Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭೀಕರ ಅಪಘಾತ: ನಾಲ್ವರು ಯುವ ಕ್ರಿಕೆಟಿಗರು ಸಾವು

ಚಂದ್ರವಳ್ಳಿ ನ್ಯೂಸ್, ಲಖನೌ:
ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಪ್ರತಿಭಾವಂತ ಯುವ ಕ್ರಿಕೆಟಿಗರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.

ಸುಲ್ತಾನ್‌ಪುರದ ಧನಪತ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಖಬದೇರ್‌ಬಳಿ ಬೆಳಗ್ಗೆ ಸುಮಾರು 5.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

Advertisement

ಘಟನೆಯ ಹಿನ್ನೆಲೆ: ಲಖನೌನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಲ್ಗೊಂಡು ವಾಪಸ್ ದೇವರಿಯಾ ಜಿಲ್ಲೆಗೆ ಮಾರುತಿ ಎರ್ಟಿಗಾ ಕಾರಿನಲ್ಲಿ ಆರು ಮಂದಿ ಕ್ರಿಕೆಟಿಗರು ಹಿಂದಿರುಗುತ್ತಿದ್ದರು. ಈ ವೇಳೆ ಅವರ ಕಾರು ಚಲಿಸುತ್ತಿದ್ದಂತೆಯೇ ಗುರುತು ಪತ್ತೆಯಾಗದ ಲಾರಿಯ ಹಿಂಭಾಗಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.

ಮೃತರ ವಿವರ: ಈ ಭೀಕರ ಅಪಘಾತದಲ್ಲಿ ನಿತ್ಯ ಪ್ರಜಾಪತಿ (22), ಇರ್ಫಾನ್ ಅನ್ಸಾರಿ (20), ಅನಿಕೇತ್ (24) ಹಾಗೂ ಆನಂದ್ ಯಾದವ್ (23) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಗಾಯಗೊಂಡಿರುವ ರಾಜು (22) ಮತ್ತು ಜಯಂತೋ ಶರ್ಮಾ (30) ಅವರನ್ನು ಕೂಡಲೇ ಕುಮಾರ್‌ಗಂಜ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದರ್ಶನ ನಗರದ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

ನಿದ್ರೆಯಲ್ಲಿದ್ದ ಆಟಗಾರರು: ಕಾರಿನಲ್ಲಿದ್ದ ಎಲ್ಲಾ ಆರು ಮಂದಿಯೂ ದಣಿವು ಹಾಗೂ ಪ್ರಯಾಣದ ಬಳಲಿಕೆಯಿಂದ ಗಾಢ ನಿದ್ರೆಯಲ್ಲಿದ್ದರು. ಹೀಗಾಗಿ ಲಾರಿಗೆ ಕಾರು ಹೇಗೆ ಡಿಕ್ಕಿ ಹೊಡೆದಿತು ಎಂಬ ಬಗ್ಗೆ ಯಾರಿಗೂ ಅರಿವಿರಲಿಲ್ಲ ಎಂದು ಗಾಯಾಳು ಜಯಂತೋ ಶರ್ಮಾ ಮಾಹಿತಿ ನೀಡಿದ್ದಾರೆ. ಸುಲ್ತಾನ್‌ಪುರ ಎಸ್‌ಪಿ ವಿನೀತ್ ಜೈಸ್ವಾಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತಿಭಾವಂತ ಆಟಗಾರರನ್ನು ಕಳೆದುಕೊಂಡ ಕ್ರೀಡಾ ಲೋಕ: ತಂಡದ ನಾಯಕ ಮೋಹಿತ್ ಪಾಂಡೆ ಮಾತನಾಡಿ, ಮೃತಪಟ್ಟ ನಾಲ್ವರೂ ಅತ್ಯಂತ ಪ್ರತಿಭಾವಂತ ಆಟಗಾರರಾಗಿದ್ದು, ಖಾಸಗಿ ಕ್ರಿಕೆಟ್ ಪಂದ್ಯಗಳಲ್ಲಿ ನಿಯಮಿತವಾಗಿ ಆಡುತ್ತಿದ್ದರು ಎಂದು ಕಂಬನಿ ಮಿಡಿದಿದ್ದಾರೆ.

"ಅನಿಕೇತ್ ಉತ್ತಮ ಆಲ್‌ರೌಂಡರ್ ಆಗಿದ್ದು, ಕಪಿಲ್ ದೇವ್ ಅವರಂತೆ ಎಲ್ಲ ವಿಭಾಗಗಳಲ್ಲೂ ಮಿಂಚುತ್ತಿದ್ದ."
"ನಿತ್ಯ ಪ್ರಜಾಪತಿ ಮತ್ತು ಇರ್ಫಾನ್ ಭರವಸೆಯ ಬ್ಯಾಟರ್‌ಗಳಾಗಿದ್ದರು."

"ಆನಂದ್ ಯಾದವ್ ಚುರುಕಿನ ವೇಗದ ಬೌಲರ್ ಆಗಿದ್ದ" ಎಂದು ಅವರು ಸ್ಮರಿಸಿಕೊಂಡಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಯುಪಿಇಐಡಿಎ ಭದ್ರತಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ನಜ್ಜಗುಜ್ಜಾದ ಕಾರಿನಿಂದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಾಯ ಮಾಡಿದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಅಪಘಾತ ಎವೆಸುತ್ತ ಪರಾರಿಯಾಗಿರುವ ಲಾರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ರಮವಾಗಿ ನೆಲೆಸಿದ್ದ ಮೂವರು ನೈಜೀರಿಯನ್ ಪ್ರಜೆಗಳ ವಶಕ್ಕೆಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದ ಹುಂಡಿಯಲ್ಲಿ 77ಲಕ್ಷ 58ಸಾವಿರದ 904 ರೂ ಸಂಗ್ರಹಕೆಂಪಮ್ಮ ದಂಪತಿಗೆ ವಾತ್ಸಲ್ಯ ಮನೆ ಹಸ್ತಾಂತರಪೋಷಣ್ ಮಾಸಾಚರಣೆ: ಸಿರಿಧಾನ್ಯ, ಸೊಪ್ಪು-ತರಕಾರಿ ಸೇವನೆಗೆ ಒತ್ತು ವಿದ್ಯಾರ್ಥಿಗಳು ಪಠ್ಯದ ಜೊತೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಮಾನಸಿಕ ದೈಹಿಕ ಸದೃಢತೆ ಹೆಚ್ಚುತ್ತದೆ:ಡಾ. ಮುರುಳಿಡಿಕೆ ಶಿವಕುಮಾರ್ ವಿರುದ್ಧವೇ 'ಟ್ರ್ಯಾಪ್' ಯತ್ನ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸ್ಪೋಟಕ ಹೇಳಿಕೆ!ಡಿ.ಕೆ ಶಿವಕುಮಾರ್‌ಗೆ ರಿಯಲ್ ಎಸ್ಟೇಟ್‌ಮೇಲಿರುವ ಆಸಕ್ತಿ ರೈತರ ಮೇಲಿಲ್ಲ: ಬಿ.ವೈ. ವಿಜಯೇಂದ್ರಶಾರ್ಟ್ ಸರ್ಕ್ಯೂಟ್‌ನಿಂದ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಬೆಂಕಿ; ತಪ್ಪಿದ ಭಾರೀ ದುರಂತಭೀಕರ ಅಪಘಾತ: ನಾಲ್ವರು ಯುವ ಕ್ರಿಕೆಟಿಗರು ಸಾವುಡೀಸೆಲ್ ಕೊರತೆ ತಾತ್ಕಾಲಿಕ, ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಕೆ: ಡಿಸಿಎಂ ಜಿ. ಪರಮೇಶ್ವರ ಸ್ಪಷ್ಟನೆ