Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳಿಲ್ಲದ ತಾಯಂದಿರು ದತ್ತು ಪಡೆದರೆ ಅವರಿಗೂ ಹೆರಿಗೆ ರಜೆ-ಸುಪ್ರೀಂ

Advertisement
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮಕ್ಕಳಿಲ್ಲದ ತಾಯಂದಿರು ದತ್ತು ಪಡೆದರೆ ಅವರಿಗೂ ಹೆರಿಗೆ ರಜೆ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.


3 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಳ್ಳುವವರಿಗೂ ಪೂರ್ಣ ಹೆರಿಗೆ ರಜೆ ಸಿಗಲಿದೆ. ಇದನ್ನು ಮಾನವ ಹಕ್ಕು ಎಂದು ಕರೆದ ಸುಪ್ರೀಂ ಕೋರ್ಟ್ ದತ್ತು ಪಡೆದ ಮಗು ಆ ತಾಯಿ ಹೆತ್ತ ಮಗುವಿಗಿಂತ ಭಿನ್ನವಾಗಿಲ್ಲ.
ದತ್ತು ಪಡೆದ ಮಗು ಕೂಡ ಆ ಮಹಿಳೆಯ ಮಗುವಿನಂತೆಯೇ ಎಂದು ಹೇಳಿದೆ.ದತ್ತು ಪಡೆದ ಮಗುವಿನ ವಯಸ್ಸನ್ನು ಲೆಕ್ಕಿಸದೆ ದತ್ತು ಪಡೆದ ತಾಯಿಗೆ
12 ವಾರಗಳ ಹೆರಿಗೆ ರಜೆಗೆ ಅರ್ಹತೆ ಇರಬೇಕು ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರ ಪೀಠ ಸ್ಪಷ್ಟಪಡಿಸಿದೆ.

ದತ್ತು ಪಡೆದ ತಾಯಂದಿರಿಗೆ ಮೂರು ತಿಂಗಳೊಳಗಿನ ಮಕ್ಕಳನ್ನು ದತ್ತು ತೆಗೆದುಕೊಳ್ಳುವವರಿಗೆ ಮಾತ್ರ ಹೆರಿಗೆ ರಜೆಯನ್ನು ಸೀಮಿತಗೊಳಿಸುವ ಕಾನೂನು ನಿಬಂಧನೆಯನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದೆ. ಮಗುವಿನ ವಯಸ್ಸನ್ನು ಲೆಕ್ಕಿಸದೆ, ಎಲ್ಲಾ ದತ್ತು ಪಡೆದ ತಾಯಂದಿರು ದತ್ತು ಪಡೆದ ದಿನಾಂಕದಿಂದ 12 ವಾರಗಳ ರಜೆಗೆ ಅರ್ಹರಾಗಿರುತ್ತಾರೆ.

ಈ ಸಂದರ್ಭದಲ್ಲಿ ಇಬ್ಬರಿಗೂ ಬಾಂಧವ್ಯ, ಆರೈಕೆ ಮತ್ತು ಹೊಂದಾಣಿಕೆಗೆ ಸಮಯ ಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಮೊದಲು ಮಗು ಮೂರು ತಿಂಗಳಿಗಿಂತ ದೊಡ್ಡದಾಗಿದ್ದರೆ ದತ್ತು ಪಡೆದ ತಾಯಿಗೆ ಹೆರಿಗೆ ರಜೆಯ ಸೌಲಭ್ಯ ದೊರೆಯುವುದಿಲ್ಲ ಎಂಬ ನಿಯಮವಿತ್ತು. ಈಗ ಮಗುವಿನ ವಯಸ್ಸಿನ ಮಿತಿಯನ್ನು ತೆರವುಗೊಳಿಸಿರುವ ಸುಪ್ರೀಂ ಕೋರ್ಟ್​ ಯಾವುದೇ ವಯೋಮಾನದ ಮಗುವನ್ನು ದತ್ತು ಪಡೆದ ಮಹಿಳೆಯರಿಗೆ ಹೆರಿಗೆ ರಜೆ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಪಿತೃತ್ವ ರಜೆಯ ವಿಷಯವನ್ನು ಆಯಾ ಸರ್ಕಾರಕ್ಕೆ ಬಿಡಲಾಗಿದೆ. ತನ್ನ ತೀರ್ಪಿನಲ್ಲಿ ಪಿತೃತ್ವ ರಜೆಗಾಗಿ ಹೊಸ ನಿಯಮಗಳು ಮತ್ತು ಮಾಡಬೇಕಾದ ಯಾವುದೇ ಬದಲಾವಣೆಗಳನ್ನು ಸರ್ಕಾರ ನಿರ್ಧರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST