ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇಲ್ಲಿನ ಹೆಸರಾಂತ ನಿವೃತ್ತ ಶಿಕ್ಷಕರಾದ ಜಗನ್ನಾಥ ಗುಪ್ತ ಇವರ ಪುತ್ರ ಜೆ ನಾಗರಾಜು ಇವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಪಿ ಎಚ್ ಡಿ ಪದವಿ ಲಭಿಸಿರುತ್ತದೆ.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಈರಯ್ಯ ಇವರ ಮಾರ್ಗದರ್ಶನದಲ್ಲಿ ಆಪ್ಟಿಕಲ್ ಸ್ಪೆಕ್ಟ್ರೋಸ್ಕೋಪಿಕ್ ಮತ್ತು ಸ್ಟ್ರಕ್ಚರಲ್ ಸ್ಟಡಿ ಆಫ್ ರೇರ್ ಅರ್ಥ್ ಡೂಪುಡ್ ಬೋರೇಟ್ ಗ್ಲಾಸ್ಸಾಸ್ ಎಂಬ ಪ್ರಬಂಧ ಮಂಡಿಸಿದ್ದರು.
ಜೆ ನಾಗರಾಜು ರವರು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




