Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ  : ಆಂಗ್ಲ ನಾಮಫಲಕ ತೆರವುಗೊಳಿಸುವಂತೆ ಮುಖಂಡರ ಆಗ್ರಹ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
 ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ ಪೂರ್ವ ಭಾವಿ ಸಭೆ ನಡೆಯಿತು.

ಸಭೆಯಲ್ಲಿ ನಗರಸಭಾ ಸದಸ್ಯ,ಕನ್ನಡಪರ ಹಿರಿಯ ಹೋರಾಟಗಾರ ತ. ನ. ಪ್ರಭುದೇವ್ ಮಾತನಾಡಿ ನಗರದ ೩೧ ವಾರ್ಡ್ ಗಳಲ್ಲಿಯೂ ಮನೆಗಳ ಮೇಲೆ ಕನ್ನಡದ ಬಾವುಟ ಹಾರಿಸುವ ಕೆಲಸ ಮಾಡಬೇಕು. ಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಸಾಹಿತಿಗಳು, ಬರಹಗಾರರು, ಕವಿಗಳು, ಸೇರಿದಂತೆ ಕನ್ನಡಿಗರ ಸಾಧನೆಗಳನ್ನೊ ಳಗೊಂಡ ಪುಸ್ತಕಗಳನ್ನು ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ವಿತರಿಸಬೇಕು ಎಂದು  ಅಭಿಪ್ರಾಯ ಪಟ್ಟರು.

  ಹಿರಿಯ ಕನ್ನಡ ಪರ ಹೋರಾಟಗಾರ ಸಂಜೀವನಾಯಕ್ ಮಾತನಾಡಿ ತಾಲ್ಲೂಕಿನ ಎಲ್ಲಾ ಕನ್ನಡ ಪರ ಹೋರಾಟಗಾರರು ಸಭೆ ನಡೆಸಿ, ನಗರದಲ್ಲಿರುವ ಆಂಗ್ಲಭಾಷೆಯ ನಾಮಫಲಕಗಳನ್ನು ತೆಗೆದುಹಾಕುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಿ, ನವೆಂಬರ್ ತಿಂಗಳಲ್ಲಿಯೇ  ತೆರವು ಮಾಡಲು ಮುಂದಾಗಬೇಕು. ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಕಡ್ಡಾಯವಾಗಿ ಶಿಸ್ತುಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ಕನ್ನಡ ಪರ ಹೋರಾಟಗಾರ ಎ. ನಂಜಪ್ಪ ಮಾತನಾಡಿ ಕನ್ನಡಪರ ಸಂಘಟನೆಗಳು ಕಟ್ಟುವ ಬ್ಯಾನರ್ ಗಳನ್ನು ಎರಡು ಮೂರು ದಿನಗಳಲ್ಲಿ ತೆಗೆದುಹಾಕುವ ನಗರಸಭೆ ಅಧಿಕಾರಿಗಳು ರಾಜಕಾರಣಿಗಳ ಬ್ಯಾನರ್ ಗಳನ್ನು 15 ದಿನಗಳಾದರೂ ಮುಟ್ಟುವುದಿಲ್ಲ ಏಕೆ... ಎಂದು ಪ್ರಶ್ನಿಸಿದರು ಹಾಗೂ ಇತ್ತೀಚಿನ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ ಕಟ್ಟುತ್ತಿರುವ ಬ್ಯಾನರ್ ಗಳಲ್ಲಿ ಕನ್ನಡ ಮಾಯವಾಗುತ್ತಿದೆ ಬರು ಬರುತ್ತಾ ಸಂಪೂರ್ಣ ಇಂಗ್ಲಿಷ್ ಮಯವಾಗುವುದರಲ್ಲಿ ಸಂಶಯವಿಲ್ಲ.ಇದನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕು ಎಂದರು.

ತಹಶೀಲ್ದಾರ್ ಮಲ್ಲಪ್ಪ ಯರಗೋಳ ಮಾತನಾಡಿ ಮಳೆ ಬರುವ ಸಾಧ್ಯತೆ ಇರುವುದರಿಂದ ಬಯಲು ಪ್ರದೇಶದಲ್ಲಿ ಮಾಡುವ ಬದಲಾಗಿ ಡಾ.ರಾಜಕುಮಾರ್ ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸುವುದು ಸೂಕ್ತವಾಗಿದೆ ಎಂದರು. ಇದಕ್ಕೆ ಕನ್ನಡಪರ ಹೋರಾಟಗಾರರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.

ಹಲವು ಸಂಘಟನೆಗಳ ಮುಖಂಡರು ಮಾತನಾಡಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೈಜ ಸಾಧಕರನ್ನು ಗುರ್ತಿಸಿ ಅಭಿನಂದಿಸಬೇಕು. ಯಾವುದೇ ಕಾರಣಕ್ಕೂ ರಾಜ್ಯೋತ್ಸವ ಕಾಟಾಚಾರದ ಕಾರ್ಯಕ್ರಮವಾಗದೆ ಅಪ್ಪಟ ಕನ್ನಡದ ಕಾರ್ಯಕ್ರಮ ವಾಗಬೇಕು. ಕನ್ನಡ ನಾಮಪಲಕ ತೆರವು ಗೊಳಿಸುವ ವಿಚಾರದಲ್ಲಿ ಅಧಿಕಾರಿಗಳು ಇಚ್ಚಾ ಶಕ್ತಿ ಪ್ರದರ್ಶಿಸಬೇಕು.ಮುಖ್ಯವಾಗಿ ಆಯ್ಕೆ ಸಮಿತಿಯಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದರು.

ಸಭೆಯಲ್ಲಿ  ತಾಲ್ಲೂಕು ಪಂಚಾಯತಿ ಇಓ ಮಂಜುನಾಥ ಹರ್ತಿ, ಪೌರಾಯುಕ್ತ ಕಾರ್ತಿಕೇಶ್ವರ್, ಕನ್ನಡಪರ ಹೋರಾಟಗಾರ ರಾಜಘಟ್ಟ ರವಿ,ಗಂಗರಾಜು ಶಿರವಾರ,ಪ್ರಮೀಳಮಹದೇವ, ಮುನಿಪಾಪಯ್ಯ,ಅಗ್ನಿ ವೆಂಕಟೇಶ್ ವೆಂಕಟೇಶ್, ಜೆ. ಶಿವಕುಮಾರ್, ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಂತ್ರಜ್ಞಾನದ ಅತಿರೇಕ -ಸಾಮಾಜಿಕ ಸಾಮರಸ್ಯಕ್ಕೆ ಗಂಡಾಂತರ— ಜಾಗೃತಿ ಅಗತ್ಯಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಆಯುಧ ಪೂಜೆಕೆಪಿಸಿಸಿ ನಿಧಿಗೆ ಶಾಲೂ-ಹಾರದ ಬದಲು ದೇಣಿಗೆ ನೀಡಿ: ಬಿ.ಕೆ. ಹರಿಪ್ರಸಾದ್ ಕರೆ ಹಿರಿಯೂರು ತಾಲೂಕಿನಲ್ಲಿ ಮಳೆ ಅಬ್ಬರ: ಬಬ್ಬೂರು ಸಮೀಪದ ಜಮೀನಿನಲ್ಲಿ ನಿಂತ ಮಳೆ ನೀರುಸಮಾನತೆಗಾಗಿ ಸಹಭೋಜನ: ಅರಿವು ಭಾರತದಿಂದ ವಿಶಿಷ್ಟ ಚಿಂತನೆ–ರಾಹುಲ್ ಗಾಂಧಿ ವಿರುದ್ಧ ಗರ್ಭಿಣಿ ಪತ್ರಕರ್ತೆಯ ಗಂಭೀರ ಆರೋಪ: ಪೊಲೀಸ್ ಆಯುಕ್ತರಿಗೆ ಕ್ರಿಮಿನಲ್ ದೂರುಸರ್ಕಾರಿ ನೌಕರರು ಹಾಗೂ ಗುತ್ತಿಗೆ ಸಿಬ್ಬಂದಿಗೆ ರಾತ್ರಿ ಹಾಜರಾತಿ ಕಡ್ಡಾಯ: ರಾಜ್ಯ ಸರ್ಕಾರದ ಮಹತ್ವದ ಆದೇಶಮಹತ್ವದ ಆಡಳಿತಾತ್ಮಕ ಸುಧಾರಣೆ: ಸಕಾಲ ವ್ಯಾಪ್ತಿಗೆ ಎಲ್ಲಾ ಸರ್ಕಾರಿ ಸೇವೆಗಳು ಹಾಗೂ ಆರ್‌ಟಿಐ ಆನ್‌ಲೈನ್ ಕಡ್ಡಾಯನೈಸ್ ರಸ್ತೆಯಲ್ಲಿ ಕೆಮಿಕಲ್ ಟ್ಯಾಂಕರ್ ಸ್ಫೋಟ: ಮುಗಿಲು ಮುಟ್ಟಿದ ದಟ್ಟ ಕಪ್ಪು ಹೊಗೆ, ಟ್ರಾಫಿಕ್ ಜಾಮ್!