Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಬಿಜೆಪಿ-ಜೆಡಿಎಸ್ ಮೈತ್ರಿ, ಗೊಂದಲಗಳಿಗೆ ಅವಕಾಶ ಕೊಡಬಾರದು-ಕುಮಾರಸ್ವಾಮಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ವಿಚಾರದಲ್ಲಿ ಮುಕ್ತವಾಗಿದ್ದೇವೆ. ಜನರಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಕೊಡಬಾರದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿವಿ ಮಾತು ಹೇಳಿದರು.


ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಮಾತನಾಡಿದ ಅವರು, ಜಿಬಿಎ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲ ಪಕ್ಷಗಳು ಜಿಬಿಎ, ಜಿಪಂ, ತಾಪಂ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗ ಚುನಾವಣೆ ನಡೆಯುವ ವಾತಾವರಣ ಇದೆ. ಬೆಂಗಳೂರು ಜಿಬಿಎ ಚುನಾವಣೆಗಾಗಿಯೇ ನಾವು ಕೂಡ ಸಭೆ ಕರೆದಿದ್ದೇವೆ. ಮುಂದಿನ ನಮ್ಮ ನಡೆ ಏನಾಗಿರಬೇಕು ಎಂಬ ಚರ್ಚೆ ಮಾಡ್ತೇವೆ. ಮೈತ್ರಿ ವಿಷಯದಲ್ಲಿ ಈ ಕ್ಷಣದವರೆಗೆ ನಾವೇ ಚರ್ಚೆ ಮಾಡಿಲ್ಲ. ಚರ್ಚೆ ಯಾವಾಗ ಮಾಡಬೇಕು ಆ ಸಮಯಕ್ಕೆ ಮಾಡುತ್ತೇವೆ. ವೈಯುಕ್ತಿಕ ಹೇಳಿಕೆಗಳ ಬಗ್ಗೆ ಚರ್ಚೆ ಮಾಡಲು ಹೋಗಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

ವೈಯಕ್ತಿಕ ಹೇಳಿಕೆ ಅನಾವಶ್ಯಕ:
ಒಂದೊಂದು ಪಕ್ಷದಲ್ಲಿ ಒಂದೊಂದು ರೀತಿ ಚರ್ಚೆ ಮಾಡುತ್ತಾರೆ. ಕೆಲವರು ಮಾತಾಡ್ತಾರೆ
, ಅದೇ ಅಂತಿಮ ಅಲ್ಲ. ಅಸೆಂಬ್ಲಿ ಚುನಾವಣೆಗೆ ಎರಡು ವರ್ಷ ಇದೆ. ಜಿ.ಪಂ ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳಿದೆ. ಆ ಸಮಯ ಬಂದಾಗ ಚರ್ಚೆ ಮಾಡೋಣ. ವೈಯುಕ್ತಿಕ ಹೇಳಿಕೆಗಳಿಗೆ ಉತ್ತರ ಕೊಡೋದು ಅನಾವಶ್ಯಕ ಎಂದು ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಜೊತೆ ಮೈತ್ರಿಗೆ ಮಂಡ್ಯ, ಹಾಸನ ಬಿಜೆಪಿ ನಾಯಕರ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ವ್ಯಕ್ತಿಗಳ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡೋಕೆ ಹೋಗುವುದಿಲ್ಲ. ಕೆಲವರು ಮಾತಾಡೋದೇ ಅಂತಿಮ ಅಲ್ಲ. ವಿಧಾನಸಭೆ ಚುನಾವಣೆ ಎರಡು ವರ್ಷ ಇದೆ. ಸ್ಥಳೀಯ ಸಂಸ್ಥೆ ಚುನಾವಣೆ 4-5 ತಿಂಗಳು ಇದೆ. ಅ ಸಮಯ ಬಂದಾಗ ಚರ್ಚೆ ಮಾಡೋಣ. ವೈಯಕ್ತಿಕವಾಗಿ ಮಾತಾಡೋರಿಗೆ ನಾನು ಉತ್ತರ ಕೊಡೋದು ಅನಾವಶ್ಯಕ ಎಂದು ಪ್ರೀತಂಗೌಡ, ನಾರಾಯಣಗೌಡ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

113 ಸ್ಥಾನ ಪಡೆದು ಕುಮಾರಸ್ವಾಮಿ ಬೇಕಾದ್ರೆ ಸಿಎಂ ಆಗಲಿ ಎಂಬ ಛಲವಾದಿ ನಾರಾಯಣಸ್ವಾಮಿ ‌ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಇಲ್ಲಿವರೆಗೂ ನಿಮ್ಮ ಮುಂದೆ ನೂರು ಬಾರಿ ಹೇಳಿದ್ದೇನೆ. ರಾಜ್ಯದಲ್ಲಿ ಇರೋ ಇಂತಹ ಭ್ರಷ್ಟ, ಕೆಟ್ಟ ಸರ್ಕಾರ ತೆಗೆಯಬೇಕು ಅನ್ನೋದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಆಗೋದೆಲ್ಲ ಆಮೇಲೆ. ಈ ರಾಜ್ಯದಲ್ಲಿ ಉತ್ತಮ, ಜನಪರ ಸರ್ಕಾರ ಬರಬೇಕು ಅನ್ನೋದು ನನ್ನ ಅಭಿಪ್ರಾಯ. ಜನರ ಭಾವನೆಗೆ ಸ್ಪಂದಿಸೋ ಸರ್ಕಾರ ಬೇಕು. ಇಂತಹ ಭ್ರಷ್ಟ ಸರ್ಕಾರ ತೆಗೆಯಬೇಕು ಎಂಬುದು ನನ್ನ ಅಜೆಂಡಾ ಎಂದು ತಿಳಿಸಿದರು.

ಬೀದಿಯಲ್ಲಿ ಮಲಗಿದ್ದಿರಲ್ಲ?:
ವಂದೇ ಮಾತರಂಗೆ ಕೆಲವು ಮೌಲ್ವಿಗಳ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ
, ದೇಶದಲ್ಲಿ ಈ ರೀತಿಯ ಘಟನೆಯಾದಾಗ ಗೊಂದಲ ಸೃಷ್ಟಿಸಲು ಶಕ್ತಿ ಇದೆ. ವಂದೇ ಮಾತರಂನಿಂದ ಯಾರಿಗೆ ತೊಂದರೆ ಇದೆ. ವಂದೇ ಮಾತರಂ ಮಾಡಿದ ತಕ್ಷಣ ಏನು ತೊಂದರೆ ನಿಮಗೆ.?. ಇದರಿಂದ ನಿಮಗೆ ಅವಮಾನನಾ.?. ಇಂತಹ ವಿಷಯಗಳನ್ನು ಹೊರತುಪಡಿಸಿ, ರಾಜ್ಯದಲ್ಲಿ ಲೂಟಿ ಆಗ್ತಿದೆ‌. ಆ ಲೂಟಿ ಸರಿ ಪಡಿಸೋದು ನೋಡಿಕೊಳ್ಳಬೇಕು. ಥಣಿಸಂದ್ರ, ಕೋಗಿಲುನಲ್ಲಿ ‌ಏನೋ ನಡೆಯುತ್ತಿತ್ತು. ಮನೆ ಕೊಡ್ತಿವಿ ಅಂದ್ರು, ಎಷ್ಟು ತಿಂಗಳಾಯಿತು ಯಾರಿಗೆ ಕೊಟ್ಟಿದ್ದಾರೆ ಮನೆ?. ಇದನ್ನು ನೋಡಿಕೊಳ್ಳಿ. ವಂದೇ ಮಾತರಂಗೆ ಗೌರವ ಕೊಡುವವರು ಕೊಡ್ತಾರೆ. ವಂದೇ ಮಾತರಂಗೆ ವಿರೋಧ ಮಾಡುವವರು ಬೀದಿಯಲ್ಲಿ ಮಲಗಿದ್ದಾರಲ್ಲ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಮತ ಹಾಕಿದವರಿಗೆ ಗ್ಯಾರಂಟಿ ಇಲ್ಲ: ರಾಜ್ಯ ಸರ್ಕಾರದ ಸಾವಿರ ದಿನಗಳ ಸಂಭ್ರಮಾಚರಣೆ ವಿಚಾರ‌‌ವಾಗಿ ಮಾತನಾಡಿ, ಇವತ್ತಿನ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸೋದಕ್ಕೆ ಪ್ರಾರಂಭ ಮಾಡಿ ಸಾವಿರ ದಿನಗಳನ್ನ ಪೂರೈಸಿದೆ. ಕಳೆದ ಎರಡೂವರೆ ವರ್ಷದಲ್ಲಿ ಪೌತಿಖಾತೆ, ಪೋಡಿ ಎಷ್ಟರ ಮಟ್ಟಿಗೆ ಆಗಿದೆ ಅನ್ನೋದು ಗೊತ್ತಿದೆ. ಯಾವ ಹಕ್ಕು ಪತ್ರ ಯಾರಿಗೆ ಕೊಟ್ಟಿದ್ದಾರೆ. ಗುರುತಿಸಿರೋದು ಯಾರು?. ಜನರಿಗೆ ಭೂಮಿ ಕೊಡುವುದು ಆರನೇ ಗ್ಯಾರಂಟಿ. ಸರ್ಕಾರದಲ್ಲಿರುವ ಮಂತ್ರಿಗಳಿಗೆ ಭೂ ಗ್ಯಾರಂಟಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರೋದಕ್ಕೆ ಗ್ಯಾರಂಟಿ ಇಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಶಾಸಕರು ವಿದೇಶಿ ಪ್ರವಾಸ, ರೆಸಾರ್ಟ್​ಗೆ ಶಿಫ್ಟ್ ಆಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎಲ್ಲಾದರೂ ಹೋಗಲಿ, ನನಗೆ ಬೇಕಾಗಿರೋದು ನಾಡಿನ ಹಲವಾರು ಸಮಸ್ಯೆಗಳಿಗೆ ಪರಿಹಾರ. ಅದರ ಕಡೆ ಗಮನ ಕೊಡಲಿ ಎಂದು ತಾಕೀತು ಮಾಡಿದರು.

ಅಭಿವೃದ್ಧಿ ಪಥದಲ್ಲಿ ಸರ್ಕಾರ ಹೋಗ್ತಿದೆ. ವಿಪಕ್ಷಗಳಿಗೆ ಹೊಟ್ಟೆಕಿಚ್ಚಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿ, ನಾಡಿನ ಜನರ ಮೇಲೆ ಸಾಲ ಹೊರಿಸಿರೋದೆ ಇವರ ದೊಡ್ಡ ಅಭಿವೃದ್ಧಿ. 33 ಸಚಿವರು ಯಾರು ಸಾಲಗಾರರಾಗಿಲ್ಲ. ಸಂಪತ್ ಭರಿತವಾಗಿದ್ದಾರೆ. ಇದೇ ಇವರ ಸಾಧನೆ ಅನ್ನೋದು ನನ್ನ ಅಭಿಪ್ರಾಯ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!