Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ತುಂಗಭದ್ರಾ ಸಮಾನಂತರ ಜಲಾಶಯ ನಿರ್ಮಾಣಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ!

ಚಂದ್ರವಳ್ಳಿ ನ್ಯೂಸ್, ಕೊಪ್ಪಳ: 
ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಭಾರಿ ಪ್ರಮಾಣದ ಹೂಳನ್ನು ವೈಜ್ಞಾನಿಕವಾಗಿ ತೆರವುಗೊಳಿಸಲು ಸಾಧ್ಯವಿದೆಯೇ ಎಂಬುದನ್ನು ರಾಜ್ಯ ಸರ್ಕಾರ ತಜ್ಞರಿಂದ ತಕ್ಷಣವೇ ಪರಿಶೀಲಿಸಬೇಕು. ಒಂದು ವೇಳೆ ಹೂಳು ತೆರವು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದಾದರೆ, ತಡಮಾಡದೇ ಸಮಾನಂತರ ಜಲಾಶಯ ನಿರ್ಮಾಣದ ಕುರಿತು ಸರ್ಕಾರ ಗಂಭೀರ ನಿರ್ಧಾರ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಬಿಜೆಪಿಯ 'ಬಳ್ಳಾರಿ ಚಲೋ' ಪಾದಯಾತ್ರೆಯ ಐದನೇ ದಿನದಂದು ರೈತ ಹೋರಾಟಗಾರರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಈ ಜಲಾಶಯದಲ್ಲಿ ಸುಮಾರು 34 ಟಿಎಂಸಿಯಷ್ಟು ಅಪಾರ ಪ್ರಮಾಣದ ಹೂಳು ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನು ತೆರವುಗೊಳಿಸಲು ಅಗತ್ಯವಿರುವ ತಂತ್ರಜ್ಞಾನ, ತಗಲುವ ಸಮಯ ಮತ್ತು ವೆಚ್ಚದ ಬಗ್ಗೆ ಸರ್ಕಾರ ಸ್ಪಷ್ಟ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.

Advertisement

ರೈತರನ್ನು ಇನ್ನು ಕಾಯಿಸುವುದು ಬೇಡ – ಬಜೆಟ್‌ನಲ್ಲಿ ಅನುದಾನಕ್ಕೆ ಮನವಿ:
"ಹೂಳು ತೆಗೆಯುವುದು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟರೆ, ಸರ್ಕಾರ ಕಾಲಹರಣ ಮಾಡಬಾರದು. ಮುಂಬರುವ ಬಜೆಟ್‌ನಲ್ಲಿಯೇ ಅಗತ್ಯ ಅನುದಾನ ಮೀಸಲಿಟ್ಟು ಪರ್ಯಾಯ (ಸಮಾನಂತರ) ಜಲಾಶಯದ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು. ನೀರಿಗಾಗಿ ರೈತರನ್ನು ಇನ್ನು ನಾಲ್ಕೈದು ವರ್ಷಗಳ ಕಾಲ ಕಾಯುವಂತೆ ಮಾಡಬಾರದು" ಎಂದು ವಿಜಯೇಂದ್ರ ನುಡಿದರು.
ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆಗೆ ಆಗ್ರಹ:
ಪ್ರಸ್ತಾವಿತ ಸಮಾನಾಂತರ ಜಲಾಶಯದ ಯೋಜನೆ ಕುರಿತು ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆಯಾಗಬೇಕು ಎಂದು ಆಗ್ರಹಿಸಿದ ಅವರು, "ಈ ಹಿಂದೆ ಸಮಾನಾಂತರ ಜಲಾಶಯದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು 14 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಆ ಯೋಜನೆ ಮುಂದೆ ಸಾಗಲಿಲ್ಲ. ಈಗ ಈ ಯೋಜನೆಗೆ ಸುಮಾರು 22,000 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಯೋಜನೆ ಅನುಷ್ಠಾನಗೊಳ್ಳುವಷ್ಟರಲ್ಲಿ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇದರ ಆರ್ಥಿಕ ಹೊರೆ ಮತ್ತು ಕಾಲಮಿತಿಯ ಬಗ್ಗೆ ಸರ್ಕಾರದಿಂದ ಸ್ಪಷ್ಟತೆ ಸಿಗಬೇಕಿದೆ" ಎಂದರು.

ವಿಶೇಷ ಅಧಿವೇಶನಕ್ಕೆ ಒತ್ತಾಯ:
ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳು, ತುಂಗಭದ್ರಾ ಜಲಾಶಯದ ಸ್ಥಿತಿಗತಿ ಹಾಗೂ ರೈತರ ಅಹವಾಲುಗಳ ಕುರಿತು ಚರ್ಚಿಸಲು ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯುವಂತೆ ಬಿಜೆಪಿ ಒತ್ತಾಯಿಸಿದೆ. ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಕ್ಕೂ ಜವಾಬ್ದಾರಿಯಿದ್ದು, ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುವವರೆಗೂ ಬಿಜೆಪಿ ತನ್ನ ಹೋರಾಟವನ್ನು ವಿಶ್ರಮಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

'ಬಳ್ಳಾರಿ ಚಲೋ' ಜಯಕ್ಕೆ ಸಿಎಂ ಭೇಟಿಯೇ ಸಾಕ್ಷಿ:
ಇದೇ ವೇಳೆ 'ಬಳ್ಳಾರಿ ಚಲೋ' ಪಾದಯಾತ್ರೆಗೆ ಜನರಿಂದ ಸಿಗುತ್ತಿರುವ ಅಭೂತಪೂರ್ವ ಬೆಂಬಲ ಕಂಡು ಮುಖ್ಯಮಂತ್ರಿಗಳು ಹಾಗೂ ಸರ್ಕಾರ ಹತಾಶಗೊಂಡಿದೆ ಎಂದು ಟೀಕಿಸಿದ ಅವರು, "ನಮ್ಮ ಸುದೀರ್ಘ ಹೋರಾಟದ ಫಲವಾಗಿಯೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸಚಿವರು ಹಾಗೂ ನಾಯಕರು ಉತ್ತರ ಕರ್ನಾಟಕದ ಬರ ಪರಿಸ್ಥಿತಿ ಪರಿಶೀಲನೆಗೆ ಧಾವಿಸುತ್ತಿದ್ದಾರೆ. ಇದು ನಮ್ಮ ರೈತಪರ ಹೋರಾಟಕ್ಕೆ ಸಿಕ್ಕ ಆರಂಭಿಕ ಜಯ" ಎಂದು ವಿಜಯೇಂದ್ರ ಹೇಳಿದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಭಟನೆ ಹತ್ತಿಕ್ಕುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವಿಜಯನಗರದ ಮಹಾನವಮಿ; ಸಾಮ್ರಾಜ್ಯದ ವೈಭವದಿಂದ ಶ್ರೀರಂಗಪಟ್ಟಣ ದಸರಾವರೆಗೆ:ಮೂರ್ಖನಾದ ಮಹಾರಾಜನ್ : ವೆಂಕಟೇಶ್, ಚಿತ್ರದುರ್ಗಚಳ್ಳಕೆರೆಯಲ್ಲಿ ಇಂದು 'ಮಾತೃಶ್ರೀ ಪ್ರಸಾದ ನಿಲಯ' ಉದ್ಘಾಟನೆಕಾಶಿಯಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಾಂಸ್ಕೃತಿಕ ಸಂಭ್ರಮ: 30 ಪ್ರವಾಸಿಗರಿಗೆ ‘ಕನ್ನಡ ಸೇವಾ ರತ್ನ’ ಪ್ರಶಸ್ತಿ ಪ್ರದಾನವಿಜೃಂಭಣೆಯ 'ರೈತ ಸ್ವಾಭಿಮಾನ ಯಾತ್ರೆ': ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆ ನಡೆಸಿದ ನಿಖಿಲ್ಕವಿತೆ ಬರೆಯುವುದು, ಸಾಹಿತಿಯಾಗುವುದು ಲೋಕದ ಜವಾಬ್ದಾರಿ: ಸಾಹಿತಿ ಬಂಜಗೆರೆ ಜಯಪ್ರಕಾಶ್ತುಮಕೂರು ದಸರಾ ಮಹೋತ್ಸವಕ್ಕೆ ಸಿದ್ಧಗಂಗಾ ಶ್ರೀ ಚಾಲನೆ: 5 ಸಾವಿರಕ್ಕೂ ಅಧಿಕ ಕಲಾವಿದರಿಂದ ಕಲಾ ಪ್ರದರ್ಶನಬಿಜೆಪಿ ಕೋರ್ ಕಮಿಟಿ ಸಭೆ: ಹಿರಿಯೂರು ಉಪಚುನಾವಣೆಗೆ ಕಮಲ ಪಕ್ಷದ ಕಸರತ್ತುಐಐಟಿ ಮದ್ರಾಸ್‌ನ ಶ್ರೀ ಜಲಕಂಠೇಶ್ವರ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ