Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸ್ಟಿಂಗ್ ಆಪರೇಷನ್ ತನಿಖೆಗೆ ಆಗ್ರಹ: ಬಿ.ವೈ. ವಿಜಯೇಂದ್ರ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ, ಮೈಸೂರು ದಸರಾದಲ್ಲಿನ ಅವ್ಯವಸ್ಥೆ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.   ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದರು.

೧. ಸ್ಟಿಂಗ್ ಆಪರೇಷನ್: 'ಹಿಟ್ ಅಂಡ್ ರನ್' ಮಾಡದೇ ಸಮಗ್ರ ತನಿಖೆಯಾಗಲಿ   ಸಮರ್ಥ-ಅಸಮರ್ಥ ಪ್ರಶ್ನೆಯಲ್ಲ: ಇದು ಕೇವಲ ಯಾರೋ ಒಬ್ಬರ ಸಮರ್ಥ ಅಥವಾ ಅಸಮರ್ಥತೆಯ ವಿಚಾರವಲ್ಲ.

ಸ್ವತಃ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಸಚಿವ ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಕುರಿತು ಪ್ರಸ್ತಾಪಿಸಿ ಮಾತನಾಡಿದ್ದಾರೆ.
ಪಿತಾಮಹ ಯಾರೆಂದು ಗೊತ್ತು: ರಾಜ್ಯದಲ್ಲಿ ಇಂತಹ
‘ಸ್ಟಿಂಗ್ ಆಪರೇಷನ್’ ಸಂಸ್ಕೃತಿಯ ಪಿತಾಮಹರು ಯಾರು ಎಂಬುದು ಇಡೀ ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ.
ತನಿಖೆಗೆ ಆಗ್ರಹ: ಈ ವಿಷಯದಲ್ಲಿ ಸರ್ಕಾರ ಹಿಟ್ ಅಂಡ್ ರನ್ ಮಾಡುವಂತಿಲ್ಲ
, ಪ್ರಕರಣದ ಕುರಿತು ಸರಿಯಾದ ರೀತಿಯಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು.   ಸಿಎಂ ಬುಡಕ್ಕೆ ಬರಲಿದೆ: ಪ್ರಸ್ತುತ ಸಿಎಂ ಡಿ.ಕೆ. ಶಿವಕುಮಾರ್ ಬೇರೆಯದೇ ಪ್ರಪಂಚದಲ್ಲಿದ್ದಾರೆ. ಮುಂಬರುವ ಎಂಎಲ್‌ಸಿ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಈ ಸ್ಟಿಂಗ್ ಆಪರೇಷನ್ ವಿಷಯ ನೇರವಾಗಿ ಇವರ ಬುಡಕ್ಕೇ ಬರಲಿದೆ. 

 ಮೈಸೂರು ದಸರಾದಲ್ಲಿ ತೀವ್ರ ಅವ್ಯವಸ್ಥೆ:
   ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದರು.   ರೈತ ಜಾನುವಾರುಗಳ ಪ್ರದರ್ಶನ/ಜಾತ್ರೆಯಲ್ಲಿ ರಾಸುಗಳಿಗೆ ಸರಿಯಾದ ಮೇವಿಲ್ಲ
, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಊಟದ ವ್ಯವಸ್ಥೆಯಿಲ್ಲ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿಜೇತರಿಗೆ ಇನ್ನೂ ಬಹುಮಾನ ವಿತರಿಸಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

೩. ಕಬ್ಬು ಬೆಳೆಗಾರರ ಹೋರಾಟಕ್ಕೆ ಬಿಜೆಪಿ ಬೆಂಬಲ: 'SAP 1 ಸಾವಿರ ರೂ. ಘೋಷಿಸಿ'   ಪೂರ್ಣ ಬೆಂಬಲ: ರಾಜ್ಯಾದ್ಯಂತ ಕಬ್ಬು ಬೆಳೆಗಾರರು ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತದೆ.

ಕೇಂದ್ರದ ಶ್ರಮ & ರಾಜ್ಯದ ಜವಾಬ್ದಾರಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಸಚಿವರೊಂದಿಗೆ ಕಬ್ಬು ಬೆಳೆಗಾರರ ಕುರಿತು ಮಾತನಾಡಿದ್ದಾರೆ. ದಸರಾ ಬಳಿಕ ಕೇಂದ್ರದ ಕಮಿಟಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ರೈತರು ತಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ಸಮಿತಿಯ ಮುಂದೆ ಮಂಡಿಸಬಹುದು. ಪ್ರಹ್ಲಾದ್ ಜೋಶಿ ಅವರು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ.  

SAP ಪರಿಹಾರ ನೀಡಲಿ: ಕಬ್ಬು ಬೆಳೆಗಾರರ ಸಮಸ್ಯೆಗೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಬೇಕು. ರಾಜ್ಯ ಸರ್ಕಾರದ ಜವಾಬ್ದಾರಿಯಾಗಿ ರಾಜ್ಯ ಸಲಹಾ ಬೆಲೆ (SAP) ರೂಪದಲ್ಲಿ ಪ್ರತಿ ಟನ್‌ಗೆ 1,000 ರೂ. ನೀಡಬೇಕು. 

 ತೂಕದಲ್ಲಿ ಮೋಸ ಸರಿಪಡಿಸಿ: ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ವಿಷಯದಲ್ಲಿ ರೈತರಿಗೆ ನಿರಂತರವಾಗಿ ಮೋಸವಾಗುತ್ತಿದೆ ಎಂಬ ದೂರುಗಳಿದ್ದು, ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಇದನ್ನು ಸರಿಪಡಿಸಬೇಕು.

 ೪. 'ಕಾಕ್ರೋಚ್ ಪಾರ್ಟಿ' ಫಂಡಿಂಗ್ ಆರೋಪ ಹಾಗೂ ರಾಹುಲ್ ಗಾಂಧಿ ನಿಲುವು   ಕಾಂಗ್ರೆಸ್ ಮುಖಂಡರ ಹೇಳಿಕೆಗಳನ್ನು ಗಂಭೀರವಾಗಿ ಗಮನಿಸಿದ್ದೇನೆ. ರಾಹುಲ್ ಗಾಂಧಿ ಅವರೇ ಸಿಜೆಪಿ ನಾಯಕರ ಜೊತೆ ನಿಂತಿದ್ದಾರೆ. ಈ ಸಂಘಟನೆಗಳ ಮೂಲಕ ಕಾಂಗ್ರೆಸ್‌ಗೆ ಫಂಡಿಂಗ್ ಆಗುತ್ತಿದೆಯೇ ಎಂಬ ಅನುಮಾನವಿದೆ.

 ದೇಶದಲ್ಲಿ ನ್ಯಾಯಸಮ್ಮತ ಹೋರಾಟವನ್ನು ಯಾರೇ ಬೇಕಾದರೂ ಮಾಡಬಹುದು. ಆದರೆ, ಸರಣಿ ಸೋಲುಗಳಿಂದ ಹತಾಶರಾಗಿರುವ ರಾಹುಲ್ ಗಾಂಧಿ ದೇಶದಲ್ಲಿ ಅಸ್ಥಿರತೆ ಹಾಗೂ ಅತಂತ್ರ ವಾತಾವರಣ ಸೃಷ್ಟಿಸಲು ಕಪಟ ನಾಟಕವಾಡುತ್ತಿದ್ದಾರೆ.   ಇಂತಹ ಕಪಟ ನಾಟಕಗಳಿಂದ ಯಾವುದೇ ಪ್ರಯೋಜನವಿಲ್ಲ, ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ.

೫. ಹಿರಿಯೂರು ಬೈ-ಎಲೆಕ್ಷನ್ ಅಭ್ಯರ್ಥಿ ಆಯ್ಕೆ  ಹಿರಿಯೂರು ಉಪಚುನಾವಣೆ ಕುರಿತು ಬಿಜೆಪಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ.   ಮೈತ್ರಿ ಪಕ್ಷದ ನಾಯಕರ ಜೊತೆ ಚರ್ಚಿಸಿ, ಶೀಘ್ರದಲ್ಲೇ ಉಪಚುನಾವಣೆಯ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.  

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಆಯುಧ ಪೂಜೆಕೆಪಿಸಿಸಿ ನಿಧಿಗೆ ಶಾಲೂ-ಹಾರದ ಬದಲು ದೇಣಿಗೆ ನೀಡಿ: ಬಿ.ಕೆ. ಹರಿಪ್ರಸಾದ್ ಕರೆ ಹಿರಿಯೂರು ತಾಲೂಕಿನಲ್ಲಿ ಮಳೆ ಅಬ್ಬರ: ಬಬ್ಬೂರು ಸಮೀಪದ ಜಮೀನಿನಲ್ಲಿ ನಿಂತ ಮಳೆ ನೀರುಸಮಾನತೆಗಾಗಿ ಸಹಭೋಜನ: ಅರಿವು ಭಾರತದಿಂದ ವಿಶಿಷ್ಟ ಚಿಂತನೆ–ರಾಹುಲ್ ಗಾಂಧಿ ವಿರುದ್ಧ ಗರ್ಭಿಣಿ ಪತ್ರಕರ್ತೆಯ ಗಂಭೀರ ಆರೋಪ: ಪೊಲೀಸ್ ಆಯುಕ್ತರಿಗೆ ಕ್ರಿಮಿನಲ್ ದೂರುಸರ್ಕಾರಿ ನೌಕರರು ಹಾಗೂ ಗುತ್ತಿಗೆ ಸಿಬ್ಬಂದಿಗೆ ರಾತ್ರಿ ಹಾಜರಾತಿ ಕಡ್ಡಾಯ: ರಾಜ್ಯ ಸರ್ಕಾರದ ಮಹತ್ವದ ಆದೇಶಮಹತ್ವದ ಆಡಳಿತಾತ್ಮಕ ಸುಧಾರಣೆ: ಸಕಾಲ ವ್ಯಾಪ್ತಿಗೆ ಎಲ್ಲಾ ಸರ್ಕಾರಿ ಸೇವೆಗಳು ಹಾಗೂ ಆರ್‌ಟಿಐ ಆನ್‌ಲೈನ್ ಕಡ್ಡಾಯನೈಸ್ ರಸ್ತೆಯಲ್ಲಿ ಕೆಮಿಕಲ್ ಟ್ಯಾಂಕರ್ ಸ್ಫೋಟ: ಮುಗಿಲು ಮುಟ್ಟಿದ ದಟ್ಟ ಕಪ್ಪು ಹೊಗೆ, ಟ್ರಾಫಿಕ್ ಜಾಮ್!1,000 ಗ್ರಾಮೀಣ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆಬಿ.ಎಸ್. ಯಡಿಯೂರಪ್ಪ ಸ್ಫೋಟಕ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಸಿ ಕೆಳಗಿಳಿಸಲಾಗಿದೆ