Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎನ್‌ಎಂಡಿಸಿ ಯೋಜನೆ ಶ್ಲಾಘಿಸಿದ ಹೆಚ್.ಡಿ ಕುಮಾರಸ್ವಾಮಿ: ಭಾರತದ ಉಕ್ಕು ವಲಯಕ್ಕೆ ಬಿಗ್ ಬೂಸ್ಟ್!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
​ಭಾರತದ ಖನಿಜ ಮತ್ತು ಉಕ್ಕು ವಲಯದ ಅಭಿವೃದ್ಧಿಯಲ್ಲಿ ಪ್ರಮುಖ ಮೈಲಿಗಲ್ಲಾಗಿ ಬಸ್ತಾರ್‌ನಲ್ಲಿ ಯೋಜನೆ ಆರಂಭಿಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

​ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ತನ್ನ ದೇಶೀಯ ಖನಿಜ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದು, ಜಾಗತಿಕವಾಗಿ ಸ್ಪರ್ಧಾತ್ಮಕ ಹಾಗೂ ಸ್ವಾವಲಂಬಿ ಉಕ್ಕು ವಲಯವನ್ನು ನಿರ್ಮಿಸುತ್ತಿದೆ ಎಂದು ತಿಳಿಸಿದ್ದಾರೆ.

Advertisement

​ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ₹5,427 ಕೋಟಿ ವೆಚ್ಚದ ಸಮಗ್ರ ಯೋಜನೆಯನ್ನು ಯಶಸ್ವಿಯಾಗಿ ಚಾಲನೆಗೊಳಿಸಿದ ಎನ್‌ಎಂಡಿಸಿ ತಂಡಕ್ಕೆ ಅವರು ಶುಭಾಶಯ ತಿಳಿಸಿದ್ದಾರೆ.

ಈ ಯೋಜನೆಯು 2 MTPA ಸಾಮರ್ಥ್ಯದ ಪೆಲೆಟ್ ಪ್ಲಾಂಟ್, 15 MTPA ಸಾಮರ್ಥ್ಯದ ಸ್ಲರಿ ಪೈಪ್‌ಲೈನ್ ಮತ್ತು ಕಬ್ಬಿನದ ಅದಿರು ಸಂಸ್ಕರಣಾ ಘಟಕವನ್ನು ಒಳಗೊಂಡಿದೆ.

​ಯೋಜನೆಯ ಪ್ರಮುಖಾಂಶಗಳು: ​135 ಕಿ.ಮೀ. ಸ್ಲರಿ ಪೈಪ್‌ಲೈನ್: ಸಂಸ್ಕರಿಸಿದ ಅದಿರನ್ನು ಸುಲಭವಾಗಿ ಮತ್ತು ವೇಗವಾಗಿ ಸಾಗಿಸಲು ಸಹಕಾರಿ.
​ರಸ್ತೆ ಸಾರಿಗೆ ಮೇಲಿನ ಅವಲಂಬನೆ ಕಡಿಮೆ: ಲಾರಿ ಮತ್ತು ರಸ್ತೆ ಸಾರಿಗೆಗೆ ಪರ್ಯಾಯವಾಗಿ ಪೈಪ್‌ಲೈನ್ ಬಳಕೆಯಾಗುವುದರಿಂದ ವೆಚ್ಚ ಮತ್ತು ಮಾಲಿನ್ಯ ತಗ್ಗಲಿದೆ.

​ಉಕ್ಕು ವಲಯಕ್ಕೆ ಬಲ: ಕಬ್ಬಿನದ ಅದಿರಿನಿಂದ ಉಕ್ಕು ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಗೆ ಇದು ಹೊಸ ವೇಗ ಸಿಗಲಿದೆ.
​ಈ ಯೋಜನೆಯು
'ಆತ್ಮನಿರ್ಭರ ಭಾರತ' ಹಾಗೂ 'ವಿಕಸಿತ ಭಾರತ 2047' ಕಲ್ಪನೆಗೆ ಇಟ್ಟಿರುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಭಟನೆ ಹತ್ತಿಕ್ಕುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವಿಜಯನಗರದ ಮಹಾನವಮಿ; ಸಾಮ್ರಾಜ್ಯದ ವೈಭವದಿಂದ ಶ್ರೀರಂಗಪಟ್ಟಣ ದಸರಾವರೆಗೆ:ಮೂರ್ಖನಾದ ಮಹಾರಾಜನ್ : ವೆಂಕಟೇಶ್, ಚಿತ್ರದುರ್ಗಚಳ್ಳಕೆರೆಯಲ್ಲಿ ಇಂದು 'ಮಾತೃಶ್ರೀ ಪ್ರಸಾದ ನಿಲಯ' ಉದ್ಘಾಟನೆಕಾಶಿಯಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಾಂಸ್ಕೃತಿಕ ಸಂಭ್ರಮ: 30 ಪ್ರವಾಸಿಗರಿಗೆ ‘ಕನ್ನಡ ಸೇವಾ ರತ್ನ’ ಪ್ರಶಸ್ತಿ ಪ್ರದಾನವಿಜೃಂಭಣೆಯ 'ರೈತ ಸ್ವಾಭಿಮಾನ ಯಾತ್ರೆ': ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆ ನಡೆಸಿದ ನಿಖಿಲ್ಕವಿತೆ ಬರೆಯುವುದು, ಸಾಹಿತಿಯಾಗುವುದು ಲೋಕದ ಜವಾಬ್ದಾರಿ: ಸಾಹಿತಿ ಬಂಜಗೆರೆ ಜಯಪ್ರಕಾಶ್ತುಮಕೂರು ದಸರಾ ಮಹೋತ್ಸವಕ್ಕೆ ಸಿದ್ಧಗಂಗಾ ಶ್ರೀ ಚಾಲನೆ: 5 ಸಾವಿರಕ್ಕೂ ಅಧಿಕ ಕಲಾವಿದರಿಂದ ಕಲಾ ಪ್ರದರ್ಶನಬಿಜೆಪಿ ಕೋರ್ ಕಮಿಟಿ ಸಭೆ: ಹಿರಿಯೂರು ಉಪಚುನಾವಣೆಗೆ ಕಮಲ ಪಕ್ಷದ ಕಸರತ್ತುಐಐಟಿ ಮದ್ರಾಸ್‌ನ ಶ್ರೀ ಜಲಕಂಠೇಶ್ವರ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ