ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಪ್ರಸಿದ್ಧ ಹಾಸನ ಜಿಲ್ಲೆಯ ಹಾಸನಾಂಬೆಯ ಮಹೋತ್ಸವಕ್ಕೆ ಧಾರ್ಮಿಕ ಚಟುವಟಿಕೆಗಳು ಸಿದ್ಧಗೊಳ್ಳುತ್ತಿವೆ. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಲಕ್ಷಾಂತರ ಭಕ್ತಾದಿಗಳ ಪ್ರಯಾಣದ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು–ಹಾಸನ ಹಾಗೂ ಅರಸೀಕೆರೆ–ಹಾಸನ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಕಾರ್ಯಾಚರಣೆಗೊಳಿಸಲು ತೀರ್ಮಾನಿಸಿದೆ.
ಈ ವಿಶೇಷ ರೈಲುಗಳ ಸೇವೆ ಅಕ್ಟೋಬರ್ 29 ರಿಂದ ನವೆಂಬರ್ 11, 2026 ರವರೆಗೆ ಲಭ್ಯವಿರಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಭಾಗಗಳ ಭಕ್ತರು ನೇರ ರೈಲು ಸೇವೆಯ ಲಾಭ ಪಡೆಯಬಹುದಾಗಿದ್ದು, ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದ ಜನರು ಅರಸೀಕೆರೆ ಜಂಕ್ಷನ್ಗೆ ಆಗಮಿಸಿ ಅಲ್ಲಿಂದ ಹಾಸನಕ್ಕೆ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.
ದೇವಾಲಯದ ದರ್ಶನ ವೇಳಾಪಟ್ಟಿ: ದೇವಾಲಯದ ಬಾಗಿಲು ತೆರೆಯುವ ದಿನ: 2026ರ ಅಕ್ಟೋಬರ್ 29, ಗುರುವಾರ (ಮಧ್ಯಾಹ್ನ 12:00 ಗಂಟೆಗೆ ಶಾಸ್ತ್ರೋಕ್ತವಾಗಿ ತೆರೆಯಲಾಗುತ್ತದೆ).
ಸಾರ್ವಜನಿಕರ ದರ್ಶನ ಆರಂಭ: 2026ರ ಅಕ್ಟೋಬರ್ 30ರ ಶುಕ್ರವಾರದಿಂದ.
ಸಾರ್ವಜನಿಕರ ದರ್ಶನ ಮುಕ್ತಾಯ: 2026ರ ನವೆಂಬರ್ 10, ಮಂಗಳವಾರದವರೆಗೆ.
ದೇವಾಲಯದ ಬಾಗಿಲು ಮುಚ್ಚುವ ದಿನ: 2026ರ ನವೆಂಬರ್ 11, ಬುಧವಾರ.
ದೇವಾಲಯಕ್ಕೆ ತೆರಳುವ ಭಕ್ತಾದಿಗಳು ರೈಲ್ವೇ ವೇಳಾಪಟ್ಟಿಯನ್ನು ಪರಿಶೀಲಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಲು ಕೋರಲಾಗಿದೆ.



