Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಸಸ್ಯಗಳನ್ನು ತರಿತರಿದು ತಿನ್ನುವುದು ಹಿಂಸೆ ಅಲ್ಲವೇ?-ಡಿ.ಶಬ್ರಿನಾ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಸ್ಯಗಳಿಗೂ ಜೀವವಿದೆ. ಸಸ್ಯಗಳನ್ನು ತರಿತರಿದು ತಿನ್ನುವುದು ಹಿಂಸೆ ಅಲ್ಲವೇ
?-  ಡಿ.ಶಬ್ರಿನಾ ಮಹಮದ್ ಅಲಿ,ಚಳ್ಳಕೆರೆ
ಬಸವಣ್ನವರ ವಚನ ಹೀಗಿದೆ....
ಮರ ಗಿಡ ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು ಪ್ರಾಣವ ಕೊಂದುಂಡು ಶರೀರವ ಹೊರೆವ ದೋಷಕ್ಕೆ ಇನ್ನಾವುದು ವಿದ್ಥಿಯಯ್ಯಾ ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರಾಚರವೆಲ್ಲ. ಅದು ಕಾರಣ ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು.


     ನಟ ಡಾಲಿ ಧನಂಜಯ ಅವರು ಬಾಡೂಟ ಸೇವಿಸಿದ್ದನ್ನ ಮಹಾ ಅಪರಾಧದಂತೆ ಮಾಧ್ಯಮದಲ್ಲಿ ಬಿಂಬಿಸುತ್ತಿರುವ ಈ ಹೊತ್ತಲ್ಲಿ ಬಸವಣ್ಣನವರ ಈ ಮೇಲಿನ ವಚನ ನನಗೆ ತುಂಬಾ ನೆನಪಾಯಿತು. ತಿನ್ನುವ ಅನ್ನದಲ್ಲಿ ಜಾತಿ ಹುಡುಕುವ ಹುಳುಕು‌ಮನಸ್ಸಿನವರ ನಡೆ ಕಂಡು ನಗುವುದೊ,ಬೈಯುವುದೊ ಅನ್ನುವುದಕ್ಕಿಂತ ಹೆಚ್ಚಾಗಿ,ಬಸವಣ್ಣನವರನ್ನು ಅರ್ಥಮಾಡಿಕೊಳ್ಳುವ ತಿಳುವಳಿಕೆ ಈ ಸಮಾಜಕ್ಕಿಲ್ಲ ಎಂಬುದು ನನಗೆ ಖಚಿತವಾಯಿತು. ಕಾರಣ ಗುರು ಬಸವಣ್ಣನವರು ಪ್ರಕೃತಿಯ ಅಣು ಅಣುವಿನಲ್ಲೂ ಜೀವಂತಿಕೆ ಕಂಡವರು.

ಎಲ್ಲದಕ್ಕಿಂತ ಮಿಗಿಲಾಗಿ ಮನುಷ್ಯರನ್ನ ಮನುಷ್ಯರಂತೆ ಕಾಣುವ ಮೂಲಕ ಮಹಾ ಮಾನವೀಯತೆಯನ್ನ ಸಾರಿದವರು. ಆದರೆ ಇಂದು ಅವರ 'ದಯೆಯೇ ಧರ್ಮದ ಮೂಲ' ಅನ್ಜುವ ವಿಶಾಲ ಚಿಂತನೆಯನ್ನ ಆಹಾರಕ್ಕೆ ಮಾತ್ರ ಸೀಮಿತ ಮಾಡಿರುವುದು ಅತ್ಯಂತ ಶೋಚನೀಯ ಸಂಗತಿ ಎಂಬುದು ನನ್ನ ಅಭಿಪ್ರಾಯ. 

     ಏಕೆಂದರೆ, ಬಸವಣ್ಣನವರ ಚಿಂತನೆಗಳು ಬೆಳಕಿನಂತಹವು. ಅಂತಹ ಬೆಳಕಿಗೂ ಅಲ್ಪಜ್ಞಾನಿಗಳು ಕೆಲವೊಮ್ಮೆ ಗ್ರಹಣ ಹಿಡಿಸಿಬಿಡುತ್ತಾರೆ. ತೊಂದರೆಯೇನಿಲ್ಲ, ಕಾರಣ ಗ್ರಹಣ ತುಂಬಾ ಹೊತ್ತಿರದು! ೧೨ ನೇ ಶತಮಾನದಲ್ಲಿ ಶೂದ್ರರರನ್ನ, ಮಹಿಳೆಯರನ್ನ ಮೃಗಗಳಿಗಿಂತ ಕಡೆಯಾಗಿ ಕಾಣುತಿದ್ದರು.
ಜಾತಿ
, ಲಿಂಗ, ವರ್ಗ,ವರ್ಣಗಳ ಹೆಸರಲಿ ಅಳಿಸಲಾಗದಂತಹ ಶೋಷಣೆ ದೌರ್ಜನ್ಯವನ್ನ ಎಸುಗುತಿದ್ದರು. ಅದನ್ನ ಕಂಡ ಬಸವಣ್ಣನವರು 'ಇವನಾರವ ಇವನಾರವ ಎಂದೆನಿಸಿದರಯ್ಯಾ ಇವ ನಮ್ಮವ ಇವ ನಮ್ಮವಾ ಎಂದೆನಿಸಯ್ಯ' ಎಂದು ಹೇಳುವ ಮೂಲಕ ದಯೆಯೇ ಧರ್ಮದ ಮೂಲ ಎಂಬ ತತ್ವವನ್ನ ಸಾರಿದರು.

  ಹೊಲೆಗಂಡಲ್ಲದೆ ಪಿಂಡದ ನೆಲಗಾಶ್ರಯವಿಲ್ಲ ...ಎಂಬ ವಚನದ ಮೂಲಕ ಮಾನವನ ಹುಟ್ಟಿನಲ್ಲಿ ಸಮಾನತೆ ಇದೆ ಎಂದರು.
ನೆಲವೊಂದು ಹೊಲೆಗೇರಿ‌ಶಿವಾಲಯಕ್ಕೆ ಎಂಬ ವಚನದ ಮೂಲಕ ಪ್ರಕೃತಿಯಲ್ಲಿ ಸಮಾನತೆ ಇದೆ ಎಂದು ತಿಳಿಸಿದರು.
ಇಷ್ಟೆಲ್ಲಾ ಹೇಳಿದ್ದು ಮನುಷ್ಯರನ್ನು ಮನುಷ್ಯರಂತೆ ಕಾಣಿ
, ಅವರ ಮೇಲೆ ದಯೆ ತೋರಿ ಸಮಾನತೆಯಿಂದ ಕಾಣಿ ಮಾನವೀಯತೆಯಿಂದ ಬದುಕಿ ಎಂಬದನ್ನ ಸಾರಲಿಕ್ಕಾಗಿ. ಆದರೆ ಇಂದು ಅವರ ಮಾತುಗಳನ್ನ ಆಹಾರಕ್ಕೆ ಮಾತ್ರ ಸೀಮಿತಗೊಳಿಸಿ ಇಂತಹ ಅಸಂಬದ್ಧ ಚರ್ಚೆಗೆ ಅವಕಾಶ ಮಾಡಿಕೊಡುತಿದ್ದಾರೆ.

    ಬಸವಣ್ಣನವರ ಮತ್ತೊಂದು ಮಾತು,'ಸಕಲ ಜೀವಿಗಳಿಗೆ ಲೇಸನು‌ಬಯಸಬೇಕು' ಎಂಬುದು.  ವಿಶಾಲ ಅರ್ಥದಲ್ಲಿರುವ ಇವರ ವಚನವನ್ನು ಇಂದಿನವರು  ಪ್ರಾಣಿಹಿಂಸೆಗೆ ಮಾತ್ರ ಸೀಮಿತ ಮಾಡಿದ್ದಾರೆ. ಈ ಮೂಲಕ ಮಾಂಸಹಾರ ಸೇವನೆ ನಿಷಿದ್ಧ ಎಂದು ಭಾವಿಸಿದ್ದಾರೆ. ಪ್ರಾರಂಭದಲ್ಲಿ ನಾನು ಪ್ತಸ್ತಾಪಿಸಿದ ವಚನದಲ್ಲಿಯೇ ಬಸವಣ್ಙನವರು ಹೇಳಿದ್ದಾರೆ, ಸಸ್ಯಗಳಿಗೂ ಜೀವವಿದೆ ಆದ್ದರಿಂದ ನಾವು ಯಾವುದನ್ನೆ ತಿನ್ನುವ ಮೊದಲು ಲಿಂಗಕರ್ಪಿತ ಮಾಡಿ ತಿಂದರೆ ನಿರ್ದೊಷಿಗಳಾಗಿತ್ತೇವೆ ಎಂದು. ಈ ಒಂದು ವಚನ ಅರ್ಥಮಾಡಿಕೊಂಡರೆ ಆಹಾರ ಅವರವರ ಆಯ್ಕೆ ಎಂಬುದು ನಮಗೆ ಸ್ಪಷ್ಟವಾಗುತ್ತದೆ.

ಬಸವಣ್ಣನವರ ಮತ್ತೊಂದು ವಚನ...
ಎಡದ ಕೈಯಲ್ಲಿ ಕತ್ತಿ
,
ಬಲದ ಕೈಯಲ್ಲಿ ಮಾಂಸ
ಬಾಯಲ್ಲಿ ಸುರೆಯ ಗಡಿಗೆ
,
ಕೊರಳಲ್ಲಿ ದೇವರಿರಲು ಅವರನ್ನು ಲಿಂಗನೆಂಬೆ
,
ಸಂಗನೆಂಬೆ ಕೂಡಲ
ಸಂಗಮದೇವಾ ಅವರ ಮುಖಲಿಂಗಿಗಳೆಂಬೆನು


ಎಂದು ಹೇಳುತ್ತಾರೆ.  ವೃತ್ತಿಯಿಂದ ಚಾಂಡಾಲನೇ ಆಗಿರಲಿ. ಪ್ರವೃತ್ತಿಯಿಂದ ಮಾಂಸಾಹಾರಿ, ಸುರೆ ಸೇವಿಸುವವನಾಗಿರಲಿ, ಅಂಥವನು ಕೂಡಾ ಶರಣಸಿದ್ಧಾಂತವನ್ನು ಗೌರವಿಸುವವನಾದರೆ ಸಮಾನತೆಯ ಪ್ರತೀಕವಾದ ಲಿಂಗ ಧರಿಸಿದನಾದರೆ ಅವನನ್ನು ಸಂಗಯ್ಯನೆಂದೇ ಕಾಣುತ್ತೇನೆ ಎಂದು ಈ ವಚನದಲ್ಲಿ ತುಂಬ ಸ್ಪಷ್ಟವಾಗಿ ಬಸವಣ್ಣನವರು ಹೇಳಿದ್ದಾರೆ. ಆದ್ದರಿಂದಲೇ ಬಸವಣ್ಣನವರು ಮಾದಾರ ಚೆನ್ನಯ್ಯಾ,ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ ಈ ಎಲ್ಲರನ್ನ ಅಪ್ಪ,ಚಿಕ್ಕಪ್ಪ,ದೊಡ್ಡಪ್ಪ ಎಂದು ಕರೆದು ಒಪ್ಪಿಕೊಂಡಿದ್ದಾರೆ. ಬಸವಣ್ಣನವರ ಈ ಮಾನವೀಯ ನಡೆಯನ್ನ ಈಗಿನವರು ಏನೆಂದು ಅರ್ಥೈಸಿಕೊಳ್ಳುವರೋ?

ಅಲ್ಲಮಪ್ರಭುಗಳ ಒಂದು ವಚನ ಹೀಗಿದೆ....
ಮದ್ಯ ಮಾಂಸಾದಿಗಳ
ಮುಟ್ಟೆವೆಂಬಿರಿ
, ನೀವು ಕೇಳಿರೆ.
ಮದ್ಯವಲ್ಲವೇನು ಅಷ್ಟಮದಂಗಳು
?
ಮಾಂಸವಲ್ಲವೇನು ಸಂಸಾರ ಸಂಗ
?
ಈ ಉಭಯವನತಿಗಳೆದಾತನೆ
,
ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು


ಈ ವಚನದಲ್ಲಿ ಅಲ್ಲಮರು ಅಷ್ಟಮದಗಳನ್ನು ಮದ್ಯಪಾನಕ್ಕೆ,ಸಂಸಾರ ಸಂಗವನು ಮಾಂಸಾಹಾರಕ್ಕೆ ಹೋಲಿಸುತ್ತಾರೆ. ನಾವಿಲ್ಲಿ ಗಮನಿಸಬೇಕಾಗಿರುವದೆನೆಂದರೆ, ಊಟ ನಮ್ಕಿಚ್ಛೆ ನೋಟ ಪರರಿಚ್ಛೆ ಎಂಬುದನ್ನ ಅರಿತು, ನಾವು ತಿನ್ನುವ ಆಹಾರ ಯಾವುದೇಯಾಗಿರಲಿ ಅದು ಚರ್ಚಾ ವಿಷಯ ಅಲ್ಲವೇ ಅಲ್ಲಾ! ಹಾಗೇ ಯೋಚಿಸಿದರೆ ಮನುಷ್ಯ ಉಪವಾಸದಿಂದ ನರಳಿ ನರಳಿ ಸಾಯಬೇಕಾಗುತ್ತದೆ. ಏಕೆಂದರೆ, ಸಸ್ಯಗಳಿಗೂ ಜೀವವಿದೆ,ಹಣ್ಣು ತರಕಾರಿ,ಧಾನ್ಯಗಳನ್ನ ಕೀಳುವಂತಿಲ್ಲ,ಹಿಂಸಿಸುವಂತಿಲ್ಲ ಅಲ್ಲವೇ! ಚರ್ಚಿಸಲು ಸಾಕಷ್ಟು ಸಮಸ್ಯೆಗಳಿವೆ. ಶಿಕ್ಷಣ,ನಿರುದ್ಯೋಗ,ಸಮಾನತೆ ಈ ಕುರಿತು ಚರ್ಚೆಗಳಾಗಲಿ.  ಅನಗತ್ಯ ವಿಷಯಕ್ಕಿಂತ, ಮನುಷ್ಯರಾಗಿ ಹುಟ್ಟಿದ ನಾವೆಲ್ಲಾ  ಒಂದೇ ಎಂಬುದನ್ನರಿತು ಮಾನವೀಯತೆಯಿಂದ ಬದುಕುವುದೇ ನಮ್ಮ ಗುರಿಯಾಗಬೇಕಿದೆ. ಏನಂತಿರಿ?....
ಲೇಖನ-ಡಿ.ಶಬ್ರಿನಾ ಮಹಮದ್ ಅಲಿ
,ಚಳ್ಳಕೆರೆ

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!