Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೋಟೆಲ್‌ಗಳ ದರ ಇಳಿಕೆ ಮಾಡಲು ಸಾಧ್ಯವಿಲ್ಲ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಆಸ್ತಿ ಬಾಡಿಗೆಗಳ ಮೇಲಿನ ತೆರಿಗೆಗಳನ್ನು ಕೇಂದ್ರ ಸರ್ಕಾರ ಕಡಿಮೆ ಮಾಡದ ಕಾರಣ, ಜಿಎಸ್‌ಟಿ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಬಂಧಿತವಾಗಿದೆ ಎಂದು ಕರ್ನಾಟಕ ರಾಜ್ಯ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರಾದ ಜಿ.ಕೆ. ಶೆಟ್ಟಿ ತಿಳಿಸಿದ್ದಾರೆ.
ಹಲವು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಿದ್ದಕ್ಕಾಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಅಭಿನಂದಿಸುತ್ತೇವೆ. ಹೊಟೇಲ್ ಆಹಾರ ಮತ್ತು ಕೊಠಡಿ ದರಗಳನ್ನು ಯಾವಾಗ ಕಡಿಮೆ ಮಾಡುತ್ತೀರಿ ಎಂದು ಜನರು ನಮ್ಮನ್ನು ಕೇಳುತ್ತಿರುತ್ತಾರೆ.

ಆದರೆ ನಾವು, ಹೋಟೆಲ್ ಮಾಲೀಕರು, ಸರ್ಕಾರದಿಂದ ಸ್ವಲ್ಪ ಮಟ್ಟಿನ ಪರಿಹಾರ ಸಿಗದ ಹೊರತು ಈ ಹಂತದಲ್ಲಿ ಜಿಎಸ್‌ಟಿ ಪ್ರಯೋಜನವನ್ನು ಗ್ರಾಹಕರಿಗೆ ತಲುಪಿಸುವಲ್ಲಿ ನಿರ್ಬಂಧಿತರಾಗಿದ್ದೇವೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಜಿ ಕೆ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ,
ಅಡುಗೆ ಅನಿಲ ಸಿಲಿಂಡರ್‌ಗಳ ಮೇಲಿನ ೧೮% ಜಿಎಸ್‌ಟಿ ಹಾಗೆಯೇ ಮುಂದುವರಿದಿದೆ. ಇದಲ್ಲದೆ, ಬಾಡಿಗೆ ಕಟ್ಟಡದಲ್ಲಿ ತಮ್ಮ ವ್ಯವಹಾರವನ್ನು ನಡೆಸುವ ಹೊಟೇಲ್ ಮಾಲೀಕರಿಗೆ ಅವರು ಪಾವತಿಸುವ ಬಾಡಿಗೆಯ ಮೇಲೆ 18% ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಮಾಂಸ ಮತ್ತು ಇನ್ನೂ ಕೆಲವು ವಸ್ತುಗಳು ಆರಂಭದಿಂದಲೇ ೦% ತೆರಿಗೆಯ ಅಡಿಯಲ್ಲಿ ಇರುತ್ತವೆ.


ಬಹುಪಾಲು ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತವೆ. ಜಿಎಸ್‌ಟಿ ಯನ್ನು 5% ಕ್ಕೆ ಇಳಿಸಿದರೆ, ನಾವು ನಮ್ಮ ಗ್ರಾಹಕರಿಗೆ ಪ್ರಯೋಜನಗಳನ್ನು ವರ್ಗಾಯಿಸಬಹುದು. ಪ್ರಸ್ತುತ ಜಿಎಸ್‌ಟಿ ದರದೊಂದಿಗೆ, ಗ್ರಾಹಕರಿಗೆ ಯಾವುದೇ ಪರಿಹಾರವನ್ನು ನೀಡಲು ನಮಗೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.


ಈ ಸ್ಪರ್ಧಾತ್ಮಕ ವ್ಯಾಪಾರ ಜಗತ್ತಿನಲ್ಲಿ ಹೊಟೇಲ್‌ಗಳು ಬದುಕುಳಿಯಲು ಸಹಾಯ ಮಾಡಲು ಜಿಎಸ್‌ಟಿಯಲ್ಲಿ ಸ್ವಲ್ಪ ಪರಿಹಾರವೆಂಬoತೆ ಕಟ್ಟಡದ ಬಾಡಿಗೆ ಜಿಎಸ್‌ಟಿ ಶೇ. 5ರಷ್ಟು ಮಾಡುವಂತೆ ಸಂಘವು ಸರ್ಕಾರಕ್ಕೆ ಮನವಿ ಮಾಡುತ್ತಿದೆ ಎಂದು ಜಿ ಕೆ  ಶೆಟ್ಟಿ ಹೇಳಿದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST