Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಒಳ ಮೀಸಲಾತಿ ಜಾರಿ : ಸಿಹಿ ಹಂಚಿ ಸಂಭ್ರಮಿಸಿದ ಮಾದಿಗ ಸಮುದಾಯದ ಮುಖಂಡರು 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಮಾದಿಗ ಸಮುದಾಯದ
35 ವರ್ಷಗಳ ಹೋರಾಟಕ್ಕೆ ಫಲವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಈ ಹಿನ್ನಲೆ ಮಾದಿಗ ಸಮುದಾಯದ ಮುಖಂಡರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ  ಮಾದಿಗ ಸಮುದಾಯಗಳ ಒಕ್ಕೂಟದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿಯನ್ನು ಮಾದಿಗ ಸಮುದಾಯದ ಮುಖಂಡರು ಸ್ವಾಗತಿಸಿದರು. 

ಇದೇ ವೇಳೆ  ಮುಖಂಡರಾದ ರಾಮಕೃಷ್ಣಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾ ಗಿ ಭರವಸೆ ನೀಡಿತ್ತು. ಅದರಂತೆ ಆಗಸ್ಟ್ 192025ರಲ್ಲಿ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ ಎಂದರು.

101 ಜಾತಿಗಳಲ್ಲಿ ಮಾದಿಗ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಬಗ್ಗೆ  ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿಯೂ ಉಲ್ಲೇಖವಾಗಿದೆ.

ನಾಗಮೋಹನ್ ದಾಸ್ ವರದಿಯಲ್ಲಿ ಪರಿಶಿಷ್ಟ ಜಾತಿಗಳನ್ನ 5 ಭಾಗಗಳಾಗಿ ವಿಂಗಡಿಸಿದ್ದರು, ಸರ್ಕಾರ 3 ಭಾಗಗಳಾಗಿ ವಿಂಗಡಿಸಿ ಒಳ ಮೀಸಲಾತಿ ಜಾರಿ ಮಾಡಿದೆ. ಅತಿ ಹಿಂದುಳಿದ ಜಾತಿಗಳಾಗಿ ಎಡಗೈ ಮತ್ತು ಸಂಬಂಧಿತ ಜಾತಿಗಳನ್ನ ಪವರ್ಗ 1ಕ್ಕೆ ಸೇರಿಸಿ ಶೇಕಡಾ 6ರಷ್ಟು ಮೀಸಲಾತಿ ನೀಡಲಾಗಿದೆ, ಬಲಗೈ ಮತ್ತು ಸಂಬಂಧಿತ ಜಾತಿಗಳನ್ನ ಪ್ರವರ್ಗ 2 ಗೆ ಸೇರಿಸಲಾಗಿದ್ದು ಶೇಕಡಾ 6 ರಷ್ಟು ಮೀಸಲಾತಿ ಮತ್ತು ಸ್ಪೃಷ್ಯ ಮತ್ತು ಅಲೆಮಾರಿ ಜಾತಿಗಳನ್ನು ಪ್ರವರ್ಗ 3ರಲ್ಲಿ ಶೇಕಡಾ 5 ರಷ್ಟು ಮೀಸಲಾತಿಯನ್ನು ಘೋಷಣೆ ಮಾಡಲಾಗಿದೆ.

ದೇವರಾಜು ಅರಸುರವರು ಮಾಡಿದ ಒಂದು ಸಣ್ಣ ತಪ್ಪಿನಿಂದ ಸ್ಪೃಷ್ಯ ಜಾತಿಗಳನ್ನು ಎಸ್ಸಿ ಪಟ್ಟಿಗೆ ಸೇರಸಲಾಗಿತ್ತು. ಅಲೆಮಾರಿ ಸಮುದಾಯ ಇವತ್ತು ಸ್ಪೃಷ್ಯ ಜಾತಿಗಳನ್ನೊಂದಿಗೆ ಪೈಪೋಟಿ ಮಾಡಲು ಸಾಧ್ಯವಿಲ್ಲ, ಅವರಿಗೆ ಶೇಕಡಾ 1 ರಷ್ಟು ಮೀಸಲಾತಿಯನ್ನ ನೀಡ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಗೈ ಮತ್ತು ಎಡಗೈ ಸಮುದಾಯದ ನಾಯಕರೊಂದಿಗೆ ಚರ್ಚಿಸುತ್ತಿದ್ದು, ಅಲೆಮಾರಿ ಸಮುದಾಯಕ್ಕೆ 1ರಷ್ಟು ಮೀಸಲಾತಿ ಸಿಗುವ ಸಾಧ್ಯತೆ ಇದೆ ಎಂದರು .

ನಾಗರಾಜು ಬಚ್ಚಹಳ್ಳಿ ಮಾತನಾಡಿ , ನಾಗಮೋಹನ್ ದಾಸ್ ಕೊಟ್ಟ ವರದಿಯನ್ನು ಸರ್ಕಾರ ಗಾಳಿಗೆ ತೂರಿ ಓಲೈಕೆ ರಾಜಕೀಯ ಮತ್ತು ಸಮುದಾಯದ ವೋಟ್ ಬ್ಯಾಂಕ್ ಗಾಗಿ ಮಣಿದಿದೆ. ಅಲೆಮಾರಿಗಳು ನಮಗಿಂತ ಕೆಟ್ಟ ಸ್ಥಿತಿಯಲ್ಲಿದ್ದಾರೆ, ಅವರನ್ನು ಸ್ಪೃಶ್ಯ ಜಾತಿಗಳಿಗೆ ಸೇರಿಸಿದ್ದಾರೆ, ಜನಸಂಖ್ಯೆಯಲ್ಲಿ ಹೆಚ್ಚಿರುವು ನಾವೇ ಅವರೊಂದಿಗೆ ಹೋರಾಟ ಮಾಡಿಕೊಂಡು ಬಂದಿದ್ದೇವೆ, ಈ ಇಂತಹ ಪರಿಸ್ಥಿತಿಯಲ್ಲಿ ಅಲೆಮಾರಿಗಳು ಸ್ಪೃಷ್ಯ ಜಾತಿಗಳೊಂದಿಗೆ ಸ್ವರ್ದಿಸಲು ಸಾಧ್ಯವೇ ಎಂದರು.

ದೇವರಾಜು ಅರಸು ನಂತರ ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯನವರ ಕಣ್ಣಿಗೆ ಪೊರೆ ಬಂದಿದೆಯಾಒಳ ಮೀಸಲಾತಿ ಕಾನೂನು ಆಗುವ ಮುನ್ನವೇ ಅಲೆಮಾರಿಗಳನ್ನ ಪ್ರವರ್ಗ 1ಕ್ಕೆ ಸೇರಿಸ ಬೇಕು, ಸೇರಿಸದಿದ್ದರೆ  ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.

  ಅಪ್ಪಕಾರನಹಳ್ಳಿ ಹನುಮಯ್ಯ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಿದೆ, ಆದರೆ ನಮಗೆ ಸಿಗಬೇಕಾದ ಪಾಲು ನಮಗೆ ಸಿಕ್ಕಿಲ್ಲ, ಶೇಕಡಾ 1 ರಷ್ಟು ಕಡಿಮೆ ಮೀಸಲಾತಿ ಸಿಕ್ಕಿರುವುದು ವೈಯಕ್ತಿವಾಗಿ ನನಗೆ ಬಹಳ ನೋವಿದೆ. 35 ವರ್ಷಗಳ ಕಾಲ ಒಳ ಮೀಸಲಾತಿಗಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ನಾವು ಕೃತಜ್ಞತೆ ಸಲ್ಲಿಸಬೇಕು, ನಮ್ಮ ಅವಿರತ ಹೋರಾಟದ ಫಲ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ ಎಂದರು. 

ಮುಖಂಡರಾದ ವೆಂಕಟೇಶ್ ಮಾತನಾಡಿ, ಒಳ ಮೀಸಲಾತಿಯ ಕೂಗು ಪ್ರಾರಂಭವಾಗಿದ್ದು ದಲಿತ ಮುಖಂಡರಾದ  ಮಂದ ಕೃಷ್ಣ ಮಾದಿಗರವರಿಂದ, ರಾಜ್ಯದಲ್ಲಿ  ಮಾದಿಗ ದಂಡೋರ ಹೋರಾಟಗಾರರ ಶ್ರಮದಿಂದ ಹೋರಾಟ ತೀವ್ರ ಸ್ವರೂಪವನ್ನು ಪಡೆಯಿತುಸ್ವಂತ ಕೆಲಸ ಬಿಟ್ಟು ಹೋರಾಟ ಮಾಡಿದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಕೆ.ಎಚ್.ಮುನಿಯಪ್ಪ. ಹೆಚ್.ಆಂಜನೇಯ, ಆಲ್ಕೋಡ್ ಹನುಮಂತಪ್ಪ, ನಾರಾಯಣಸ್ವಾಮಿಯವರ ಹೋರಾಟ ಸಹ ಒಳ ಮೀಸಲಾತಿ ಜಾರಿಯಾಗಲು ಕಾರಣವಾಗಿದೆ.ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ವಕೀಲರಾದ ಕಾಂತರಾಜು ಮಾತನಾಡಿ, ಒಳ ಮೀಸಲಾತಿಗೆ ಕಳೆದ 35 ವರ್ಷಗಳ ಹೋರಾಟ ಮಾಡಿದ ಸಮುದಾಯ ಮತ್ತು ಮೂರು ದಿನ ಹೋರಾಟ ಮಾಡಿದ ಸಮುದಾಯಕ್ಕೆ ಸಮವಾಗಿ ಶೇಕಡಾ 6ರಷ್ಟು ಮೀಸಲಾತಿಯನ್ನ ನೀಡಿರುವುದು ಅನ್ಯಾಯ. ನಮ್ಮ ಹೋರಾಟದಲ್ಲಿ ಮಡಿದವರಿಗೆ ಸಿಕ್ಕ ಫಲವೇ ಇದು. ನಮಗೆ ಇದು ತೃಪ್ತಿ ನೀಡಿಲ್ಲ, ಮತ್ತೆ ಹೋರಾಟ ಮಾಡುವ ಶಕ್ತಿ ಇಲ್ಲದ ಕಾರಣಕ್ಕೆ ಇದನ್ನೇ ಒಪ್ಪಿಕೊಳ್ಳುತ್ತೇವೆ.  ಅಲೆಮಾರಿಗಳ ಸಿಗಬೇಕಾದ 1ರಷ್ಟು ಮೀಸಲಾತಿಯನ್ನ ಕಿತ್ತುಕೊಳ್ಳಲಾಗಿದೆ. ಅವರಿಗೆ 1 ರಷ್ಟು ಮೀಸಲಾತಿಯನ್ನು ಕೊಡುವವರೆಗೂ ಮಾದಿಗ ಸಮುದಾಯ ಅವರೊಂದಿಗೆ ಇರುವುದಾಗಿ ಹೇಳಿದರು.

ರಾಮಾಮೂರ್ತಿ (ರಾಮು) ನೇರಳಘಟ್ಟ ಮಾತನಾಡಿ, ಒಳ ಮೀಸಲಾತಿಗಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ಗೌರವ ಸಲ್ಲಿಸುವೆ. ಸರ್ಕಾರ ಜಾರಿ ಮಾಡಿರುವ ಒಳ ಮೀಸಲಾತಿ ಅನ್ಯಾಯದಿಂದ ಕೂಡಿದೆ, ಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಲಾಗಿದೆ., ಅವರಿಗೆ ಒಳ ಮೀಸಲಾತಿ ಸಿಕ್ಕಾಗ ಮಾತ್ರ ನಾವು ಖುಷಿಯಿಂದ ಆಚರಿಸುತ್ತವೆ ಎಂದರು. 

ತಳವಾರ ನಾಗರಾಜು ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನ ನೀಡದೆ, ಬಲಾಢ್ಯರ ಒತ್ತಡಕ್ಕೆ ಮಣಿದು ಒಳ ಮೀಸಲಾತಿಯನ್ನು ನೀಡಿರುವುದು ನಮಗೆ ಬಹಳ ನೋವು ತಂದಿದೆ. ನಮ್ಮ ಪಾಲು ನಮಗೆ ನೀಡಿದ್ದಾರೆ ನಮ್ಮ ಮಾದಿಗ ಸಮುದಾಯ ನಿಮ್ಮನ್ನು ರಾಜರಂತೆ ಮೆರೆಸುತ್ತಿದ್ದೆವು. ಅದರೆ ಸಂಭ್ರಮಾಚರಣೆ ಮಾಡುವ ಮನಸ್ಸು ನಮಗಿಲ್ಲ.ಈ ನೋವಿನಲ್ಲೇ ನಾವು ಒಳ ಮೀಸಲಾತಿಯನ್ನು ಒಪ್ಪಿಕೊಳ್ಳುತ್ತಿದ್ದೇವೆ ಎಂದರು.

ಟಿ.ಡಿ.ಮುನಿಯಪ್ಪ ಮಾತನಾಡಿ, ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿರುವುದು ನಮಗೆ ಖುಷಿ ಇದೆ. ಆದರೆ ಖುಷಿಯಲ್ಲಿಯೂ ನೋವಿದೆ.ನಮ್ಮ ಪಾಲು ನಮಗೆ ಸಿಕ್ಕಿಲ್ಲ.ಸಿಕ್ಕಿರುವ ಪಾಲನ್ನು ನಾವು ಸ್ವೀಕರಿಸುತ್ತೇವೆ. ಒಳ ಮೀಸಲಾತಿಗಾಗಿ ಪಕ್ಷಾತೀತವಾಗಿ ಹೋರಾಟ ಮಾಡಿದ ರಾಜಕೀಯ ನಾಯಕರು, ಹೋರಾಟಗಾರರು ಮತ್ತು ಅಧಿಕಾರಿಗಳಿಗೆ ವಿಶೇಷ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.

ನಗರಸಭಾ ಸದಸ್ಯ ಶಿವಣ್ಣ ಮಾತನಾಡಿ ಜನಸಂಖ್ಯೆ ಆಧಾರದ ಮೇಲೆ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ.ಸರ್ಕಾರಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರರವರ ಶ್ರಮ ಸಹ ಇದೆ.ಒಳ ಮೀಸಲಾತಿಯನ್ನು ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವನ್ನು ದೊಡ್ಡಬಳ್ಳಾಪುರಕ್ಕೆ ಕರೆಸಿ ಅವರಿಗೆ ಸನ್ಮಾನಿಸುವ ಮೂಲಕ ನಾವು ಕೃತಜ್ಞತೆ ಸಲ್ಲಿಸಬೇಕೆಂದರು.  

ಪತ್ರಿಕಾಗೋಷ್ಠಿಯಲ್ಲಿ ನಾಗರಾಜು ಬಚ್ಚಹಳ್ಳಿ, ರಾಮಕೃಷ್ಣಪ್ಪ ದೊಡ್ಡ ತುಮಕೂರು, ವೆಂಕಟೇಶ್ ದೊಡ್ಡತುಮಕೂರು, ಹನುಮಣ್ಣ ಅಪಕಾರನಹಳ್ಳಿಟಿ ಡಿ ಮುನಿಯಪ್ಪ, ಗಂಗರಾಜು ನರಸಿಂಹನಹಳ್ಳಿ, ರಾಮು ನೇರಳಘಟ್ಟ, ನರಸಪ್ಪ ಗುಂಡುಮಗೆರೆ , ಮೈಲಾರಪ್ಪ ಎಸ್ ನಾಗೇನಹಳ್ಳಿತಳವಾರ ನಾಗರಾಜುಕೆ ನಾರಾಯಣಪ್ಪ, ಹರ್ಷ ಹಾದ್ರಿಪುರ, ಕಾಂತರಾಜು ರಾಜಘಟ್ಟ, ಮುನಿಯಪ್ಪ ಕರೀಂ ಸೊಣ್ಣೆನಹಳ್ಳಿಗಂಗರಾಜು ತಿಪ್ಪಾಪುರ ಹಾಜರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!