Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಕಲಿ ಗಾಂಧಿಗಳು ಎಷ್ಟು ಡೋಂಗಿಗಳು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಾಂಧಿ ಆದರ್ಶಗಳನ್ನು ಅನುಸರಿಸುವುದು ಎಂದರೆ ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ಲೂಟಿ ಮಾಡುವುದಾ
? ಅಥವಾ ಸೂರಿಲ್ಲದ ಜನಸಾಮಾನ್ಯರು ಸೂರು ಕಟ್ಟಿಕೊಳ್ಳಲು ಸಿಗಬೇಕಾಗಿದ್ದ ಮೂಡಾ ಸೈಟುಗಳನ್ನು ಲಪಟಾಯಿಸುವುದಾ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವುದು ಎಂದರೆ ಗಾಂಧೀಜಿ ಅವರು ತಂದುಕೊಟ್ಟ ಸ್ವಾತಂತ್ರ್ಯ ಬಳಸಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳನ್ನ ಸಮರ್ಥನೆ ಮಾಡಿಕೊಳ್ಳುವುದಾ? ಅಥವಾ ಗೋಮಾತೆಯ ಕೆಚ್ಚಲು ಕತ್ತರಿಸಿದರೂ ಮೌನ ವಹಿಸುವುದಾ?

ಗಾಂಧಿ ಕನಸನ್ನು ನನಸಾಗಿಸುವುದು ಎಂದರೆ ನಕಲಿ ಗಾಂಧಿಗಳ ಕೈಗೆ ಕಾಂಗ್ರೆಸ್ ಪಕ್ಷವನ್ನು ಕೊಟ್ಟು ಗುಮಲಾಗಿರಿ ಮಾಡುವುದಾ? ಅಥವಾ ಸ್ವತಂತ್ರ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನೇ ಜೈಲು ಮಾಡುವುದಾ?

ಬಹುಶಃ ಇದನ್ನೆಲ್ಲಾ ಮುಂದಾಲೋಚನೆ ಮಾಡಿಯೇ ಗಾಂಧೀಜಿ ಅವರು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನ ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು ಅನ್ನಿಸುತ್ತೆ ಎಂದು ಅಶೋಕ್ ತಿಳಿಸಿದ್ದಾರೆ.

ಈಗಿರುವ ನಕಲಿ ಗಾಂಧಿಗಳು ಎಷ್ಟು ಡೋಂಗಿ ಗಾಂಧಿವಾಗಿದಳೋ ಅಧಿಕಾರಕ್ಕಾಗಿ ಅವರ ಗುಲಾಮಗಿರಿ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಅವರಿಗಿಂತ ಹೆಚ್ಚು ಡೋಂಗಿಗಳು ಎಂದು ಅಶೋಕ್ ಕಿಡಿ ಕಾರಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST