ಚಂದ್ರವಳ್ಳಿ ನ್ಯೂಸ್, ಹಿರಿಯೂರು
ನಮಗೆ ಮುಂದಿನ ಎರಡು ಮೂರು ದಿನಗಳ ಒಳಗಾಗಿ ದಿಂಡಾವರ ಗ್ರಾಮದಲ್ಲಿ ಹಾಗೂ ಕಲ್ವಳ್ಳಿ ಭಾಗದ ಪ್ರತಿಯೊಂದು ಪಂಚಾಯತಿ ವ್ಯಾಪ್ತಿಯಲ್ಲಿ ಒಂದೊಂದು ಮೇವು ಬ್ಯಾಂಕ್ ಅನ್ನು ತೆರೆದು ತಮ್ಮ ಜಾನುವಾರುಗಳಿಗೆ ಮೇವು ಒದಗಿಸಿ ಕೊಡಬೇಕು ಎಂಬುದಾಗಿ ಕಲ್ವಳ್ಳಿ ಭಾಗದ ರೈತ ಮುಖಂಡರುಗಳು ಒತ್ತಾಯಿಸಿದರು.
ತಾಲೂಕಿನ ಕಲ್ವಳ್ಳಿ ಭಾಗದ ದಿಂಡಾವರ ಪಶು ಆಸ್ಪತ್ರೆ ಆಸ್ಪತ್ರೆ ಆವರಣದಲ್ಲಿ ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ಕೂಡಿಹಾಕಿ ಮುತ್ತಿಗೆಯನ್ನು ಹಾಕಿ, ಕಾಂಪೌಂಡ್ ಬಾಗಿಲು ಹಾಕುವ ಮೂಲಕ ಪ್ರತಿಭಟನೆ ಮಾಡಿ ಮಾತನಾಡಿದರು.
ಪ್ರಾಥಮಿಕ ಪಶು ಆಸ್ಪತ್ರೆಗೆ ಯಾವುದೇ ಇನ್ಸ್ ಪೆಕ್ಟರ್ ರವರನ್ನು ನೇಮಿಸದೆ ಕಳೆದ ಒಂದು ವರ್ಷಗಳಿಂದ ಹಾಗೆ ಡಿ ಗ್ರೂಪ್ ನೌಕರರಿನಿಂದ ಬಾಗಿಲನ್ನು ತೆಗೆಸುವುದು ಮುಚ್ಚುವುದನ್ನು ಬಿಟ್ಟು ಮತ್ತಿನ್ಯಾವ ಕೆಲಸವು ಆಗದೇ ಇರುವುದು ನೋಡಿ ಹಾಗೂ ಯಾವ ಸರ್ಕಾರಿ ಅಧಿಕಾರಿ ಇಲ್ಲದಿರುವುದನ್ನು ಕಂಡು ರೈತರು ಈ ಪ್ರತಿಭಟನೆಯನ್ನು ಸದ್ಯಕ್ಕೆ ಹಿಂಪಡೆದರು.
ನಂತರ ಮುಂದಿನ ವಾರದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ತಮ್ಮ ಜಾನುವಾರುಗಳೊಂದಿಗೆ ಬಂದು ಬಟ್ಟೆಯನ್ನು ತೆಗೆದು ತಮ್ಮ ದೇಹಕ್ಕೆ ಉಪ್ಪನ್ನು ಹಚ್ಚಿಕೊಳ್ಳುವ ಮೂಲಕ ದನಗಳ ಮುಂದೆ ನಿಂತು ದನಗಳ ಮೇವಿನ ದಾಹವನ್ನು ತೀರಿಸುವ ಮೂಲಕ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ದಿಂಡಾವರ ಭಾಗದ ರೈತರು ಒಟ್ಟಾರೆ ತೀರ್ಮಾನಿಸಿದರು.
ಬರದ ನಿರ್ವಹಣೆಗಾಗಿ ಹೆಲ್ಡ್ ಲೈನ್ ನಂಬರನ್ನು ಶೀಘ್ರವೇ ತೆಗೆಯಬೇಕೆಂದು ಈ ಎಲ್ಲಾ ಕಾರ್ಯಗಳು ಆಗದೆ ಹೋದಲ್ಲಿ ತಾಲೂಕು ಕಚೇರಿಯ ಅವರಣದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ. ಪ್ರತಿಯೊಂದು ಜಾನುವಾರುಗಳು ಸಹ ಬಂದು ಸೇರುತ್ತವೆ ಎನ್ನುವ ಮೂಲಕ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ಪ್ರತಿ ಬರಗಾಲದಲ್ಲೂ ಗಾಯತ್ರಿ ಜಲಾಶಯದ ಹಿಂಭಾಗ ಗೋಶಾಲೆಯನ್ನು ಸರ್ಕಾರ ತೆರೆಯುವುದ ಪ್ರತಿ ಬರಗಾಲದಲ್ಲೂ ಗಾಯತ್ರಿ ಜಲಾಶಯದ ಹಿಂಭಾಗ ಗೋಶಾಲೆಯನ್ನು ಸರ್ಕಾರ ತೆರೆಯುವುದ ನ್ನು ನಿಲ್ಲಿಸಬೇಕು ಕಾರಣ ಗಾಯತ್ರಿ ಜಲಾಶಯದ ಹಿಂಭಾಗ ಯಾವುದೇ ಊರಿಲ್ಲ ಉದ್ಯಾನ ಇಲ್ಲ, ಹೋಟೆಲ್ ಗಳಿಲ್ಲ ರೈತರು ಹಸಿದುಕೊಂಡು ಇರಲು ಆಗುವುದಿಲ್ಲ ಅಥವಾ ಯಾರಾದರೂ ಸಂಚಾರಿ ಹೋಟೆಲ್ ನವರು ತೆರೆದರೆ ಅವರಿಗೆ ದುಡ್ಡು ಕೊಟ್ಟು ತಿನ್ನುವನ್ನು ಹಣ ರೈತರಲ್ಲಿಲ್ಲ, ಇದರ ನಂತರ ರೈತರು ತನ್ನ ಊರಿಂದ ಆಹಾರವನ್ನು ಕಳಿಸಲಿಕ್ಕೆ ಯಾವುದೇ ಸಾರಿಗೆ ಸೌಲಭ್ಯಗಳು ಇರುವುದಿಲ್ಲ ಇದನ್ನು ಮನಗಂಡು ತಾಲೂಕು ಆಡಳಿತ ಪ್ರತಿಯೊಂದು ಪಂಚಾಯತಿ ವ್ಯಾಪ್ತಿಯಲ್ಲಿ ಒಂದೊಂದು ಮೇವಿನ ಬ್ಯಾಂಕನ್ನು ತೆಗೆದು ರೈತರಿಗೆ ಉಚಿತವಾಗಿ ಮೇವನ್ನು ಸರಬರಾಜು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತಮುಖಂಡರುಗಳಾದ ಚಂದ್ರಗಿರಿ, ಮಂಜುನಾಥ್ ವಿರುಪಾಕ್ಷ , ಸಣ್ಣ ತಿಮ್ಮಣ್ಣ, ನಾರಾಯಣಸ್ವಾಮಿ, ನಿಂಗಪ್ಪ, ಗಿರೀಶ್, ಗಾಡಿ ರಾಜ, ಸುಬ್ಬಣ್ಣ, ತಿಮ್ಮಣ್ಣ, ಭೂತಣ್ಣ, ರವಿಕುಮಾರ್, ಕರಡಪ್ಪ ಇತರರು ಇದ್ದರು.




