ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರದ ಎಥೆನಾಲ್ ನೀತಿ ಹಾಗೂ ಆಹಾರ ನಿಗಮದ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ಎಥೆನಾಲ್ ತಯಾರಕರಿಗೆ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಟ್ಯಾಕ್ಸ್ ಪೇಪರ್‌ಗಳ (ತೆರಿಗೆದಾರರ) ಹಣದಿಂದ ಸಾರ್ವಜನಿಕರ ಆಹಾರ ಭದ್ರತೆಗಾಗಿ ಖರೀದಿಸುವ ಅಕ್ಕಿಯನ್ನು, ಎಥೆನಾಲ್ ಉತ್ಪಾದಕರಿಗೆ ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ದೇಶದ ಅರ್ಥವ್ಯವಸ್ಥೆಗೆ ಉಂಟಾಗುತ್ತಿರುವ ನಷ್ಟ ಎಂದು ಅವರು ಆರೋಪಿಸಿದ್ದಾರೆ.
ಕಡಿಮೆ ದರದಲ್ಲಿ ಅಕ್ಕಿ ಮಾರಾಟ: ಆಹಾರ ಧಾನ್ಯಗಳ ಕೊಡು-ಕೊಳ್ಳುವಿಕೆ ಮತ್ತು ಸಾಗಾಣಿಕೆ ವೆಚ್ಚಗಳನ್ನು ಭರಿಸಿ ಸಾರ್ವಜನಿಕ ಹಣದಿಂದ ಸಂಗ್ರಹಿಸಿದ FCI ಅಕ್ಕಿಯನ್ನು ಎಥೆನಾಲ್ ಕಂಪನಿಗಳಿಗೆ ಸುಮಾರು 40% ನಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
₹15.94 ಕೋಟಿ ಮೌಲ್ಯದ ಡ್ರಗ್ಸ್ ಹಾಗೂ ಅಕ್ರಮ ತಡೆ: ಮಾದಕ ವಸ್ತುಗಳ ಅಕ್ರಮ ಸಾಗಣೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ನಡೆಸುತ್ತಿರುವ ಶೂನ್ಯ ಸಹಿಷ್ಣುತೆ ಕಾರ್ಯಾಚರಣೆಯನ್ನೂ ಉಲ್ಲೇಖಿಸಿರುವ ಅವರು, ಇತ್ತೀಚಿನ ದಿನಗಳಲ್ಲಿ ₹15.94 ಕೋಟಿ ಮೌಲ್ಯದ ಡ್ರಗ್ಸ್ ಹಾಗೂ 7 ಕೆಜಿ ಎಂಡಿಎಂಎ, 21 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯ ಜನರಿಗೆ ಸಿಗದ ಲಾಭ: ಎಥೆನಾಲ್ ಉತ್ಪಾದಕರಿಂದ ದುಬಾರಿ ಬೆಲೆಗೆ ಇಂಧನವನ್ನು ಖರೀದಿಸಿ ಪೆಟ್ರೋಲ್‌ನೊಂದಿಗೆ ಮಿಕ್ಸ್ ಮಾಡಲಾಗುತ್ತಿದ್ದರೂ, ಸಾಮಾನ್ಯ ವಾಹನ ಸವಾರರಿಗೆ ಹಾಗೂ ಗ್ರಾಹಕರಿಗೆ ಯಾವುದೇ ಬೆಲೆ ಇಳಿಕೆಯ ಪ್ರಯೋಜನ ಸಿಗುತ್ತಿಲ್ಲ ಮತ್ತು ವಾಹನಗಳ ಮೈಲೇಜ್ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಆರ್ಥಿಕ ನೀತಿಯ ಹಿಂದೆ ಯಾರಿಗೆ ಲಾಭವಾಗುತ್ತಿದೆ ಮತ್ತು ಯಾರು ಯಾರಿಗೆ ಸಬ್ಸಿಡಿ ನೀಡುತ್ತಿದ್ದಾರೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕೆಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.



