Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚೇರ್ಮನ್ ಎಲ್ಲಪ್ಪನವರ ಜ್ಞಾಪಕಾರ್ಥವಾಗಿ ಅನ್ನದಾನ

ಚಂದ್ರವಳ್ಳಿ ನ್ಯೂಸ್,ದೊಡ್ಡಬಳ್ಳಾಪುರ : 
ದರ್ಗಾಜೋಗಹಳ್ಳಿ ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಚೇರ್ಮನ್ ಎಸ್ ಎಲ್ಲಪ್ಪ ಅವರನ್ನು ಕುರಿತು ಹಾಗೂ ಕರೆಕಲ್ಲು ಜೋಗಳ್ಳಿ ದರ್ಗಾಜೋಗಹಳ್ಳಿಯಾಗಿ ರೂಪುಗೊಂಡ ಬಗೆ  ಮತ್ತು ಗ್ರಾಮ ದೇವತೆ ಮುತ್ಯಾಲಮ್ಮ ದೇವಿ ದೇವಾಲಯದ ಅಭಿವೃದ್ಧಿ ಕುರಿತಂತೆ ಸಮಗ್ರ ಮಾಹಿತಿ ಒಳಗೊಂಡ ಅಂಕಣ ಬಿಡುಗಡೆ ಕಾರ್ಯಕ್ರಮವನ್ನು ಚೇರ್ಮನ್ ಎಸ್ ಎಲ್ಲಪ್ಪ ನವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಹಾಗೂ ಗ್ರಾಮದ ಪ್ರಮುಖರಿಂದ ಆಯೋಜನೆ ಮಾಡಲಾಗಿತ್ತು.

 ಕಾರ್ಯಕ್ರಮದಲ್ಲಿ ಎಸ್ ಎಲ್ಲಪ್ಪನವರ ಪುತ್ರ ಜೆ ವೈ ಮಲ್ಲಪ್ಪ ಮಾತನಾಡಿ ಕೇವಲ ಹಳ್ಳಗುಡ್ಡ ಬಂಡೆಗಳಿಂದ ಕೂಡಿದ್ದ ಕರೆ ಕಲ್ಲು ಜೋಗಳ್ಳಿಯು ಇಂದು ನಗರಕ್ಕೆ ಸೆಡ್ಡು ಹೊಡೆಯುವ ರೀತಿ ನಿರ್ಮಾಣವಾಗಿದೆ ಗ್ರಾಮದ ಅಭಿವೃದ್ಧಿಯಲ್ಲಿ ನಮ್ಮ ತಂದೆಯವರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಹೆಮ್ಮೆಯ ವಿಷಯ ಇದನ್ನು ಪ್ರತ್ಯಕ್ಷ ಕಂಡಿರುವ ಸ್ಥಳೀಯ ಹಿರಿಯರು ತಮ್ಮ ಅನುಭವವನ್ನು ಹಚ್ಚಿಕೊಂಡಾಗ ಸಂತಸವಾಗುತ್ತದೆ ಎಂದರು.

 ದರ್ಗಾಜೋಗಹಳ್ಳಿ ಗ್ರಾಮಕ್ಕೆ ಮೊದಲ ವಿದ್ಯುತ್,  ಮೊದಲ ಪಾಠಶಾಲೆ,  ಸಾರ್ವಜನಿಕರ ಅನುಕೂಲಕ್ಕೆ ಉತ್ತಮ ರಸ್ತೆಗಳ ನಿರ್ಮಾಣ ಸೇರಿದಂತೆ ಹಲವು ಉತ್ತಮ ಕಾರ್ಯಗಳನ್ನು ನಮ್ಮ ತಂದೆಯವರ ಕಾಲದಲ್ಲಿ ಮಾಡಲಾಗಿದೆ. ಗ್ರಾಮಸ್ಥರ ಸಹಕಾರ ಪಡೆದು  ಗ್ರಾಮದ ಅಭಿವೃದ್ಧಿಗಾಗಿ ಸೋಮವಾರದ ಕೆಲಸ ಮಾಡುವ ಮುಖಾಂತರ ಮಾಡಿರುವ ಚರಂಡಿ, ರಸ್ತೆ ಸೌಲಭ್ಯಗಳು ಇಂದಿಗೂ ಬಳಕೆಯಾಗುತ್ತಿರುವುದು  ಹೆಮ್ಮೆಯ ಸಂಗತಿಯಾಗಿದೆ ಎಂದರು.

 ಕೇವಲ ಹಳ್ಳಗಳಿಂದ ಬಂಡೆಗಳಿಂದ ಕೂಡಿದ್ದ ಪ್ರದೇಶವು ಇಂದು ಶೇಕಡ  ೭೫ರಷ್ಟು ಜನವಸತಿಯಿಂದ ಕೂಡಿದೆ ಇಂದಿಗೂ ಸಂಚಾರಕ್ಕೆ ಅಡೆತಡೆಗಳಿಲ್ಲದಂತೆ ರಸ್ತೆ ನಿರ್ಮಾಣ ಮಾಡಿರುವುದು ಚೇರ್ಮನ್ ಎಸ್ ಎಲ್ಲಪ್ಪನವರ ದೂರ ದೃಷ್ಟಿಗೆ ಉತ್ತಮ ಉದಾಹರಣೆಯಾಗಿದೆ. ತಮ್ಮ ಅವಧಿಯಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಉಚಿತವಾಗಿ ನಿವೇಶಗಳನ್ನು ಹಂಚಿವ ಮೂಲಕ ನೂರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ನಮ್ಮ ಬಳಿ ಅಧಿಕಾರವಿದ್ದಾಗ ಜನಸೇವೆಗೆ ಹಿಂಜರಿಯಬಾರದು ಎಂಬ ತಾತ್ಪರ್ಯವನ್ನು ತಮ್ಮ ಕಾರ್ಯದ ಮೂಲಕ ನಮ್ಮೆಲ್ಲರಿಗೂ ತಿಳಿಸಿದ್ದಾರೆ  ಎಂದರು.

 ಸ್ಥಳೀಯರಾದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ನಾಗರತ್ನಮ್ಮ ಮಾತನಾಡಿ ನಮ್ಮದು ದಲಿತ ಕುಟುಂಬಗಳು ನಮಗೆ ಆಶ್ರಯದ ಕೊರತೆ ಇದ್ದಾಗ ಚೇರ್ಮನ್ ಎಸ್ ಎಲ್ಲಪ್ಪನವರು ಉಚಿತ ನಿವೇಶನ ನೀಡುವುದಲ್ಲದೆ ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿದ್ದರು  ಸಹಾಯದಿಂದಲೇ ಇಂದಿಗೂ ನಮ್ಮ ಕುಟುಂಬಗಳು ಗ್ರಾಮದಲ್ಲಿ ನೆಲೆಸಿವೆ ಅವರ ಸೇವೆ ಗ್ರಾಮಕ್ಕೆ ಅಪಾರವಾದದ್ದು. ಉತ್ತಮ ಜನಸೇವೆ ಹಾಗೂ ನಿಸ್ವಾರ್ಥ ರಾಜಕಾರಣಕ್ಕೆ ಎಲ್ಲಪ್ಪನವರು ಉತ್ತಮ ಉದಾಹರಣೆ ಎಂದರು.

 ಸ್ಥಳೀಯ ಹಿರಿಯ ನಾಗರಿಕರಾದ ವೆಂಕಟರಮಣಪ್ಪ ಮಾತನಾಡಿ ನಮ್ಮ ತಂದೆಯವರಾದ  ಮುತ್ತರಾಯಪ್ಪ ರವರು ೪೫ ವರ್ಷಗಳ ಹಿಂದೆ ದರ್ಗಾಜೋಗಹಳ್ಳಿ  ಗ್ರಾಮಕ್ಕೆ ವಲಸೆ ಬಂದಿದ್ದು ಚೆರ್ಮನ್ ಎಸ್ ಎಲ್ಲಪ್ಪನವರ ಹೊಲ ತೋಟಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ತದನಂತರ ಎಸ್ ಎಲ್ಲಪ್ಪನವರು ಉಚಿತ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ಸಹಾಯ ನೀಡಿದ್ದರು ಅಂದಿನಿಂದ ಇಂದಿನವರೆಗೂ ನಾವು ನಮ್ಮ ಕುಟುಂಬಸ್ಥರು ದರ್ಗಾ ಜೋಗಹಳ್ಳಿಯಲ್ಲಿ ವಾಸಿಸುತ್ತಿದ್ದೇವೆ. ಕೆಲಸ ಹರಸಿ ಬಂದ ನಮಗೆ ಜೀವನ ಕಟ್ಟಿಕೊಳ್ಳುವುದು ಸಹಕಾರ ನೀಡಿದವರು ಎಸ್ ಎಲ್ಲಪ್ಪನವರು ಎಂದರು.

 ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ  ನಿರಾಶ್ರಿತ ಕಡುಬಡವರಿಗೆ,  ವಯೋವೃದ್ದರಿಗೆ,  ಸರ್ಕಾರಿ ಶಾಲಾ ಮಕ್ಕಳಿಗೆ ಅನ್ನದಾನ ಹಾಗೂ ವಯೋವೃದ್ದರಿಗೆ ಹೊದಿಕೆ ವಿತರಣೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಬಟ್ಟೆ ವಿತರಣೆ ಮಾಡಲಾಯಿತು.

 ಕಾರ್ಯಕ್ರಮದಲ್ಲಿ ಚಿ ತಾಲೂಕು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ,  ಸ್ಥಳೀಯ ಪ್ರಮುಖರಾದ ಸುಬ್ರಮಣಿ, ಅನ್ನಪೂರ್ಣಮ್ಮ, ಗುರುಪ್ರಸಾದ್,ಅನ್ನದಾಸೋಹಿ ಮಲ್ಲೇಶ್, ಪತ್ರಕರ್ತರಾದ ಜೆ ಮುನಿರಾಜು ಕನ್ನಡ ಜಾಗೃತಿ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನಾಗರಾಜು , ನಮ್ಮ ಕರ್ನಾಟಕ ಜನ ಸೈನ್ಯ ಬೆಂಗಳೂರು ಗ್ರಾಮಾಂತರ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಿಂಗಂ ಸುರೇಶ್, ಯೋಗ ಕೃಷ್ಣಪ್ಪ, ಮಹಿಳಾ ಸಮಾಜದ ಖಾಜಾಂಜಿ ಕವಿತಾ , ಅಶ್ವತಪ್ಪ ಸೇರಿದಂತೆ ಹಲವರು ಹಾಜರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿಆತ್ರೇಯ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯವೇ ನಮ್ಮ ನಾಡಿನ ಶಕ್ತಿ: ಟಿ.ರಘುಮೂರ್ತಿಅದ್ಧೂರಿಯಾಗಿ ನಡೆದ ಈದ್‌ಮಿಲಾದ್ ಮೆರವಣಿಗೆ  ಹೋರಾಟಗಾರ ಎನ್.ಎಸ್.ಹರ್ಡೆಕರ್‌ರವರಲ್ಲಿ ಶಿಸ್ತು, ದೇಶಭಕ್ತಿ ಎದ್ದು ಕಾಣುತ್ತಿತ್ತು‘ರಸ್ತೆ ರಾಜ’ನ ಕ್ಷೇತ್ರದಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ: ಅನುದಾನದ ಹೊಳೆಯಿದ್ದರೂ ತಪ್ಪದ ಯಮಯಾತನೆ!ಕನ್ನಡ ಸಾಹಿತ್ಯ ಪರಿಷತ್ತು ಕಬ್ಜ ಆಗಲು ಬಿಡುವುದಿಲ್ಲ: ಪ್ರೊ.ಎಸ್.ಜಿ ಸಿದ್ದರಾಮಯ್ಯಚಿಕ್ಕಂದವಾಡಿ ಗ್ರಾಮದ ರೇವಜ್ಜರ ಓಂಕಾರಪ್ಪ ಇನ್ನಿಲ್ಲ