Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹೆಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನಾ ಪಾದಯಾತ್ರೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ನಡೆಯುತ್ತಿರುವ ಅರಾಜಕತೆ ಹಾಗೂ ದ್ವೇಷದ ರಾಜಕಾರಣವನ್ನು ಖಂಡಿಸಿ, ಸ್ಟಿಂಗ್ ಆಪರೇಷನ್ ಕಿಂಗ್​ಪಿನ್ ಅನ್ನು ಬಂಧಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಶನಿವಾರ ಜೆ.ಪಿ. ಭವನದಿಂದ ಫ್ರೀಡಂ ಪಾರ್ಕ್​ವರೆಗೆ ಬೃಹತ್ ಪಾದಯಾತ್ರೆ ನಡೆಯಿತು. ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ನೃಪತುಂಗ ರಸ್ತೆಯ ಡಿಜಿಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜೆ.ಪಿ. ಭವನದಲ್ಲಿ ಪಕ್ಷದ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಹೆಚ್​.ಡಿ. ಕುಮಾರಸ್ವಾಮಿ, ಖಾಸಗಿ ವಾಹಿನಿಯೊಂದರ ವ್ಯಕ್ತಿಯು ನಿತ್ಯ ಸ್ಟಿಂಗ್ ಆಪರೇಷನ್ ಮಾಡುವ ಮೂಲಕ ರಾಜ್ಯದ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾರೆ. ಇದರ ಹಿಂದೆ ಸರ್ಕಾರದ ಉನ್ನತ ನಾಯಕರ ಪೋಷಣೆ ಇದೆ. ಸ್ಟಿಂಗ್ ಆಪರೇಷನ್ ಮೂಲಕ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಮಣಿಸಲು ಹೊರಟಿರುವ ಈ ಷಡ್ಯಂತ್ರದ ವಿರುದ್ಧ ಕಾರ್ಯಕರ್ತರು ಪಣ ತೊಟ್ಟು ಹೋರಾಟಕ್ಕೆ ಇಳಿಯಬೇಕು ಎಂದು ಕರೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಟು ವರ್ಷಗಳ ಕಾಲ ರಾಜ್ಯ ಆಳಿದ ಮಾಜಿ ಮುಖ್ಯಮಂತ್ರಿಯ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲಾಗಿದೆ. ಆ ಖಾಸಗಿ ವ್ಯಕ್ತಿ ರಾಜಾರೋಷವಾಗಿ ನಾನೇ ಸ್ಟಿಂಗ್ ಮಾಡಿದ್ದೇನೆ ಎಂದು ಉದ್ಧಟತನದಿಂದ ಮಾತನಾಡಲು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಯವರೇ ಕಾರಣ. ಅವರಿಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ. ವಿಜಯದಶಮಿ ನಂತರ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎಂಬುದನ್ನು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಡಿಜಿಪಿ ಕಚೇರಿ ಮುತ್ತಿಗೆ ಯತ್ನ ಹಾಗೂ ಪೊಲೀಸರ ತಡೆ:
ಜೆ.ಪಿ. ಭವನದಿಂದ ಆರಂಭವಾದ ಪಾದಯಾತ್ರೆಯು ನೃಪತುಂಗ ರಸ್ತೆಯ ಡಿಜಿಪಿ ಕಚೇರಿಯತ್ತ ಸಾಗಿದಾಗ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧ ಧಿಕ್ಕಾರ ಕೂಗುತ್ತಾ ಮುನ್ನಡೆದ ಜೆಡಿಎಸ್ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಒಂದಷ್ಟು ಮುಖಂಡರು ಡಿಜಿ ಕಚೇರಿ ಒಳಗೆ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿದರಲ್ಲದೆ, ಕಚೇರಿ ಮುಂಭಾಗದಲ್ಲೇ ಪ್ರತಿಭಟನೆ ನಡೆಸಿದರು. ಬಳಿಕ ಕಾಲ್ನಡಿಗೆಯಲ್ಲಿ ಫ್ರೀಡಂ ಪಾರ್ಕ್ ಕಡೆಗೆ ಆಗಮಿಸುತ್ತಿದ್ದ ಹೆಚ್​.ಡಿ. ಕುಮಾರಸ್ವಾಮಿ ಅವರನ್ನು ಪೊಲೀಸರು ತಡೆದರು. ಪೊಲೀಸರ ಮನವಿಗೆ ಸ್ಪಂದಿಸಿ ಕುಮಾರಸ್ವಾಮಿ ಅವರು ಅಲ್ಲಿಯೇ ತಮ್ಮ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದರು.

ಗೃಹ ಸಚಿವರ ಹೇಳಿಕೆಗೆ ತಿರುಗೇಟು: ರೈತ ವಿರೋಧಿ ನೀತಿ, ನೈಸ್ ಅಕ್ರಮ ಹಾಗೂ ಕೆಪಿಎಸ್​ಸಿ ಹಗರಣದಂತಹ ಗಂಭೀರ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರವೇ ಸ್ಟಿಂಗ್ ಆಪರೇಷನ್ ಕಥೆಯನ್ನು ಸೃಷ್ಟಿಸಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಜೆಡಿಎಸ್ ವಾರ್ ರೂಮ್ ಸಿಬ್ಬಂದಿಯನ್ನು ಅಕ್ರಮವಾಗಿ ವಶಕ್ಕೆ ಪಡೆದ ವಿಚಾರವಾಗಿ ನಗರ ಪೊಲೀಸ್ ಆಯುಕ್ತರಿಗೆ ನೀಡಿದ್ದ ಎರಡು ದಿನಗಳ ಗಡುವು ಮುಕ್ತಾಯಗೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡುತ್ತಾ, ಗೃಹ ಸಚಿವರು ನನ್ನ ಆರೋಗ್ಯದ ಬಗ್ಗೆ ಹೀಯಾಳಿಸಿ, "ನಾಲ್ಕನೇ ಬಾರಿ ನಿಮ್ಮನ್ನು ಹೃದಯ ಚಿಕಿತ್ಸೆಗೆ ಕಳುಹಿಸುತ್ತೇನೆ" ಎಂದು ಅತ್ಯಂತ ಅನಾಗರಿಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯೇ ನಾನು ಇಂದು ಪಕ್ಷದ ಕಚೇರಿಯಿಂದ ಫ್ರೀಡಂ ಪಾರ್ಕ್​ವರೆಗೆ ಕಾಲ್ನಡಿಗೆಯಲ್ಲಿ ಬರಲು ಮುಖ್ಯ ಕಾರಣ. ಭಗವಂತ ನನ್ನ ಆರೋಗ್ಯ ಮತ್ತು ಹೃದಯವನ್ನು ಗಟ್ಟಿಯಾಗಿ ಇಟ್ಟಿದ್ದಾನೆ ಎಂಬುದನ್ನು ತೋರಿಸಲು ನಾನು ಈ ಪಾದಯಾತ್ರೆ ಮಾಡಿದ್ದೇನೆ ಎಂದು ತಿರುಗೇಟು ನೀಡಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗದ ದಸರಾ: ಶರಣ ಸಂಸ್ಕೃತಿಯ ಜನೋತ್ಸವ:ಮಂಗಳೂರಿನ ದಸರಾ; ಶಾರದಾ ಮಹೋತ್ಸವದಿಂದ ಜನೋತ್ಸವದವರೆಗೆ:… ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ-ರಮೇಶ್ ಬಾಬುನವರಾತ್ರಿ ಪ್ರಯುಕ್ತ ಅಂಭಾ ಭವಾನಿ ದೇವಿಗೆ ವಿಶೇಷ ಅಲಂಕಾರಹಾಡುಹಗಲೆ ವೃದ್ದೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಕಳ್ಳಛಲವಾದಿ ಗುರುಪೀಠದಲ್ಲಿ ಪ್ರತಿ ತಿಂಗಳ ಮೂರನೆ ಶನಿವಾರದಂದು ಆರೋಗ್ಯ ತಪಾಸಣೆ ಶಿಬಿರ ಆಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿಕಾಂತ್ ಎಸ್.ಯಾದವ್ ಮತ ನೀಡಲು ಮನವಿಸಂವಿಧಾನದ ಮೌಲ್ಯ ಎತ್ತಿಹಿಡಿಯಲು ಸಿಜೆಐ ಸೂರ್ಯಕಾಂತ್ ಹಾಗೂ ಡಿಕೆಶಿ ಕರೆಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್' ಸಂಚಿಗೆ ರಕ್ತ ಕುದಿಯುತ್ತಿಲ್ಲವೇ?: ಹೆಚ್.ಡಿ. ಕುಮಾರಸ್ವಾಮಿ