ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿಂದೂ ಸಮಾಜವು ಗಣೇಶೋತ್ಸವಗಳನ್ನು ನಿಲ್ಲಿಸುವುದಿಲ್ಲ ಎಂದು ಬಜರಂಗದಳ ಪ್ರಾಂತ ಬಿಲೋ ಪಾಸನ ಪ್ರಮುಖ್ ನರೇಶ್ ರೆಡ್ಡಿ ಹೇಳಿದರು. ಹಿರಿಯೂರಿನ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ನಗರದ ಹುಳಿಯಾರು ರಸ್ತೆಯ ಮೋರ್ ಬಳಿ ಅಶೋಕ್ ಸಿಂಘಾಲ್ ಜಿ ವೇದಿಕೆಯಲ್ಲಿನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಬಾಲ ಗಂಗಾಧರ ತಿಲಕ್ ರವರು ಗಣೇಶೋತ್ಸವಗಳನ್ನು ಆರಂಭಿಸಿ ಸಂಘಟನೆ ಮತ್ತು ಭಕ್ತಿ ಭಾವವನ್ನು ಮೆರೆದಿದ್ದಾರೆ ಅದನ್ನು ನಮ್ಮ ಹಿಂದೂ ಸಮಾಜ ಮುಂದುವರಿಸುತ್ತಾ ಬಂದಿದೆ ಈಗಿನ ಸರ್ಕಾರ ಹಿಂದೂ ಸಮಾಜದ ಮೇಲೆ ಗದಪ್ರಹಾರ ಮಾಡುತ್ತಿದೆ ಗಣೇಶೋತ್ಸವಗಳಿಗೆ ಅಸಹಕಾರ ಕಲ್ಪಿಸುತ್ತಿದೆ ಎಂದರು. ವಂದೇ ಮಾತರಂ ಗೀತೆಯನ್ನು ಮೊಟಕುಗೊಳಿಸುತ್ತಿರುವ ಹುನ್ನಾರ ಮಾಡುತ್ತಿದೆ ಎಂದರು ಶಿವಾಜಿ ಮಹಾರಾಜರು ಹಿಂದೂ ಸಮಾಜಕ್ಕೆ ಶಕ್ತಿಯನ್ನು ತುಂಬಿದರು ಅದರಂತೆ ಇಂದಿನ ಎಲ್ಲಾ ಹಿಂದೂ ಯುವಕರು ಶಕ್ತಿಶಾಲಿಗಳಾಗಬೇಕು ಎಂದರು ಗೋ ಹತ್ಯೆ ನಡೆಯುತ್ತಿದೆ ಗೋವಿನ ತಳಿಗಳನ್ನು ಉಳಿಸಬೇಕು ಸರ್ಕಾರ ಗೋಮಾಂಸ ಮಾರಾಟವನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಹಿಂದು ಸಮಾಜದಲ್ಲಿ ಗೋವಿಗೆ ತುಂಬಾ ಪೂಜನೀಯ ಸ್ಥಾನವಿದೆ ಗೃಹಪ್ರವೇಶಗಳಿಗೆ ಅಂಗಡಿ ಪ್ರಾರಂಭೋತ್ಸವ ಗಳಿಗೆ ಶುಭ ಸಮಾರಂಭಗಳಲ್ಲಿ ಪ್ರಪ್ರಥಮವಾಗಿ ಗೋವುಗಳನ್ನು ಪೂಜಿಸುವ ಪದ್ಧತಿ ನಮ್ಮಲ್ಲಿದೆ ಎಂದರು.
ಗೋವಿನ ಗಂಜಲವನ್ನು ಪ್ರೋಕ್ಷಣೆ ಮಾಡುವಂತಹ ಪದ್ಧತಿ ನಮ್ಮಲ್ಲಿದೆ ಇದು ತುಂಬಾ ಪವಿತ್ರವಾದಂತದ್ದು ಎಂದರು ಮುಖಂಡರಾದ ನಾರಾಯಣ ರೆಡ್ಡಿ, ಆರ್.ಟಿ. ಪ್ರಶಾಂತ್ ಗೋವಿಂದಚಾರ್, ಎಸ್ ರಾಘವೇಂದ್ರ, ಮಂಜುನಾಥೇಶ್, ಎಂ. ಪ್ರಶಾಂತ್, ಜಗದೀಶ್, ಪ್ರಮೀಳಾ.
ಭೋಜರಾಜ್, ಎನ್ ಎಸ್ ಜೋಧಾ, ದೇಸಾಯಿ, ಅಮರನಾಥ್, ಪ್ರಭಾಕರ್, ನಾಗದೀಪ್, ಧನುಷ್, ವಾಸುದೇವ್, ಮಣಿ, ಚಿನ್ಮಯ ನಂದ, ವೇಣುಗೋಪಾಲ್, ನವೀನ್, ಅಜ್ಜು, ನವೀನ್ ಆಚಾರ್ಯ, ಪ್ರೀತಮ್, ಚೇತನ್, ರಂಜನಿ, ಸುಚಿತ್ರ, ಸ್ವರ್ಣ ರೆಡ್ಡಿ, ಹಾಗೂ ಅನೇಕ ಯುವ ಮುಖಂಡರು ಪಾಲ್ಗೊಂಡಿದ್ದರು ವಿವಿಧ ವಾದ್ಯ ಸಂಗೀತ ಗೊಂಬೆ ಕುಣಿತ ಸಾಂಸ್ಕೃತಿಕ ಕುಣಿತಗಳೊಂದಿಗೆ ಮೆರವಣಿಗೆ ಹಿರಿಯೂರು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು.




