Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಹಲವು ಕೆರೆಗಳಿಗೆ ತರಳಬಾಳು ಶ್ರೀಗಳಿಂದ ಬಾಗಿನ ಸಮರ್ಪಣೆ

ಚಂದ್ರವಳ್ಳಿ ನ್ಯೂಸ್, ಜಗಳೂರು:
ನೀರು ಎನ್ನುವ ಶಬ್ದ ಕೇಳಿದರೇನೇ ಅದೊಂದು ಅನನ್ಯ ಅನುಭೂತಿ. ಹಸಿದಿದ್ದ
ಶಾಶ್ವತ ಬರಪೀಡಿತ ಪ್ರದೇಶ ಎಂದು ರಾಜ್ಯದಲ್ಲಿಯೇ ಹಣೆಪಟ್ಟಿ ಕಟ್ಟಿಕೊಂಡು ನರಳುತ್ತಿದ್ದ ಜಗಳೂರು ತಾಲ್ಲೂಕಿನಾದ್ಯಂತ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪ ಶ್ರಮ, ಸರ್ಕಾರದ ಸಹಕಾರ, ಶಾಸಕರು, ಸಚಿವರುಗಳ ಕಾರ್ಯ ತತ್ಪರತೆಯ ಫಲವಾಗಿ ಕೆರೆಗಳು ತುಂಬಿ ನಳನಳಿಸುತ್ತಿವೆ.

ಕುಡಿಯುವ ನೀರಿಗೆ ಬರ. ಕೃಷಿಗೆ ನೀರಿಲ್ಲದ ಸ್ಥಿತಿ. ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿರುವ ನೀರಿನ ಪ್ರಮಾಣದಿಂದಾಗಿ ಫಲವತ್ತಾದ ಕೃಷಿಭೂಮಿ ಬರಡಾಗಿಸತ್ವಃ ಹೀನವಾಗಿದ್ದ ಅಲ್ಲೊಂದು ಇಲ್ಲೊಂದು ತೋಟಗಳು ಇಂದು ಅಕ್ಷರಶಃ  ಕಂಗೊಳಿಸುತ್ತಿವೆ.

ಭಗೀರಥನ ಕಠಿಣ ಪ್ರಯತ್ನದಿಂದ ಸ್ವರ್ಗದಲ್ಲಿರುವ ಗಂಗಾನದಿ ಧರೆಗಿಳಿದುಹಿಮಾಲಯದಲ್ಲಿ ಧುಮ್ಮಿಕ್ಕಿ, ಬಯಲಲ್ಲಿ ಭೋರ್ಗರೆದು, ಭಗೀರಥನ ಪೂರ್ವಜರಿಗೆ ಪ್ರೇತಲೋಕದಿಂದ ಮುಕ್ತಿ ನೀಡಿದರೆ, ಶ್ರೀ ತರಳಬಾಳು ಜಗದ್ಗುರುಗಳವರ ಶಾಶ್ವತ ಸ್ಮರಣೀಯ ಜಲಕೈಂಕರ್ಯದ ಯಶಸ್ಸಿನ ಪರಿಣಾಮ ಇಂದು ಜಗಳೂರು ಕೆಲವೇ ವರ್ಷಗಳಲ್ಲಿ ಮಲೆನಾಡಾಗಿ ಭಾಷ್ಯ ಬರೆಯಲಿದೆ.

ಇಂದು ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಜಗಳೂರು ತಾಲ್ಲೂಕಿನ ಹಿರೇಅರಕೆರೆ, ಮುಷ್ಟಿಗರ ಹಳ್ಳಿ, ಗೋಡೆ, ಮರಿಕುಂಟೆ, ಅಸಗೋಡು ಗ್ರಾಮದ ಕೆರೆಗಳನ್ನು ವೀಕ್ಷಿಸಿ ಬಾಗೀನ ಸಮರ್ಪಿಸಿದರು.

ಶ್ರೀ ಜಗದ್ಗುರುಗಳವರ ಆಗಮನವು ಪ್ರತಿ ಹಳ್ಳಿಗಳಲ್ಲಿ ಸಂಭ್ರಮ ತಂದಿತ್ತು. ಶ್ರೀ ಪೂಜ್ಯರ ಶಾಶ್ವತ ಸ್ಮರಣೀಯ ಜಲಕೈಂಕರ್ಯಕ್ಕೆ ಮನೆ ಮನೆಗಳಲ್ಲಿ ಭಕ್ತಿ ಕೃತಜ್ಞತೆಯು ಮೇಳೈಸಿತ್ತು. ಪೂರ್ಣಕುಂಭ ಹಿಡಿದ ಮಹಿಳೆಯರು ಶ್ರೀ ಜಗದ್ಗುರುಗಳವರನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.



ಪೂಜ್ಯರೊಂದಿಗೆ ಸಾಗಿದ  ಮೆರವಣಿಗೆಯಲ್ಲಿ  ಜನರ ಉತ್ಸಾಹ ಮುಗಿಲು ಮುಟ್ಟಿತ್ತು. ಊರಿಗೆ ಊರೇ ಸಂಭ್ರಮಪಡುವ ಅಪರೂಪದ ಕಾರ್ಯಕ್ರಮ ಇದಾಗಿತ್ತು.

ಅಸಗೋಡಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು ಆಶೀರ್ವಚನ ದಯಪಾಲಿಸಿದರು. ಶಾಸಕ ಬಿ. ದೇವೇಂದ್ರಪ್ಪನವರು, ಮಾಜಿ ಶಾಸಕರುಗಳಾದ  ರಾಮಚಂದ್ರಪ್ಟ, ಹೆಚ್.ಪಿ.ರಾಜೇಶ್ , ಬ್ರಾಹ್ಮಣ ಅಭಿವೃದ್ಧಿಯ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ, ಮುಖಂಡ ಕೆ.ಪಿ.ಪಾಲಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು ಇದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!