ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಪಾವಗಡ ರಸ್ತೆಯ ನ್ಯಾಷನಲ್ ಮತ್ತು ಭಾನು ಸ್ಟುಡಿಯೋದ ಕಛೇರಿಯಲ್ಲಿ ನೇತಾಜಿ ಸ್ನೇಹ ಬಳಗದಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಮತ್ತು ಹೋರಾಟ, ವ್ಯಕ್ತಿತ್ವದ ಬಗ್ಗೆ ಸಾಮಾಜಿಕ ಹೋರಾಟಗಾರ ಎಚ್.ಎಸ್ ಸೈಯದ್, ಸಂಜೀವಿನಿ ಲ್ಯಾಬ್ ನ ಮೃತ್ಯುಂಜಯ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿದರು. ಜಯಂತ್ಯುತ್ಸವದಲ್ಲಿ ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ, ಸಂತೋಷ್ ಕುಮಾರ್,ದೇವರಾಜ್, ರಮೇಶ್,ಚನ್ನಮಲ್ಲಪ್ಪ,ಬಿಂದುರೆಡ್ಡಿ ಉಪಸ್ಥಿತರಿದ್ದರು.




