ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಳ್ಳತನ ವಾದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಸುಮಾರು 25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶ ಪಡಿಸಿಕೊಳ್ಳುವುದರಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರಳು ಮಲ್ಲಿಗೆ ಗ್ರಾಮದ ಮನೆಯೊಂದರಲ್ಲಿ ಸೆ. 27ರಂದು 163ಗ್ರಾಂ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದ್ದು, ದೂರು ಬಂದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿ. ಏನ್. ಎಸ್. ಕಲಂ 305(ಎ ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕಾರಣದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕ ರಾದ ಚಂದ್ರಕಾಂತ್ ಎಂ. ವಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ವೆಂಕಟೇಶ್ ಪ್ರಸನ್ನ, ಲಕ್ಷ್ಮೀನಾರಾಯಣ ಎ. ವಿ. ಮತ್ತು ದೊಡ್ಡಬಳ್ಳಾಪುರ ಉಪ ವಿಭಾಗದ ಡಿ. ವೈ. ಎಸ್. ಪಿ. ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಆರೋಪಿಯ ಪತ್ತೆ ಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಸಿ. ಸಿ. ಟಿ. ವಿ. ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸ್ ಇನ್ಸ್ಪೆಕ್ಟರ್ ಡಾ. ನವೀನ್ ಕುಮಾರ್ ಎಂ. ಬಿ. ನೇತೃತ್ವದ ತಂಡ ತ್ವರಿತವಾಗಿ ಪ್ರಕರಣವನ್ನು ಭೇದಿಸಿ ಆರೋಪಿ ಭದ್ರಪ್ಪ ಹಡಪದ ಎಂಬತನನ್ನು ಬಂಧಿಸಿದ್ದಾರೆ.
ಬಂದಿತನಿಂದ 62ಗ್ರಾಂ ತೂಕದ ಎರಡು ಎಳೆ ಮಾಂಗಲ್ಯ ಸರ, 55ಗ್ರಾಂ ತೂಕದ ನಾಲ್ಕು ಚಿನ್ನದ ಬಳೆಗಳು, 45ಗ್ರಾಂ ತೂಕದ ಎರಡೆಳೆ ಅವಲಕ್ಕಿ ಸರ, ಹಾಗೂ ಇಪ್ಪತ್ತೈದು ಸಾವಿರ ನಗದನ್ನು ವಶ ಪಡಿಸಿಕೊಂಡಿದ್ದಾರೆ.
ಪಿ. ಎಸ್. ಐ ಗಳಾದ ನಾರಾಯಣ ಸ್ವಾಮಿ, ಚಂದ್ರಕಲಾ, ಪ್ರೊಬೆಷನರಿ ಪಿ. ಎಸ್. ಐ. ಗಳಾದ ನಾಗರಾಜ್, ವಿನಾಯಕ ಪಾಟೀಲ್, ಎ. ಎಸ್. ಐ. ರಾಧಾಕೃಷ್ಣ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಯ ಬಂದನಕ್ಕೆ ಶ್ರಮಿಸಿದ ಕಾರ್ಯಾಚರಣೆ ತಂಡವನ್ನು ಜಿಲ್ಲಾ ಪೊಲೀಸ್ ಅಧಿಕ್ಷಕರು ಅಭಿನಂದಿಸಿದ್ದಾರೆ.




