Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಸಮಾನತೆಯ ಆಶಯಕ್ಕೆ ತತ್ವಪದಗಳ ಕೊಡುಗೆ ಅಪಾರ- ಕರಿಯಪ್ಪ ಮಾಳಿಗೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತತ್ವಪದಗಳು ಸಮಾನತೆಯ ಆಶಯಕ್ಕೆ ಅಪಾರವಾದ ಕೊಡುಗೆ ನೀಡಿವೆ ಎಂದು ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಪ್ರೊ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.



ನಗರದ ಪತ್ರಕರ್ತರ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವ ಪತ್ರಕರ್ತರಿಗೆ  ಕನ್ನಡ ಸಾಹಿತ್ಯಾಭಿರುಚಿ ಶಿಬಿರದ ಗೋಷ್ಠಿ-3ರ ಕೀರ್ತನೆ, ತತ್ವಪದ ಹಾಗೂ ಸಾಂಗತ್ಯ ಎಂಬ ವಿಷಯ ಕುರಿತು ಅವರು ಮಾತನಾಡಿದರು.


ಇಡೀ ಕನ್ನಡ ಸಾಹಿತ್ಯ ಚರಿತ್ರೆಕಾರರು ತತ್ವಪದವನ್ನು ತಿರಸ್ಕಾರ ಮಾಡಿ, ತತ್ವಪದಗಳು ಹುಟ್ಟಿದ ಕಾಲವನ್ನು ಕತ್ತಲಯುಗ ಎಂದು ದಾಖಲಿಸಿದ್ದಾರೆ. ಇದು ಕನ್ನಡ ಸಾಹಿತ್ಯದ ವಿಪರ್ಯಾಸ ಎಂದು ವಿಷಾಧಿಸಿದರು.
ಭಕ್ತಿಯನ್ನು ಲೋಕದೃಷ್ಠಿಯನ್ನಾಗಿ ಮಾಡಿಕೊಂಡವರು ಅನುಭಾವಿಗಳು. ಮಧ್ಯಕಾಲಿನ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹುಟ್ಟಿಕೊಂಡ ವಚನ ಸಾಹಿತ್ಯದಲ್ಲಿ ಬಂದ ಸ್ವರವಚನಗಳು 15ನೇ ಶತಮಾನದಲ್ಲಿ ಬಂದ ಶಿವಯೋಗಿಗಳ ಕೈವಲ್ಯ ಸಾಹಿತ್ಯ ಮತ್ತು 17-18ನೇ ಶತಮಾನದಲ್ಲಿ ಕಂಡುಬಂದ ತತ್ವಪದ ಸಾಹಿತ್ಯದ ಅನುಭಾವಿಗಳು ಭಕ್ತಿಯನ್ನು ಲೋಕದೃಷ್ಠಿಯನ್ನಾಗಿ ಮಾಡಿಕೊಂಡು ಸಾಮಾಜಿಕ ಸೌಹರ್ದತೆಗೆ ಕಾರಣೀಭೂತರಾಗಿದ್ದಾರೆ.

ಜೊತೆಗೆ ನಾಥ, ಸಿದ್ದ, ಆರೂಢ, ಅವಧೂತ, ಸಂತ ಮತ್ತು ಶರಣ ಪರಂಪರೆಯವರು ಮಾನವೀಯ ಮೌಲ್ಯಗಳನ್ನು ತಮ್ಮ ನಡೆ-ನುಡಿಯಲ್ಲಿ ಅನುಸರಿಸುತ್ತಾ ಸಾಹಿತ್ಯ ರಚನೆ ಮಾಡಿದ್ದಾರೆ. ಜಾತಿ, ಮತ, ಧರ್ಮ ಸೋಂಕಿಲ್ಲದೇ ಸಮಾನತೆಯ ಆಶಯವನ್ನು ಸಮಾಜಕ್ಕೆ ಬಿತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ಒಳಗೊಂಡ ತತ್ವಪದಗಳು, ಸಮುದಾಯದ ವಿವೇಕದ ಫಲಗಳಾಗಿ ಕೂಡಿಬಂದಿವೆ ಎಂದು ಹೇಳಿದರು.


ಒಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಂತಹ ಜನಮುಖಿ ಮತ್ತು ಸಮಾಜಮುಖಿ ಆಶಯಗಳುಳ್ಳ ಕೀರ್ತನೆ, ತತ್ವಪದಗಳನ್ನು ನಮ್ಮ ದೈನಂದಿನ ಬದುಕಿನ ಜೀವನ ಮೌಲ್ಯವನ್ನಾಗಿ ಅಳವಡಿಸಿಕೊಂಡರೆ ಈವತ್ತಿನ ಅನೇಕ ಸಮಸ್ಯೆಗಳಿಗೆ, ಸಂಕಟಗಳಿಗೆ ಪರಿಹಾರ ಕಾಣಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಪತ್ರಕರ್ತರು ಇಂತಹ ಮಾನವೀಯ ಮೌಲ್ಯವುಳ್ಳ ಸಾಹಿತ್ಯದ ತಿಳುವಳಿಕೆಯನ್ನು ಅರಿತರೆ ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.


ಹಿರಿಯ ಪತ್ರಕರ್ತರಾದ ಗೌನಹಳ್ಳಿ ಗೋವಿಂದಪ್ಪ ಮಾತನಾಡಿ, ಪತ್ರಕರ್ತರಾದವರು ಸುದ್ದಿ ವಿಚಾರದಲ್ಲಿ ಯಾವುದನ್ನೂ ಅಮುಖ್ಯ ಎಂದು ಪರಿಗಣಿಸಬಾರದು. ಸುದ್ದಿಯಲ್ಲಿರುವ ಸಣ್ಣ ಸುಳಿವಿನ ಹಿಂದೆ ಹೋದಾಗ ಇಡೀ ಸಮಾಜಕ್ಕೆ ಮಾದರಿಯಾಗುವಂತಹ ವರದಿ ನೀಡಬಹುದು. ವರದಿಗಾರಿಕೆಯಲ್ಲಿ ನಿತ್ಯವೂ ಹೊಸತನ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿರಂತರ ಅಧ್ಯಯನ ಬಹುಮುಖ್ಯವಾಗಿರುತ್ತದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ ಗೌಡಗೆರೆ, ಹಿರಿಯ ಪತ್ರಕರ್ತ ಚಳ್ಳಕೆರೆ ಯರ್ರಿಸಾಮಿ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!