Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ

Advertisement
 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಾಲಾ ಮಕ್ಕಳ ಸಮವಸ್ತ್ರವು ಕೇವಲ ಬಟ್ಟೆಯಲ್ಲ ಅದು ಸಮಾನತೆ ಶಿಸ್ತು ಮತ್ತು ಆತ್ಮಗೌರವದ ಸಂಕೇತ ಎಂದು ದೊಡ್ಡಬಳ್ಳಾಪುರ ಹತ್ತನೇ ವಾರ್ಡಿನ  ನಗರಸಭಾ ಸದಸ್ಯರಾದ ನಾಗವೇಣಿ ತಿಳಿಸಿದರು.


ನಗರದ ವಿದ್ಯಾನಗರದಲ್ಲಿರುವ ಗುರುಕುಲ ಕನ್ನಡ ಸರ್ಕಾರಿ ಮಾಧ್ಯಮ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಶಾಲಾ ಮಕ್ಕಳಿಗೆ ನೀಡಿದ ಸಮವಸ್ತ್ರ ಹಾಗೂ ಪಠ್ಯೇತರ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಶಾಲಾ ಸಮವಸ್ತ್ರ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಶಾಲೆಯಲ್ಲಿ ಶಿಸ್ತು ಮತ್ತು ಶ್ರದ್ದೆಯ ಆಸಕ್ತಿಯನ್ನು ಬೆಳೆಸುತ್ತದೆ ಎಂದರು ಈ ಹಿನ್ನೆಲೆಯಲ್ಲಿ ಇನ್ನರ್ ವೀಲ್ ಸಂಸ್ಥೆ ಮಕ್ಕಳ ಶಿಕ್ಷಣ ಆರೋಗ್ಯ ಮತ್ತು ಸಮಾಜದ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸೇವೆ ಅತ್ಯುತ್ತಮವಾದದ್ದು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಇಸಿಓ ಜಯಶ್ರೀ ಮಾತನಾಡಿ ಶಾಲಾ ಮಕ್ಕಳಿಗೆ ನೀವು ಪಡೆದಿರುವ ಸಮವಸ್ತ್ರ ಸೇರಿದಂತೆ ಪಠ್ಯೇತರ ಸಾಮಗ್ರಿಗಳು ಇತರರ ಶ್ರಮದ ಕೊಡುಗೆಯಾಗಿದ್ದು ಕೃತಜ್ಞತೆ ಮತ್ತು ಜವಾಬ್ದಾರಿಯ ಮಹತ್ವವನ್ನು ಅರಿತು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಯಶಸ್ವಿಯಾದ ನಂತರ ನೀವು ಕೂಡ ಸಮಾಜದಲ್ಲಿ ಇತರರಿಗೆ ಸಹಾಯ ಮಾಡಲು ಮುಂದೆ ಬರಬೇಕು ಎಂದು ಶಾಲಾ ಮಕ್ಕಳನ್ನು ಪ್ರೇರೇಪಿಸಿದರು ಕಾರ್ಯಕ್ರಮದಲ್ಲಿ ಐ.ಡಬ್ಲ್ಯೂ.ಬಿ.ಸಿ. ಅದ್ಯಕ್ಷೆ ನಯನಾ ಮಂಜುನಾಥ್ ಶಾಲೆಯ ಮುಖ್ಯ ಶಿಕ್ಷಕರು ಶಾಲಾ ವಿದ್ಯಾರ್ಥಿಗಳುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST