸ್ರೇಲಿ ವಿಮಾನಗಳ ಕಾಕ್‌‌ಪಿಟ್ ದೃಶ್ಯಗಳು ಹಾಗೂ ಅಲ್-ಖೈದಾ ಸಂಘಟನೆಯ ಪ್ರಮುಖರ ಚಿತ್ರಗಳು ಮತ್ತು ಮಾಹಿತಿಗಳು ಪತ್ತೆಯಾಗಿದ್ದವು. ಈ ಹಿಂದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ, ಸಹ ಪೈಲಟ್‌ತೀವ್ರ ಇಸ್ಲಾಮಿಸ್ಟ್‌ಸಿದ್ಧಾಂತದಿಂದ ಪ್ರಭಾವಿತನಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.

Advertisement

ಘಟನೆಯ ಹಿನ್ನೆಲೆ ಮತ್ತು ತನಿಖಾ ವರದಿ: ಸೆಪ್ಟೆಂಬರ್ 30ರಂದು 170ಕ್ಕೂ ಹೆಚ್ಚು ಪ್ರಯಾಣಿಕರು (ಬಹುತೇಕ ಇಸ್ರೇಲಿ ನಾಗರಿಕರು) ಫ್ಲೈದುಬೈ ವಿಮಾನ 1073ರಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ಟೆಲ್ ಅವೀವ್‌ನಲ್ಲಿ ಇಳಿಯಲು ಒಂದು ಗಂಟೆಗೂ ಕಡಿಮೆ ಸಮಯವಿದ್ದಾಗ ಅಲ್-ಹಮ್ಮಾಮಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಠಾತ್ ದಾಳಿ ನಡೆಸಿದ್ದಾನೆ. ಕಾಕ್‌ಪಿಟ್‌ನಲ್ಲಿದ್ದ ತುರ್ತು ಪರಿಸ್ಥಿತಿಯ ಕೊಡಲಿಯಿಂದ ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿ, ವಿಮಾನದ ನಿಯಂತ್ರಣ ಪಡೆಯಲು ಯತ್ನಿಸಿದ್ದಾನೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳು ತಿಳಿಸಿದ್ದು, ಈ ಕೃತ್ಯವನ್ನು ಅಧಿಕೃತವಾಗಿ “ಉಗ್ರ ದಾಳಿ” ಎಂದು ಬಣ್ಣಿಸಿದ್ದಾರೆ. ಈ ಗೊಂದಲದಿಂದಾಗಿ ವಿಮಾನ ಕೆಲವೇ ಸೆಕೆಂಡ್‌ಗಳಲ್ಲಿ 17,000 ಅಡಿಗೂ ಹೆಚ್ಚು ಎತ್ತರದಿಂದ ಕುಸಿದಿರುವುದು ವಿಮಾನ ಸಂಚಾರದ ಮಾಹಿತಿಯಿಂದ ತಿಳಿದುಬಂದಿದೆ.

ಅಪಾಯದ ಮಧ್ಯೆಯೂ ಕ್ಯಾಪ್ಟನ್ ಮಚ್ಚಾರ್ ಅವರು ಸಾಹಸದಿಂದ ದಾಳಿಯನ್ನು ಎದುರಿಸಿ ಸಹ ಪೈಲಟ್‌ನನ್ನು ತಡೆದರು. ಬಳಿಕ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದ ಕಾರಣ ಒಳಗೆ ನಡೆಯುತ್ತಿದ್ದ ಘಟನೆ ಪ್ರಯಾಣಿಕರಿಗೆ ಗೋಚರಿಸಿದೆ. ತಕ್ಷಣವೇ ಎಚ್ಚೆತ್ತ ಪ್ರಯಾಣಿಕರು ಒಟ್ಟಾಗಿ ಅಲ್-ಹಮ್ಮಾಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಅದೇ ಸಮಯದಲ್ಲಿ ವಿಮಾನದಲ್ಲಿದ್ದ ಕರ್ತವ್ಯದಲ್ಲಿರದ ಇತರ ಪೈಲಟ್‌ಗಳು ವಿಮಾನದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡು, ಸಂಭವಿಸಬಹುದಾಗಿದ್ದ ಭೀಕರ ವಿಮಾನ ಅಪಘಾತವನ್ನು ಅದೃಷ್ಟವಶಾತ್ ತಪ್ಪಿಸಿದರು.

ಇಟಲಿಯ 'ಕೊರಿಯೆರೆ ಡೆಲ್ಲಾ ಸೆರಾ' ಪತ್ರಿಕೆಯ ವರದಿಯ ಪ್ರಕಾರ, ಕ್ಯಾಪ್ಟನ್ ಮಚ್ಚಾರ್ ಅವರನ್ನು ಗುಪ್ತವಾಗಿ ಹತ್ಯೆ ಮಾಡಿ, ವಿಮಾನದ ಎಂಜಿನ್‌ಗಳನ್ನು ಸ್ಥಗಿತಗೊಳಿಸಿ ಟೆಲ್ ಅವೀವ್ ನಗರದ ಕಟ್ಟಡವೊಂದಕ್ಕೆ ವಿಮಾನವನ್ನು ಅಪ್ಪಳಿಸುವ ದೊಡ್ಡ ಸಂಚನ್ನು ಅಲ್-ಹಮ್ಮಾಮಿ ರೂಪಿಸಿದ್ದ ಎನ್ನಲಾಗಿದೆ. ಅಲ್ಲದೆ, ಇಸ್ರೇಲಿ ಮಾಧ್ಯಮಗಳ ಪ್ರಕಾರ ಆತ ಜುಲೈನಲ್ಲೇ ಈ ಕೃತ್ಯ ಎಸಗಲು ಯೋಜನೆ ರೂಪಿಸಿದ್ದನಾದರೂ, ವಿಮಾನದ ಸಿಬ್ಬಂದಿಯೊಬ್ಬರೊಂದಿಗೆ ಸ್ನೇಹ ಹೊಂದಿದ್ದ ಕಾರಣ ಕೊನೆಯ ಕ್ಷಣದಲ್ಲಿ ಆ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದನೆಂದು ತಿಳಿದುಬಂದಿದೆ. ಪ್ರಸ್ತುತ ಈ ಘಟನೆಗೆ ಸಂಬಂಧಿಸಿದಂತೆ ಜಂಟಿ ತನಿಖೆ ಮುಂದುವರಿದಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಚಾರಿಕತೆಯ ದಾರಿದೀಪ: ಡಾ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಮಹೋತ್ಸವಪತ್ರಕರ್ತರ ಮೇಲೆ ಹಲ್ಲೆ, ಮಹಿಳಾ ಪತ್ರಕರ್ತೆಗೆ ಕಿರುಕುಳ: ಕೆಯುಡಬ್ಲ್ಯೂಜೆ ಖಂಡನೆಲವರ್‌ಬಾಯ್‌ಅವತಾರದಲ್ಲಿ ಬರುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ:  ಹೊಸ ಸಿನಿಮಾ 'ಕೆಮಿಸ್ಟ್ರಿ'!ಗಾಜಾ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಸಹ-ಪೈಲಟ್ ಒಮಾನ್ ಒಪ್ಪಿಗೆ!ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಸಂವಿಧಾನ ಪ್ರಸ್ತಾವನೆ ಪಠಣ ಕಡ್ಡಾಯ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ!ಇಂಡಿಯಾ ಬಣದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಬೃಹತ್ ಪಾದಯಾತ್ರೆಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ 1 ಕೋಟಿ ನಗದು ಪುರಸ್ಕಾರ, ಸರ್ಕಾರಿ ಹುದ್ದೆಗಳಲ್ಲಿ ಶೇ. 2 ಮೀಸಲಾತಿ: ಸರ್ಕಾರ!ಪವಿತ್ರಾ ಗೌಡಗೆ ಬ್ಯಾರಕ್ ಬದಲಾವಣೆ ಮಾಡದ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ!'ಇಂಡಿಯಾ' ಒಕ್ಕೂಟ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಪ್ರಮುಖ ನಾಯಕರು ವಶಕ್ಕೆ!ಪಂಚಮಸಾಲಿ ಮಠದಲ್ಲಿ ಅಕ್ಟೋಬರ್‌31ರವರೆಗೆ ನಿಷೇಧಾಜ್ಞೆ; ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ