Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಕ್ತ ದಾನ ಮಾಡಿ, ಆರೋಗ್ಯಕರ ಜೀವನ ಹೊಂದಿ-ಡಾ. ತುಳಸಿ ರಂಗನಾಥ್

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಕ್ತ ದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಯುವುದರ ಜೊತೆಗೆ ದಾನಿಗಳ ಆರೋಗ್ಯಕ್ಕೂ ಹಲವು ರೀತಿಯ ಅನುಕೂಲಗಳಿವೆ. ಹೀಗಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಜಿಲ್ಲಾ ರಕ್ತ ಸುರಕ್ಷತಾ ಅಧಿಕಾರಿ ಡಾ. ತುಳಸಿ ರಂಗನಾಥ್ ಹೇಳಿದರು.

ನಗರದ ಎಸ್ ಜೆಎಂಐಟಿ ಕಾಲೇಜಿನಲ್ಲಿ ಈಚೆಗೆ ಆಯೋಜಿಸಲಾಗಿದ್ದ ‘ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

18 ವರ್ಷ ತುಂಬಿದ, ಕನಿಷ್ಠ 45 ಕೆ.ಜಿ. ತೂಕ ಹಾಗೂ 12.5ಕ್ಕೂ ಹೆಚ್ಚು ಹಿಮೋಗ್ಲೋಬಿನ್ ಪ್ರಮಾಣ ಹೊಂದಿರುವ ಯಾವುದೇ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ತೊಂದರೆಗಳು ದೂರವಾಗುತ್ತವೆ. ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದಲ್ಲದೆ, ಅನಾವಶ್ಯಕ ಕಬ್ಬಿಣಾಂಶ ಹಾಗೂ ಕ್ಯಾಲೋರಿಗಳು ಕಡಿಮೆಯಾಗಿ ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಜೀವ ಉಳಿಸಿದ ಆತ್ಮತೃಪ್ತಿ ದೊರೆಯುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿ ಮಾದರಿಯಾಗಿರುವ ಆನಂದ್ ಹಾಗೂ ಕೋರ ಪವನ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ರಕ್ತದಾನಿಗಳು ತಮ್ಮ ಅನುಭವ ಹಾಗೂ ರಕ್ತದಾನದಿಂದ ದೊರೆತ ಆರೋಗ್ಯ ಪ್ರಯೋಜನಗಳ ಹಂಚಿಕೊಂಡರು.

ಇದೇ ವೇಳೆ ಹೆಚ್‍ಐವಿ/ಏಡ್ಸ್ ಕುರಿತು ಮಾತನಾಡಿದ ಜಿಲ್ಲಾ ಮೇಲ್ವಿಚಾರಕ ಅಶೋಕ್, ಯುವಜನತೆ ಸುರಕ್ಷಿತ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಹೆಚ್‍ಐವಿ ಜಾಗೃತಿ ಮಾಹಿತಿ ಸುಲಭವಾಗಿ ದೊರೆಯುವಂತೆ ಮಾಡಲು ಕ್ಯೂಆರ್ ಕೋಡ್ ಪೋಸ್ಟರ್‍ಗಳನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಂಚಾಲಕರಾದ ವಿ.ಅನುಷಾ, ಎನ್.ಎಸ್.ಎಸ್. ಸಂಚಾಲಕ ನಿರಂಜನ್ ಹಾಗೂ ಡ್ಯಾಪ್ಕೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೇತಾಜಿ ಸ್ನೇಹ ಬಳಗದಿಂದ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ     ಪ್ರಕೃತಿ ಸಮತೋಲನಕ್ಕೆ ಸಹಬಾಳ್ವೆಯ ಸಂಕಲ್ಪ'ಜೀವಜಾಲದ ಕೊಂಡಿ ಕಳಚದಿರಲಿಕೆಟ್ಟ ಆಲೋಚನೆಗಳನ್ನು ದೂರ ಮಾಡಿ, ಸನ್ಮಾರ್ಗದಲ್ಲಿ ಸಾಗಲು ಸತ್ಸಂಗಗಳು ಮತ್ತು ಭಜನೆ ತುಂಬಾ ಅಗತ್ಯಅಗಲಿದ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿಕನ್ನಡ ಕೌಸ್ತುಭ ಪ್ರಕಾಶನ ನಡೆಸಿದ ಕಾವ್ಯ/ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಡಿ.ದೇವರಾಜ ಅರಸು ನಿಗಮ: ಅರ್ಜಿ ಸಲ್ಲಿಕೆ ಅವಧಿ ಅ. 15ರವರೆಗೆ ವಿಸ್ತರಣೆ ಹಿರಿಯೂರಿನಲ್ಲಿ ಬಿರುಬಿಸಿಲನ್ನೂ ಲೆಕ್ಕಿಸದೆ ಹೆಜ್ಜೆ ಹಾಕಿದ ಅನ್ನದಾತರು!ನವೋದಯ ವಿದ್ಯಾಲಯ ಪ್ರವೇಶ: ಅರ್ಜಿ ಸಲ್ಲಿಕೆ ಅ.15 ರವರೆಗೆ ವಿಸ್ತರಣೆರಕ್ತ ದಾನ ಮಾಡಿ, ಆರೋಗ್ಯಕರ ಜೀವನ ಹೊಂದಿ-ಡಾ. ತುಳಸಿ ರಂಗನಾಥ್