Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಯಾಂತ್ರಿಕ ಬದುಕಿನಲ್ಲಿ ಹಣದ ಹಿಂದೆ ಓಡುತ್ತಿರುವ ಮಾನವರು

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ : 
ಯಾಂತ್ರಿಕ ಬದುಕಿನಲ್ಲಿ ಹಣದ ಹಿಂದೆ ಓಡುತ್ತಿರುವವರು ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬೇಕಾದರೆ ಕಲೆ
, ಸಾಹಿತ್ಯ, ಸಂಗೀತದ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಕರೆ ನೀಡಿದರು.

ಅಂಜನಾ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನ ಕೋಗಿಲೆ ಎಸ್.ಜಾನಕಿಯವರಿಗೆ ಭಾನುವಾರ ಆಯೋಜಿಸಲಾಗಿದ್ದ ನೃತ್ಯ ನಾದ ನಮನ ನೃತ್ಯ ನಿವೇದನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೃತ್ಯ ಕಲೆ, ಸಾಹಿತ್ಯ, ಸಂಗೀತ, ಭರತನಾಟ್ಯಕ್ಕೆ ಮನ ಸೋಲದವರಿಲ್ಲ. ಮಗು ಹುಟ್ಟಿ ಬೆಳೆಯುವ ಹಂತದಲ್ಲಿ ತಾಯಿಯ ಜೋಗುಳದ ಹಾಡಿಗೆ ಸುಖ ನಿದ್ರೆಗೆ ಜಾರುತ್ತದೆ. ಭಾರತೀಯ ಪರಂಪರೆಯಲ್ಲಿ ಕಲೆಗೆ ವೈಶಿಷ್ಠ್ಯತೆಯಿದೆ. ನೃತ್ಯವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ದೇಹದ ಆರೋಗ್ಯ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಚಿತ್ರದುರ್ಗದ ಅಂಜನಾ ನೃತ್ಯ ಕಲಾ ಕೇಂದ್ರದವರು ಸಾವಿರಾರು ವಿದ್ಯಾರ್ಥಿಗಳಿಗೆ ಭರತ ನಾಟ್ಯ ಕಲಿಸಿ ದೇಶ ವಿದೇಶಗಳಲ್ಲಿ ಕೀರ್ತಿ ಗಳಿಸಿದ್ದಾರೆ. ಹಣ ಗಳಿಸಿ ಸಂತೋಷ ಪಡುವುದಕ್ಕಿಂತಲೂ ಬಹುತೇಕರು ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆಗೆ ಹಣ ಖರ್ಚು ಮಾಡುತ್ತಿದ್ದಾರೆ. ಬದುಕು ಸಮತೋಲನವಾಗಿರಬೇಕಾದರೆ ಇಂತಹ ಕಲೆಗಳನ್ನು ಆಸ್ವಾದಿಸಬೇಕೆಂದು ಹೇಳಿದರು.

ಸಾಧನೆ ಯಾರ ಮನೆಯ ಸ್ವತ್ತಲ್ಲ. ಜೀವನದಲ್ಲಿ ಪರಿಶ್ರಮ ಪಡುವವರು ದೊಡ್ಡ ಸಾಧನೆ ಮಾಡಬಹುದು. ಎಸ್.ಜಾನಕಿಗೆ ಬಾಲ್ಯದಲ್ಲಿಯೇ ಹಾಡುವ ಹವ್ಯಾಸವಿದ್ದುದರಿಂದ ದಕ್ಷಿಣ ಭಾರತದಲ್ಲಿಯೇ ಕಂಚಿನ ಕಂಠದ ಗಾಯಕಿ ಎಂದು ಪ್ರಸಿದ್ದಿಯಾಗಿದ್ದರು. ಅದೆ ರೀತಿ ಲತಾ ಮಂಗೇಶ್ಕರ್ ಕೂಡ ಜನರ ಮನಸ್ಸಿನಲ್ಲಿ ಇನ್ನು ಅಚ್ಚಳಿಯದೆ ಉಳಿದಿದ್ದಾರೆಂದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಚಿತ್ರದುರ್ಗದಲ್ಲಿ ಅಂಜನಾ ನೃತ್ಯ ಕಲಾ ಕೇಂದ್ರ ಸ್ಥಾಪನೆಯಾಗದಿದ್ದರೆ ಕಲೆಗಳೆ ಇರುತ್ತಿರಲಿಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರತನಕ ಎಲ್ಲರೂ ಮೊಬೈಲ್‌ನಲ್ಲಿ ಮುಳುಗಿ ಹೋಗಿರುವುದರಿಂದ ಹಾಡು ಸಂಗೀತದ ಬಗ್ಗೆ ಒಲವು ಕಡಿಮೆಯಾಗಿದೆ.ನಂದಿನಿ ಶಿವಪ್ರಕಾಶ್‌ರವರು ಭರತನಾಟ್ಯದ ಮೂಲಕ ದೇಶ-ವಿದೇಶಗಳಲ್ಲಿ ಚಿತ್ರದುರ್ಗದ ಕೀರ್ತಿಯನ್ನು ಮೊಳಗಿಸಿದ್ದಾರೆ. ಶಿಷ್ಯರು ಗುರುವಂದನೆ ಮಾಡುವುದು ಅಪರೂಪವಾಗಿರುವ ಇಂದಿನ ಕಾಲದಲ್ಲಿ ಕರ್ನಾಟಕ ಕಲಾಶ್ರಿ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಸಿ.ಆರ್.ಶಿವಪ್ರಕಾಶ್‌ರವರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಗುರುಗಳ ಕೃಪೆಯಿದ್ದರೆ ಏನನ್ನಾದರೂ ಸಾಧಿಸಬಹುದು. ೪೨ ವರ್ಷಗಳಲ್ಲಿ ಸಾವಿರಾರು ಭರತನಾಟ್ಯ ವಿದ್ಯಾರ್ಥಿಗಳನ್ನು ಅಂಜನಾ ನೃತ್ಯ ಕಲಾ ಕೇಂದ್ರ ಕೊಡುಗೆಯಾಗಿ ನೀಡಿರುವುದು ಕಮ್ಮಿ ಸಾಧನೆಯಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಜನಾ ನೃತ್ಯ ಕಲಾ ಕೇಂದ್ರದ ಸಿ.ಆರ್.ಶಿವಪ್ರಕಾಶ್, ವಿದುಷಿ ಡಾ.ನಂದಿನಿ ಶಿವಪ್ರಕಾಶ್ ಇವರುಗಳು ವೇದಿಕೆಯಲ್ಲಿದ್ದರು.

ಶ್ರೀಕೃಷ್ಣದೇವರಾಯ, ಗುರು-ಶಿಷ್ಯರು, ಶೃತಿ ಸೇರಿದಾಗ ಚಿತ್ರದಲ್ಲಿ ಎಸ್.ಜಾನಕಿರವರು ಹಾಡಿರುವ ಕನ್ನಡ ಗೀತೆಗಳಿಗೆ ಅಂಜನಾ ನೃತ್ಯ ಕಲಾ ಕೇಂದ್ರದವರು ಭರತ ನಾಟ್ಯದ ಮೂಲಕ ನೃತ್ಯ ನಿವೇದನ ಸಮರ್ಪಿಸಿದರು.

ವಿದುಷಿ ಡಾ.ರಕ್ಷಿತಾ ಮತ್ತು ತಂಡದಿಂದ ಶಾಸ್ತ್ರೀಯ ನೃತ್ಯ ವೈವಿದ್ಯ, ವಿದುಷಿ ಪ್ರಜ್ಞಾ ಮತ್ತು ತಂಡದಿಂದ ನೃತ್ಯ ಮಾಲಿಕಾ, ವಿದುಷಿ ವೈಷ್ಣವಿ ಮರಡಿ ಮತ್ತು ತಂಡದಿಂದ ವಿಶೇಷ ಆಕರ್ಷಣೆ ನಟವರ ನೃತ್ಯ ರೂಪಕ ನೆರದಿದ್ದವರ ಮನ ಸೂರೆಗಳಿಸಿತ್ತು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!