Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚಿತ್ರದುರ್ಗ ಜಿಟಿಟಿಸಿಯಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೌಶಲ್ಯಾಭಿವೃದ್ಧಿ
, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ, ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಹಾಗೂ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಅಡಿಯಲ್ಲಿ ಉದ್ಯೋಗಾಧಾರಿತ ವಿವಿಧ ತಾಂತ್ರಿಕ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಚಿತ್ರದುರ್ಗದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಈ ತರಬೇತಿಗಳು ಪ್ರತಿ ತಿಂಗಳು ಆಯೋಜನೆಯಾಗುತ್ತಿದ್ದು, ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರು ಇದರ ಪ್ರಯೋಜನ ಪಡೆಯಬಹುದಾಗಿದೆ.

`ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಅಡಿಯಲ್ಲಿ 2 ತಿಂಗಳ ಅವಧಿಯ ಸಿಎನ್‍ಸಿ ಅಪರೇಟರ್ ಟನಿರ್ಂಗ್, ಸಿಎನ್‍ಸಿ ಅಪರೇಟರ್-ವರ್ಟಿಕಲ್ ಮೆಷಿನಿಂಗ್ ಸೆಂಟರ್, ಅಪರೇಟರ್-ಕನ್ವೆನ್ಷನಲ್ ಮಿಲ್ಲಿಂಗ್, ಸಿಎನ್‍ಸಿ ಸೆಟ್ಟರ್ ಕಮ್ ಅಪರೇಟರ್-ಟನಿರ್ಂಗ್, ಸಿಎನ್‍ಸಿ ಸೆಟ್ಟರ್ ಕಮ್ ಅಪರೇಟರ್-ವರ್ಟಿಕಲ್ ಮೆಷಿನಿಂಗ್ ಸೆಂಟರ್ ಮತ್ತು ಡೊಮೆಸ್ಟಿಕ್ ಡೇಟಾ ಎಂಟ್ರಿ ಅಪರೇಟರ್ ಕೋರ್ಸ್‍ಗಳಿಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಹಾಗೆಯೇ ಸಿಎನ್‍ಸಿ ಪ್ರೋಗ್ರಾಮರ್ ಕೋರ್ಸ್‍ಗೆ ಐಟಿಐ ಅಥವಾ ಡಿಪ್ಲೋಮಾ ಪಡೆದವರು ಅರ್ಹರಾಗಿರುತ್ತಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಯೋಜನೆಯಡಿಯಲ್ಲಿ ಎಸ್‍ಎಸ್‍ಎಲ್‍ಸಿ ಅರ್ಹತೆಯುಳ್ಳವರಿಗೆ ಕನ್ವೆನ್ಷನಲ್ ಮಿಲ್ಲಿಂಗ್ ಮೆಷಿನ್ ಆಪರೇಷನ್ (4 ತಿಂಗಳು), ಐಟಿಐ/ಡಿಪ್ಲೋಮಾ/ಬಿ.ಇ ಅರ್ಹತೆಯುಳ್ಳವರಿಗೆ ಸಿಎನ್‍ಸಿ ಪ್ರೋಗ್ರಾಮಿಂಗ್ ಅಂಡ್ ಆಪರೇಷನ್ (4 ತಿಂಗಳು) ಹಾಗೂ ಐಟಿಐ/ಡಿಪ್ಲೋಮಾ ಅರ್ಹತೆಯುಳ್ಳವರಿಗೆ ಸಿಎನ್‍ಸಿ ಮೆಷಿನ್ ಅಪರೇಟರ್ (6 ತಿಂಗಳು) ತರಬೇತಿ ನೀಡಲಾಗುತ್ತದೆ.

ಕರ್ನಾಟಕದ ನಿವಾಸಿಯಾಗಿರುವ 16 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಈ ತರಬೇತಿಗೆ ಅರ್ಹರು. ಸಂಸ್ಥೆಯಲ್ಲಿ ಸುಸಜ್ಜಿತ ಮೂಲಸೌಕರ್ಯ, ಹೈಟೆಕ್ ಯಂತ್ರೋಪಕರಣಗಳು, ಅನುಭವಿ ತರಬೇತುದಾರರೊಂದಿಗೆ ಶೇ.100 ಉದ್ಯೋಗ ನೆರವು ನೀಡಲಾಗುತ್ತದೆ.

ಆಸಕ್ತರು ಸ್ವ-ವಿವರ, ವಿದ್ಯಾರ್ಹತೆ ಪ್ರಮಾಣಪತ್ರ, 4 ಪಾಸ್‍ಪಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್ ಹಾಗೂ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು ಅಥವಾ www.kaushalkar.com  ವೆಬ್‍ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಎಸ್.ವೈ. ನಂ. 44, ಹಳೆಯ ಬೆಂಗಳೂರು ರಸ್ತೆ, ಕುಂಚಿಗನಾಳು, ಚಿತ್ರದುರ್ಗ - 577 524 ಹಾಗೂ ಮೊಬೈಲ್: 6362615889, 8884488191 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!