Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮಕ್ಕಳ ಅಪರಾಧಗಳು; ಕಳೆದುಹೋಗುತ್ತಿರುವ ಮುಗ್ಧತೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಒಂದು ಮೂಲದ ಮಾಹಿತಿಯ ಪ್ರಕಾರ ದಿನಕ್ಕೆ ಸರಿ ಸುಮಾರು
190 ಮಕ್ಕಳು ಲೈಂಗಿಕ ಅಪರಾಧಗಳ ಅಪಾಯವನ್ನು ಎದುರಿಸುತ್ತಿದ್ದಾರೆ. ಇದು ಕೇವಲ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಮಾತ್ರ ವರದಿಯಾಗದೆ ಉಳಿದಿರುವ ಘಟನೆಗಳು ಎಷ್ಟಿರಬಹುದು ಎಂಬ ಊಹೆಯೇ ಭಯ ಹುಟ್ಟಿಸುತ್ತದೆ.

ಇತ್ತೀಚೆಗೆ ವರದಿಯಾದ ಪ್ರಕರಣ ಒಂದರಲ್ಲಿ 12 ವರ್ಷದ ಬಾಲಕ 9 ತಿಂಗಳ ಶಿಶುವಿನ ಮೇಲೆ ದೌರ್ಜನ್ಯ ಎಸಗಿದ ಎಂಬ ಸುದ್ದಿ ಓದಿದಾಗ ಮೊದಲಿಗೆ ಆಗುವುದು ಆಘಾತವೇ ಹೊರತು ಕೋಪವಲ್ಲ. ಆ ಮಗು ಬೆಳೆದು ಬಂದಂತ ವಾತಾವರಣ ಎಂತಹುದು ಎನ್ನುವ ಯೋಚನೆ.

ಯಾವುದೇ  ಮಕ್ಕಳಾಗಲಿ ಹುಟ್ಟಿನಿಂದಲೇ ಕೆಟ್ಟವನಾಗಿರಲಾರ ಅಥವಾ ಅಪರಾಧಿಯ ಆಗಿರಲಾರ. ಮಗುವಿನ ಸುತ್ತಲಿನ ವಾತಾವರಣ, ನೋಡುವ ದೃಶ್ಯಗಳು, ಕೇಳುವ ಮಾತುಗಳು, ಅನುಭವಿಸುವ ನೋವು ನಲಿವುಗಳು, ಸಂಬಂಧಗಳೇ ವ್ಯಕ್ತಿತ್ವವನ್ನು ರೂಪಿಸುವ ವಿಷಯವಾಗಿರುತ್ತದೆ.

ಹೀಗಿರುವಾಗ 12 ವರ್ಷದ ಬಾಲಕ ಮಧ್ಯಪಾನ ಮಾಡುತ್ತಾನೆ, ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾನೆ, ನಂತರ ಭೀಕರ ಅಪರಾಧವನ್ನು ಸಣ್ಣ ಮಗುವಿನ ಮೇಲೆ ಎಸಗುತ್ತಾನೆ ಎಂದರೆ ಕೇವಲ ಆ ಮಗುವಿನ ತಪ್ಪಲ್ಲ ಎಲ್ಲೋ ಒಂದು ಕಡೆ ಸಮಾಜದ ವೈಫಲ್ಯವಾಗಿದೆ, ಆ ಮಗುವಿಗೆ ಉತ್ತಮ ವಾತಾವರಣ ಹಾಗೂ ಸರಿ ತಪ್ಪುಗಳ ತಿಳುವಳಿಕೆ ನೀಡುವಲ್ಲಿ ನಮ್ಮ ಸಮಾಜ ಸೋತಿದೆ ಎಂದರ್ಥ.

ಇಂದು ತಂತ್ರಜ್ಞಾನ ಮಕ್ಕಳ ಕೈಗೆ ಜಗತ್ತನ್ನೇ ತಂದಿಟ್ಟಿದೆ ಆದರೆ ಒಳ್ಳೆಯದರ ಜೊತೆ ಜೊತೆಯಲಿ ಕೆಟ್ಟದ್ದು ಮಕ್ಕಳ ಕಣ್ಣಮುಂದೆ ತೆರೆದುಕೊಂಡಿದೆ. ಮೊಬೈಲ್ ಫೋನ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಬರುತ್ತಿರುವ ಅಶ್ಲೀಲ ಚಿತ್ರಗಳು ಹಾಗೂ ಹಿಂಸೆಯನ್ನು ಸಾಮಾನ್ಯಗೊಳಿಸುವ ವಿಡಿಯೋಗಳು ನಿಯಂತ್ರಣವಿಲ್ಲದ ಇಂಟರ್ನೆಟ್ ಬಳಕೆಯಿಂದ ಮಕ್ಕಳ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತಿದೆ.

ವಯಸ್ಸಿಗೆ ಮೀರಿದ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ಮನಸ್ಸುಗಳು ಅತಿಯಾದ ಕುತೂಹಲಕ್ಕೆ ಬಿದ್ದು ಅವರ ದೇಹದಲ್ಲಿ ಆಗುವ ಹಾರ್ಮೋನ್ ಗಳ ಬದಲಾವಣೆಗಳಿಂದಾಗಿಯೂ  ಸಹ ಮಕ್ಕಳು ಅವುಗಳನ್ನು ತಪ್ಪಾಗಿ ಗ್ರಹಿಸುವ ಅಪಾಯವೇ ಹೆಚ್ಚಾಗಿದೆ.

ಮೊದಲಿಗೆ ಮಕ್ಕಳಲ್ಲಿ ಅಪರಾಧ ಎಂದರೇನು? ಅದರ ಆಗುಹೋಗುಗಳು ಏನು ಎಂಬುದನ್ನು ಕೇವಲ ಕಾನೂನಿನ ಭಾಷೆಯಲ್ಲಿ ವಿವರಿಸಿದರೆ ಸಾಲದು ,ಹಿಂಸೆ ಅನುಭವಿಸುವ ವ್ಯಕ್ತಿಯ ನೋವು , ಭಯ , ಅಸಹಾಯಕತೆ ,ಅವಮಾನ, ಮಾನವೀಯತೆಗಳನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿ ಬೆಳೆಸಬೇಕು . ಗೌರವ ಜವಾಬ್ದಾರಿ ಮತ್ತು ಉತ್ತಮ ಮೌಲ್ಯಗಳು ಬರೀ ಪುಸ್ತಕದ ಪಾಠಗಳಾಗದೆ ಬದುಕಿನ ಭಾಗವಾಗಬೇಕು.

ಇಂದಿನ ಸಮಾಜದಲ್ಲಿ ಸಾಮಾನ್ಯವಾಗಿ ಕೇವಲ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಹಾಗೂ ಅವರುಗಳು ಹೇಗಿರಬೇಕೆಂದು ಮಾತನಾಡುವ ನಾವುಗಳು ಗಂಡು ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಮರೆತೇ ಹೋಗಿದ್ದೇವೆ. ಹೆಣ್ಣು ಮಕ್ಕಳ ಪೋಷಕರಿಗಿಂತ ಇಲ್ಲಿ ಹೆಚ್ಚಿನ ಜವಾಬ್ದಾರಿ ಇರುವುದು ಗಂಡು ಮಕ್ಕಳ ಪೋಷಕರಿಗೆ . ಗಂಡು ಮಕ್ಕಳಿಗೆ ಮಹಿಳೆಯನ್ನು ಹೇಗೆ ಗೌರವಿಸಬೇಕು, ಅವರ ಮಿತಿಗಳು ಮತ್ತು ಒಪ್ಪಿಗೆ ಎಂಬ ಪರಿಕಲ್ಪನೆಯನ್ನು ತಿಳಿಸುವುದು ಮತ್ತು ಕೋಪವನ್ನು ನಿಯಂತ್ರಿಸುವುದನ್ನು ಕಲಿಸುವುದು ಪ್ರತಿಯೊಬ್ಬ ಗಂಡು ಮಕ್ಕಳ ಪೋಷಕರ ಜವಾಬ್ದಾರಿಯಾಗಿದೆ.

ಹೆಣ್ಣು ಮಕ್ಕಳ ಮೇಲೆ ಗಮನಹರಿಸುವ ನಾವುಗಳು ನಮ್ಮ ಮನೆಯ ಗಂಡು ಮಕ್ಕಳ ಜೀವನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನಹರಿಸಬೇಕು ಎಂಬುದನ್ನು ಅಲಕ್ಷಿಸಿ ಬಿಡುತ್ತೇವೆ . ಶಾಲೆಯಲ್ಲಿ ಅವರ ಸ್ನೇಹಿತರು ಯಾರು? ಅವರು ಯಾವ ರೀತಿಯ ಮಾತುಕತೆ ನಡೆಸುತ್ತಾರೆ , ಫೋನ್ನಲ್ಲಿ ಏನು ನೋಡುತ್ತಾರೆ ಒಬ್ಬರ ಹಿಂಸೆಯನ್ನು ಮತ್ತು ನೋವನ್ನು ಹೇಗೆ ಸ್ವೀಕರಿಸುತ್ತಾರೆ. ಇದೆಲ್ಲವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕು ಏಕೆಂದರೆ ಇವೆಲ್ಲವೂ ನಮ್ಮ ಮಕ್ಕಳ ವ್ಯಕ್ತಿತ್ವ ರೂಪಿಸುವ ವಿಷಯಗಳಾಗಿವೆ. ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಮಾತನಾಡುವ ಮೊದಲು ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಿ ಅವರನ್ನು ನೋಡಬೇಕು ಎಂಬುದನ್ನು ಮೊದಲು ಹೇಳಿಕೊಡಬೇಕು.

ಬಾಲ್ಯ ಹೊರಗಿನಿಂದ ಕಾಣುವಷ್ಟು ಸರಳ ,ಸುಂದರ, ಮತ್ತು ಸುಲಭವಲ್ಲ. ಅವರ ಮನಸ್ಸಿನಲ್ಲಿ ಆಗುವ ಬದಲಾವಣೆಗಳು ಯಾವ ರೀತಿಯಲ್ಲಿದೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಲು ಅವರೊಂದಿಗೆ ಸಮಯ ಕಳೆಯುವುದರ ಮೂಲಕ ತಿಳಿದುಕೊಳ್ಳಬೇಕು ಹಾಗೆ ಅವರಿಗೆ ಸರಿಯಾದ ಅರಿವನ್ನು ನೀಡಬೇಕು ಅವರೊಂದಿಗೆ ಮಾತನಾಡುತ್ತಾ ಪ್ರಶ್ನೆಗಳನ್ನು ಕೇಳುವ ಮೂಲಕ ಹಾಗೂ ಅವರ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ ಉತ್ತರಿಸುತ್ತಾ ಅವರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಅವರ ಮನಸ್ಸಿನ ಮಾತುಗಳಿಗೆ ನಾವು ಕಿವಿಯಾಗಬೇಕು.

ಹೆಣ್ಣು ಮಕ್ಕಳಿಗೆ safe touch ಮತ್ತು unsafe touch ಬಗ್ಗೆ ತಿಳಿಸುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಮುಖ್ಯವಾದದ್ದು ಇತರ ದೇಹದ ಮಿತಿಗಳು ಹಾಗೂ ಯಾರಿಗೂ ಹಿಂಸೆ ನೋವು ಉಂಟು ಮಾಡದಿರುವುದು ಮತ್ತು ಎಲ್ಲರನ್ನೂ ಗೌರವದಿಂದ ಕಾಣುವುದುನ್ನು ಹೇಳಿಕೊಡುವುದೇ ಶಿಕ್ಷಣದ ನಿಜವಾದ ಅರ್ಥ. ಇಲ್ಲಿ ಶಾಲೆಗಳು, ಸಮಾಜ ಹಾಗೂ ಕುಟುಂಬದ ಪಾತ್ರ ಬಹುಮುಖ್ಯವಾಗಿದೆ . ಶಿಕ್ಷಣ ಸಂಸ್ಥೆಗಳು ಕೇವಲ ಪಾಠ ಕಲಿಸುವ ಕೇಂದ್ರಗಳಾಗಿರದೆ, ಮಕ್ಕಳಿಗೆ ನೈತಿಕ ಶಿಕ್ಷಣ, ಜೀವನದ ಕೌಶಲ್ಯಗಳು, ಮಾನಸಿಕ ಆರೋಗ್ಯದ ಅರಿವು ಮತ್ತು ಆಪ್ತ ಸಮಾಲೋಚನ ಸೇವೆಗಳನ್ನು ಶಾಲೆಗಳಲ್ಲಿ ಬಲಪಡಿಸುವ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸುವ ಸ್ಥಳಗಳಾಗಬೇಕು. ಶಿಕ್ಷಕರು ಮಕ್ಕಳನ್ನು  ಅವರಲ್ಲಿ ಆಗುವ ಬದಲಾವಣೆಗಳನ್ನು  ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಸಮಾಜವು ಸಹ ತನ್ನ ಜವಾಬ್ದಾರಿಯನ್ನು ಅರಿತು ಮಕ್ಕಳನ್ನು ಕೇವಲ ಟೀಕಿಸದೆ ಅವರಿಗೆ ಸುರಕ್ಷಿತ ವಾತಾವರಣ, ಉತ್ತಮ ಅವಕಾಶಗಳು ಮತ್ತು ಸಕಾರಾತ್ಮಕ ಯೋಚನೆಗಳನ್ನು ಹುಟ್ಟು ಹಾಕುವ ಕೆಲಸ ಮಾಡಬೇಕು . ಕುಟುಂಬದಲ್ಲಿ ಮಕ್ಕಳನ್ನು ಕ್ರೀಡೆ ,ಕಲೆ ,ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳ ಮನಸ್ಸನ್ನು ಸುೃಜನಾತ್ಮಕ ದಿಕ್ಕಿನತ್ತ ಹೆಜ್ಜೆ ಹಾಕಿಸಬೇಕು.

ಮಕ್ಕಳ ಮೇಲಿನ ಅಪರಾಧಗಳು ಕೇವಲ ಕಾನೂನು ಮತ್ತು ನ್ಯಾಯಾಲಯಗಳ ಸಮಸ್ಯೆಯಲ್ಲ ಅದು ಕುಟುಂಬ ಶಿಕ್ಷಣ ವ್ಯವಸ್ಥೆ ಮಾಧ್ಯಮ ತಂತ್ರಜ್ಞಾನ ಮತ್ತು ಸಮಾಜದ ಒಟ್ಟಾರೆ ಜವಾಬ್ದಾರಿಯ ಪ್ರಶ್ನೆಯಾಗಿದೆ. ಒಂದು ಮಗು ಬಲಿಪಶು ಆಗುವ ಮೊದಲು ಅದನ್ನ ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಮಕ್ಕಳು  ಅಪರಾಧಿಯಾಗುವ ಮೊದಲು ಅದನ್ನು ಸರಿಯಾದ ದಾರಿಯಲ್ಲಿ ನಡೆಸುವುದು ಇನ್ನೂ ದೊಡ್ಡ ಕರ್ತವ್ಯ.

ಪ್ರತಿದಿನ ಸರಿ ಸುಮಾರು 190ಕ್ಕೂ ಹೆಚ್ಚು ಮಕ್ಕಳು ಅಪಾಯದಲ್ಲಿದ್ದಾರೆ ಎನ್ನುವ ಅಂಕಿ ಅಂಶವೇ ನಮಗೆ ಎಚ್ಚರಿಕೆಯ ಗಂಟೆ. ನಾವು ಕೇಳದಿದ್ದರೆ, ನೋಡದಿದ್ದರೆ, ಮಾತನಾಡದಿದ್ದರೆ, ಮಧ್ಯಪ್ರವೇಶಿಸದಿದ್ದರೆ ನಾಳೆ ಸಮಾಜ ಇನ್ನಷ್ಟು ಅಪಾಯಕಾರಿ ಆಗಬಹುದು. ಇಂತಹ ಸುದ್ದಿಗಳು ನಮ್ಮ ಮನಸ್ಸನ್ನು ಕಲಕುತ್ತವೆ . ಬಹುಶಃ  ಈ ಅಸ್ವಸ್ಥತೆಯೇ ನಮ್ಮನ್ನು ಇನ್ನು ಹೆಚ್ಚು ಜವಾಬ್ದಾರಿಯುತ ಪೋಷಕರನ್ನಾಗಿ ಮಾಡುತ್ತದೆ. ಮಕ್ಕಳ ಸುರಕ್ಷತೆ ಎನ್ನುವುದು ಕೇವಲ ಅವರ ಹಕ್ಕಲ್ಲ; ನಮ್ಮ ಮಾನವೀಯತೆಯ ಪರೀಕ್ಷೆಯು ಹೌದು.
ಲೇಖನ: ಶೃತಿ ದೀಕ್ಷಿತ್, ಚಿತ್ರದುರ್ಗ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!